ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಲಸಿಕೆಯ ತುರ್ತು ಬಳಕೆಗೆ ಡಬ್ಲ್ಯುಎಚ್ಒ ಅನುಮೋದನೆ

Last Updated 19 ಮೇ 2022, 14:42 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ(ರಾಯಿಟರ್ಸ್): ಚೀನಾ ಮೂಲದ ಒಂದು ಡೋಸ್ ಲಸಿಕೆಯಾಗಿರುವ 'ಕಾನ್ವಿಡೆಸಿಯಾ'ದ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಪಡೆದ 11ನೇ ಲಸಿಕೆಯಾಗಿ ಕಾನ್ವಿಡೆಸಿಯಾ ಹೊರಹೊಮ್ಮಿದೆ.

ಈ ಲಸಿಕೆಯನ್ನು ಚೀನಾದ ಕ್ಯಾನ್‌ಸಿನೊ ಬಯೋಲಾಜಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಯು ಕೋವಿಡ್ ಲಕ್ಷಣ ಇರುವ ಸೋಂಕಿತರಲ್ಲಿ ಶೇ 64ರಷ್ಟು ಹಾಗೂ ಹೆಚ್ಚು ತೀವ್ರತೆಯ ಸೋಂಕಿನ ವಿರುದ್ಧ ಶೇ 92ರಷ್ಟು ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT