ಗುರುವಾರ , ಮಾರ್ಚ್ 4, 2021
24 °C

ಅಮೆರಿಕ: ಡ್ರಗ್ ಕಿಂಗ್‌ಪಿನ್‌ ‘ಎಲ್‌ ಚಾಪೊ‘ ಪ‍ತ್ನಿ ಬಂಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ತನ್ನ ಪತಿಗೆ ಬಹುಕೋಟಿ ಡಾಲರ್‌ ವಹಿವಾಟಿನ ಮಾದಕ ವಸ್ತುಗಳ ವ್ಯವಹಾರಕ್ಕೆ ಸಹಾಯ ಮಾಡಿದ ಮತ್ತು 2015ರಲ್ಲಿ ಮೆಕ್ಸಿಕೊ ಜೈಲಿನಿಂದ ಪತಿ ತಪ್ಪಿಸಿಕೊಳ್ಳಲು ಪಿತೂರಿ ನಡೆಸಿದ ಆರೋಪದ ಮೇಲೆ ಡ್ರಗ್‌ ಕಿಂಗ್‌ಪಿನ್‌ ಜೊವಾಕ್ವಿನ್‌ ಎಲ್‌ ಚಾಪೊ ಗುಜ್ಮನ್ ಅವರ ಪತ್ನಿಯನ್ನು ಸೋಮವಾರ ಬಂಧಿಸಲಾಗಿದೆ.

'ಮಾಜಿ ಸೌಂದರ್ಯ ರಾಣಿ' ಎಮ್ಮಾ ಕರೋನೆಲ್ ಐಸ್‌ಪುರೊ ಬಂಧಿತ ಆರೋಪಿ. ಇವರನ್ನು ವರ್ಜೀನಿಯಾದ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧಿತ ಕರೋನೆಲ್‌, ಅಮೆರಿಕ ಹಾಗೂ ಮೆಕ್ಸಿಕೊದ ಪ್ರಜೆ.

ಕರೋನೆಲ್ ಬಂಧನದಿಂದಾಗಿ, ಸಿನಾಲೋವಾ ಮಾದಕ ವಸ್ತುಗಳ ಮಾರಾಟ ಜಾಲದ ಮಾಜಿ ನಾಯಕ ಗುಜ್ಮನ್ ರಕ್ತಸಿಕ್ತ ಕಥೆಗೆ ಹೊಸ ತಿರುವು ಸಿಕ್ಕಂತಾಗಿದೆ. ಗುಜ್ಮನ್, 2015ರಲ್ಲಿ ಸಿನಿಮೀಯ ಶೈಲಿಯಲ್ಲಿ ಎರಡು ಬಾರಿ ಮೆಕ್ಸಿಕೊದ ಜೈಲಿನಿಂದ ತಪ್ಪಿಸಿಕೊಂಡಿದ್ದ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು