ಭಾನುವಾರ, ಮೇ 29, 2022
23 °C

ನಿರ್ಣಾಯಕ ಹಂತದಲ್ಲಿ ಕೊರೊನಾ ಸಾಂಕ್ರಾಮಿಕ– ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ

Reuters Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಎಲ್ಲಾ ರಾಷ್ಟ್ರಗಳೂ ಒಗ್ಗೂಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್‌ ಅಧನಾಮ್‌ ಗೆಬ್ರೆಯಾಸಸ್‌ ಸೋಮವಾರ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಸಾಂಕ್ರಾಮಿಕವು ಈಗ ಮೂರನೇ ವರ್ಷಕ್ಕೆ ಅಡಿಯಿಟ್ಟಿದ್ದು ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ’ ಎಂದರು.

‘ಕೊರಾನಾ ಸಾಂಕ್ರಾಮಿಕ ಕೊನೆಗೊಳಿಸಲು ಅಗತ್ಯವಾದ ಎಲ್ಲಾ ಸಾಧನಗಳೂ ಈಗ ನಮ್ಮ ಬಳಿ ಇವೆ. ಆತಂಕ ಮತ್ತು ನಿರ್ಲಕ್ಷ್ಯದ ನಡುವೆ ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದು ಸರಿಯಲ್ಲ’ ಎಂದು ಹೇಳಿದರು.

ಜರ್ಮನಿಯ ಅಭಿವೃದ್ಧಿ ಸಚಿವ ಸ್ವೆನ್‌ಜಾ ಮಾತನಾಡಿ, ಜಾಗತಿಕವಾಗಿ ಈ ಸೋಂಕನ್ನು ಕೊನೆಗಾಣಿಸುವುದು ಜರ್ಮನಿಯ ಆದ್ಯತೆ ಆಗಿದೆ. ವಿಶ್ವದಾದ್ಯಂತ ಲಸಿಕೆಯ ಆಂದೋಲನವೇ ನಡೆಯಬೇಕಿದೆ ಎಂದು ತಿಳಿಸಿದರು. ಜರ್ಮನಿಯು ಜಿ7  ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು