ಮಂಗಳವಾರ, ಫೆಬ್ರವರಿ 25, 2020
19 °C

Valentine Day | ಪ್ರೇಮ ನಿವೇದಿಸಿಕೊಳ್ಳಲು ಧೈರ್ಯ ಸಾಲದೆ ತಡವರಿಸಿದ್ದೆ

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಇದು ನನ್ನ ಮೊದಲ ಪ್ರೇಮ ನಿವೇದನೆ. ಇದನ್ನು ಈ ದಿನ ಹಂಚಿಕೊಳ್ಳಲು ಉತ್ಸಾಹಕನಾಗಿದ್ದೇನೆ. ನನಗೀಗ ಮದುವೆಯಾಗಿ ಒಂದು ಮಗುವಿದೆ. ನನ್ನ 22ನೇ ವಯಸ್ಸಿನಲ್ಲಿ ನನಗೆ ಪ್ರೇಮಾಂಕುರವಾಗಿ, ಪ್ರೇಮ ನಿವೇದನೆಯನ್ನು ನನ್ನವಳಲ್ಲಿ ನಿವೇದಿಸಿಕೊಂಡಿದ್ದೆ.

ಆ ಸಂದರ್ಭವನ್ನು ನೆನೆದರೆ ಈಗಲೂ ನನ್ನ ಮೈ ರೋಮಾಂಚನಗೊಳ್ಳುತ್ತದೆ.

ಈ ಹಿಂದೆ ನಾನು ಒಂದು ಎನ್‌ಜಿಒದಲ್ಲಿ ಕೆಲಸದಲ್ಲಿದ್ದೆ. ಸದರಿ ಎನ್‌ಜಿಒ ಕಚೇರಿಯ ಕಾಂಪೌಂಡ್ ಒಳಗೆ ಕಾಲೇಜು ಇತ್ತು. ಅಲ್ಲಿ ಹಲವಾರು ಹುಡುಗಿಯರಿದ್ದರು. ಪ್ರಥಮ ವರ್ಷಕ್ಕೆ ಹಾಜರಾಗಿದ್ದ ಹುಡುಗಿಯರ ಗುಂಪಿನಲ್ಲಿ ಒಂದು ಹುಡುಗಿಯ ನಗು, ನಡತೆ, ನಯ ಹಾಗೂ ನಾಜುಕುಗಳು ನಾನು ಆಕೆಯನ್ನು ಆಕರ್ಷಿಸುವಂತೆ ಮಾಡಿತು. 

ಪ್ರತಿ ದಿನ ಆಕೆಯನ್ನು ನೋಡುವ ಹಂಬಲ. ಕಾತುರ ಹೆಚ್ಚಾಗುತ್ತಿ‌ತ್ತು. ನನ್ನದು ಸ್ವಲ್ಪ ಸಂಕೋಚ ಮನೋಭಾವ. ಅದರಲ್ಲೂ, ದಾರಿಯಲ್ಲಿ ಯಾರಾದರು ಹುಡುಗಿಯರು ವಿಳಾಸ ಕೇಳಿದರೆ ಹೇಳಲು ತಡವರಿಸುವವ. ಹಾಗಾಗಿ ನಾನು ಆಕೆಯನ್ನು ಮಾತನಾಡಿಸುವುದಿರಲಿ ಹತ್ತಿರ ಹೋಗಲೂ ತುಂಬಾ ಭಯಪಡುತ್ತಿದ್ದೆ.

ಹೇಗೆ ಆಕೆಯ ಹತ್ತಿರ ಹೋಗಿ ಪ್ರೇಮ ನಿವೇದನೆ ಮಾಡುವುದು? ಎಂದು ನಾನು ಯೋಚಿಸಿದೆ. ಇರುವ ಅನೇಕ ಯೋಚನೆಗಳು ಯಾವುದೂ ಕಾರ್ಯಗತವಾಗುತ್ತಿರಲಿಲ್ಲ. ಇದರ ಮಧ್ಯೆ ನನ್ನ ಸ್ನೇಹಿತರು ಬೇರೆ. ಅವಳು ನಿನಗೆ ಸರಿ ಹೊಂದುವುದಿಲ್ಲವೆಂದು. ಆಕೆಗೆ ನೀನು ಪ್ರೇಮ ನಿವೇದನೆ ಹೇಳಲು ಸಾಧ್ಯವಾಗುವುದಿಲ್ಲವೆಂದು ಪ್ರತಿದಿನ, ಪ್ರತಿಕ್ಷಣ ರೇಗಿಸುತ್ತಿದ್ದರು.

ಹಾಗಾಗಿ, ಆ ಒಂದು ದಿನ ಇದೆಲ್ಲದಕ್ಕೂ ಅಂತ್ಯ ಹಾಡಲು ನಿರ್ಧರಿಸಿದೆ.

ದೂರದಲ್ಲಿ ಒಂದು ಗುಂಪು ಹುಡುಗಿಯರದು. ಅದರಲ್ಲಿ ನನ್ನ ಹುಡುಗಿ. ಆ ಗುಂಪಿನಲ್ಲಿದ್ದ ಸಿನಿಯರ್ ಹುಡುಗಿಯೊಬ್ಬರು ನನ್ನ ದೂರದ ಸಂಬಂಧಿ. ಹಾಗಾಗಿ ಆಕೆ ನನ್ನನ್ನು ನೋಡಿದರೆ ಅಣ್ಣ ಎಂದು ಗೌರವ ಕೊಡುತ್ತಿದ್ದಳು. ಅದೇ ಸಂದರ್ಭಕ್ಕೆ ನಾನು ಮತ್ತು ನನ್ನ ಸ್ನೇಹಿತರ ಗುಂಪು ಹತ್ತಿರ ಹೋಗುತ್ತಿದಂತೆ ಆ ಗುಂಪಿನ ಹುಡುಗಿರು ನಮ್ಮನ್ನು ಮಾತನಾಡಿಸುತ್ತಾ 'ಸರ್. ಊಟ ಆಯ್ತಾ ಎಂದರು. ನಾನು 'ಆಯ್ತು' ಎಂದೇ.

ಅದೇ ಸಮಯಕ್ಕೆ ನನ್ನ ಹುಡುಗಿ ನನ್ನನ್ನು ಕಳ್ಳಗಣ್ಣಿನಿಂದ ನೋಡಲು..! ಆಹಾ ಇಂತ ಸಂದರ್ಭ ಮತ್ತೆ ಸಿಗದೆಂದು ಯೋಚಿಸಿ, ‘ಮೇಡಂ ನಿಮ್ಮ ಹಾಗೇ ನಮ್ ಊರಿಲ್ಲಿ ಒಬ್ಬರು ಆಂಟಿ ಇದ್ದಾರೆ. ಸೇಮ್ ಟು ಸೇಮ್, ಬೇಕಾದರೆ ನಿಮ್ಮ ಫೋಟೊ ಇದ್ರೆ ಕೊಡಿ. ಅವರ ಫೋಟೊ ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿಯೇ ಬಿಟ್ಟೆ.

ಉಫ್...... ಈಗಲೂ ಅದನ್ನು ನೆನೆದರೆ ನನಗದು ದೊಡ್ಡ ಸಾಧನೆ ಅನಿಸುತ್ತದೆ. ಅದರೆ, ಅಲ್ಲೇ ಇದ್ದ ನನ್ನ ಸ್ನೇಹಿತರಿಗೆ ದಿಗ್ಬ್ರಮೆ. ನನಗೆ ಓ.. ಓ.. ಎಂದು ಕೂಗುತ್ತ ಪರಿಸ್ಥಿತಿಯನ್ನು ಬೇರೆ ರೀತಿ ಪರಿವರ್ತಿಸಿದರು. ಇದನ್ನು ಕೇಳಿ ನನ್ನ ಹುಡುಗಿ ಸಮ್ಮನಿರಲಿಲ್ಲ. ಮೊದಲು ಅವರ ಫೋಟೊ ತೆಗೆದುಕೊಂಡು ಬನ್ನಿ ಎಂದು ಹೇಳಿ ಹೋದರು.

ಇದೆಲ್ಲ ಮುಗಿದ ನಂತರ ಆಕೆ ಸಿಕ್ಕಾಗಲೆಲ್ಲ ಪೋಟೊ ಎಂದು ಪೀಡಿಸುತ್ತಿದ್ದೆ. ಒಮ್ಮೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಆಕೆ ನನ್ನ ಹತ್ತಿರ ಬಂದು ಕೂತಾಗ ನನ್ನ ಮಾತೇ ಹೊರಡಲಿಲ್ಲ.

ಹೀಗೆ 8 ತಿಂಗಳು ಕಳೆಯಿತು. ನಾನು ಬೇರೆ ಕೆಲಸಕ್ಕೆ ಒಂದು ತಿಂಗಳ ನಂತರ ಬೆಂಗಳೂರಿಗೆ ಹೋಗಬೇಕು. ಇನ್ನು ತಡ ಮಾಡಲಾರೆ ಎಂದು ಆಕೆಯನ್ನು ಹುಡುಕಿ ಆಕೆ ಹಾಸ್ಟೆಲ್ ಬಳಿ ಹೋಗುವ ಧೈರ್ಯ ಸಾಲದೇ ವಾಪಸ್ ಬರುತ್ತಿದ್ದೆ.

ಆ ದಿನ ನನಗೆ ಇನ್ನು ನೆನಪಿದೆ. 07 ಡಿಸೆಂಬರ್, 2010 ಏಕೆಂದರೆ 07 ನನ್ನ ಲಕ್ಕಿ ನಂಬರ್ ನಿರ್ಧರಿಸಿದೆ.

ನಿವೇದನೆಗೆ ಬೆಳಿಗ್ಗೆ 06.00 ಗಂಟೆಗೆ ಒಂದು ಪ್ರೇಮ ಪತ್ರ ಸಿದ್ದವಾಗಿತ್ತು. ಆಕೆ ಒಬ್ಬಳೇ ಬರುವಳೆಂದು ಕಾದೆ. ಅವಳು ಬರಲಿಲ್ಲ. ಕೊನೆಗೆ ನಾನು ನಾಳೆ ಬೆಂಗಳೂರಿಗೆ ಹೋಗಲು ಇಂದು ಊರಿಗೆ ಹೋಗಬೇಕಾಗಿತ್ತು. ಅದಕ್ಕಾಗಿ ಆಕೆ ಹಾಸ್ಟೆಲ್ ಒಳಗೆ ಹೋಗಿ ಲೇಟರ್ ನೀಡಿದೆ. ಧೈರ್ಯಂ ಸರ್ವತ್ರ ಸಾಧನಂ, ಸಂಜೆ ಊರಿಗೆ ತಲು‍ಪುತ್ತಿದ್ದಂತೆ ಫೋನ್.......

ನನ್ನವಳ ಪಡೆದೆ, ಮದುವೆಯಾದೇ ಈಗ ನನ್ನ ಚಿಕ್ಕ ಸಂಸಾರ ಆನಂದವಾಗಿದ್ದೇವೆ. 

–ಇಂತಿ, ಪ್ರೇಮಿ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು