ಗುರುವಾರ , ಜುಲೈ 7, 2022
23 °C

ರಷ್ಯಾ ಬಾಂಬ್ ದಾಳಿಯ ನಡುವೆಯೂ ನಗುತ್ತಿದ್ದೇವೆ: ಉಕ್ರೇನ್‌ ನಟನ ಮಾರ್ಮಿಕ ಸಂದೇಶ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೀವ್: ‘ರಷ್ಯಾ ಬಾಂಬ್ ದಾಳಿಯ ನಡುವೆಯೂ ನಾವು ನಗುತ್ತಿದ್ದೇವೆ. ಯಾಕೆಂದರೆ ನಾವದನ್ನು ಎದುರಿಸುತ್ತೇವೆ’. ಇದು ಉಕ್ರೇನ್‌ ನಟ ಪಾಶಾ ಲೀ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಸಂದೇಶ. ಜತೆಗೆ ತಾವು ನಸುನಗುತ್ತಾ ಕುಳಿತಿರುವ ಚಿತ್ರವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

ಆದರೆ, ಈ ಸಂದೇಶ ಪ್ರಕಟಿಸಿದ ಕೆಲವೇ ತಾಸುಗಳಲ್ಲಿ ಅವರು ರಷ್ಯಾ ಪಡೆಗಳ ದಾಳಿಯಲ್ಲಿ ಹತರಾಗಿದ್ದಾರೆ.

ರಷ್ಯಾ ನಡೆಸುತ್ತಿರುವ ದಾಳಿಯಿಂದ ದೇಶವನ್ನು ರಕ್ಷಿಸಿಕೊಳ್ಳುವುದಕ್ಕಾಗಿ 33 ವರ್ಷ ವಯಸ್ಸಿನ ಪಾಶಾ ಲೀ ಅವರು ಕಳೆದ ತಿಂಗಳು ಉಕ್ರೇನ್ ಸಶಸ್ತ್ರ ಪಡೆಗಳಿಗೆ ಸೇರಿದ್ದರು. ಹೋರಾಟದ ಮಧ್ಯೆ ಸಿಕ್ಕ ಬಿಡುವಿನಲ್ಲಿ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು, ‘ಕಳೆದ 48 ಗಂಟೆಗಳಲ್ಲಿ ಒಂದೆಡೆ ಕುಳಿತು ಹೇಗೆ ನಮ್ಮ ಮೇಲೆ ಬಾಂಬ್ ದಾಳಿ ನಡೆಯುತ್ತಿದೆ ಎಂಬುದರ ಫೋಟೊ ತೆಗೆಯುವಷ್ಟು ಬಿಡುವು ಸಿಕ್ಕಿತು. ಆದಾಗ್ಯೂ ನಾವು ನಗಾಡುತ್ತಿದ್ದೇವೆ ಯಾಕೆಂದರೆ ನಾವಿದನ್ನು ನಿಭಾಯಿಸುತ್ತೇವೆ’ ಎಂದು ಉಲ್ಲೇಖಿಸಿದ್ದಾರೆ.

ಇರ್ಪಿನ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು