ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಶಾಲೆಗಳು ಇನ್ನೂ ಒಂದು ವಾರ ಬಂದ್‌

ಇಂಧನ ಕೊರತೆ ಹಿನ್ನೆಲೆಯಲ್ಲಿ ನಿರ್ಧಾರ
Last Updated 4 ಜುಲೈ 2022, 16:16 IST
ಅಕ್ಷರ ಗಾತ್ರ

ಕೊಲಂಬೊ (ಎಪಿ): ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ತೀವ್ರ ತೈಲ ಅಭಾವ ಸೃಷ್ಟಿಯಾಗಿರುವ ಕಾರಣದಿಂದ ಶಾಲೆಗಳನ್ನು ಇನ್ನೂ ಒಂದು ವಾರ ಮುಚ್ಚಲು ನಿರ್ಧರಿಸಲಾಗಿದೆ.

ಇಂಧನ ಕೊರತೆಯಿಂದ ಕಳೆದ ತಿಂಗಳು ದೇಶದಾದ್ಯಂತ ಒಂದು ದಿನ ಶಾಲೆಗಳನ್ನು ಮುಚ್ಚಲಾಗಿತ್ತು.ಬಳಿಕ ಕಳೆದ ಎರಡು ವಾರಗಳಿಂದ ನಗರ ಪ್ರದೇಶದ ಶಾಲೆಗಳನ್ನು ಮುಚ್ಚಲಾಗಿದ್ದು, ಮುಂದಿನ ಶುಕ್ರವಾರದ ವರೆಗೂ ಬಂದ್‌ ಆಗಿರಲಿವೆ.

‘ಪೂರೈಕೆದಾರರು ಸಾಲದ ಮೇಲೆ ಇಂಧನ ಮಾರಾಟ ಮಾಡಲು ಸಿದ್ಧರಿಲ್ಲ. ಲಭ್ಯವಿರುವ ದಾಸ್ತಾನು ಕೆಲವು ದಿನಗಳಿಗೆ ಮಾತ್ರ ಸಾಲುತ್ತದೆ. ಅದನ್ನು ಆರೋಗ್ಯ, ಸಾರ್ವಜನಿಕ ಸಾರಿಗೆ, ಆಹಾರ ವಿತರಣೆ ಸೇರಿದಂತೆ ಅಗತ್ಯ ಸೇವೆಗಳಿಗೆ ಒದಗಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆಹೊರ ದೇಶಗಳಲ್ಲಿ ದುಡಿಯುತ್ತಿರುವ ದೇಶದ ನಾಗರಿಕರು ಇಂಧನ ಖರೀದಿಗೆ ಹಣ ನೀಡುವಂತೆ ಇಂಧನ ಸಚಿವ ಕಾಂಚನ ವಿಜೆಸೆಕೆರಾ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT