ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Day | ಜಾತ್ರೆಯಲ್ಲಿ ಹೇಳಿದ 'ಐ ಲವ್ ಯೂ'

Last Updated 13 ಫೆಬ್ರುವರಿ 2020, 13:42 IST
ಅಕ್ಷರ ಗಾತ್ರ

ಅದು ಸುಮಾರು 2010-11ನೇ ಇಸವಿ. ನಾನು ಆಗ ತಾನೆ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಥಮ ಪಿಯಸಿ ಸೇರಿದ್ದೆ. ಆಗತಾನೆ ನನ್ನ ಮುಖದಲ್ಲಿ ಮೀಸೆಗಳು ಚಿಗುರೊಡೆಯುತ್ತಿದ್ದು ಹರೆಯ ಎನ್ನುವುದನ್ನು ತೋರಿಸುತ್ತಿದ್ದವು. ನಾನು ಪ್ರತಿನಿತ್ಯ ಕಾಲೇಜಿಗೆ ಹೋಗುವ ಮಾರ್ಗ ಮಧ್ಯೆ ಒಂದು ತಳ್ಳು ಗಾಡಿಯ ಟಿಫನ್ ಹೋಟೆಲ್‌ಗೆ ಹೋಗುತ್ತಿದ್ದೆ. ಆ ಹೋಟೆಲ್ಲಿನ ಯಜಮಾನನಿಗೆ ಒಬ್ಬ ಮುದ್ದಾದ ಮಗಳು. ಅವಳ ಹೆಸರು ದೀಪ(ಹೆಸರು ಬದಲಿಸಿದೆ). ದಿನಂ ಪ್ರತಿ ಅವಳ ಮುಖ ನೋಡದೇ ಕಾಲೇಜಿಗೆ ಹೋಗುತ್ತಿರಲಿಲ್ಲ.

ಅವಳು ಸಹ ನಾನು ಬರುವುದು ಸ್ವಲ್ಪ ತಡವಾದರೂ ಹೋಟೆಲ್ ಬಳಿಯೇ ಕಾದು ಕುಳಿತಿರುತಿದ್ದಳು. ನಮ್ಮ ಕಣ್ಣ ನೋಟ, ಮಂದಹಾಸ ಪ್ರತಿನಿತ್ಯ ನಡೆಯತೊಡಗಿತು. ಇದರಿಂದ ಅವಳಿಗೆ ನನ್ನ ಮೇಲೆ ಪ್ರೀತಿಯಾಗಿದೆ ಎಂದು ಒಳಗೊಳಗೇ ಖುಷಿ ಪಡುತ್ತಿದ್ದೆ. ರಜಾ ದಿನದಲ್ಲಿ ಸುಖಾಸುಮ್ಮನೆ ಅವರ ಮನೆ ಮುಂದೆ ಸುತ್ತುತ್ತಿದ್ದೆ. ಹೇಗಾದರೂ ಅವಳನ್ನು ಮಾತನಾಡಿಸಬೇಕೆಂಬ ಶತ ಪ್ರಯತ್ನ ನನ್ನ ಹೆದರಿಕೆಯಿಂದ ವಿಫಲವಾದವು.

ಒಮ್ಮೆ ಪಕ್ಕದೂರಿನ ಜಾತ್ರೆಗೆ ಪಾದಯಾತ್ರೆಗೆ ಹೋಗುವ ಸಮಯ ಬಂದಿತು. ಆ ದಿನ ಹೇಗಾದರೂ ಮಾಡಿ ಅವಳಿಗೆ ಪ್ರೇಮ ನಿವೇದನೆ ಮಾಡಬೇಕು ಎಂದು ದೈರ್ಯ ಮಾಡಿದೆ. ಕವನದ ಪತ್ರದೊಂದಿಗೆ ಗುಲಾಬಿ ಹೂವನ್ನು ಹಿಡಿದು ಪಾದ ಯಾತ್ರೆ ಹೊರಟೆ ಗುಂಪಾಗಿ ಹೋಗುತ್ತಿದ್ದ ಯಾತ್ರೆಯಲ್ಲಿ ನಾ ಕಂಡ ಒಡನೇ ಅವಳು ಸ್ವಲ್ಪ ನಿಧಾನಕ್ಕೆ ನಡೆಯ ತೊಡಗಿ ಹಿಂದೆ ಉಳಿದಳು. ನಾನು ತಡ ಮಾಡದೇ ಅವಳ ಕೈಗೆ ಪತ್ರ ಮತ್ತು ಹೂವನ್ನು ಇಟ್ಟು ಐ ಲವ್ ಯೂ ಎಂದು ಹೇಳಿ ಹೊರಟು ಹೋದೆ.

ಮತ್ತೆ ಜಾತ್ರೆಯಲ್ಲಿ ಸಿಕ್ಕ ಅವಳು ನನಗೊಂದು ಕೈ ಗಡಿಯಾರವನ್ನು ಕೊಟ್ಟು ಐ ಲವ್ ಯೂ ಟೂ ಎಂದು ಹೇಳಿ ಹೊರಟು ಹೋದಳು. ಕಾಲ ಕ್ರಮೇಣ ಈ ವಿಷಯ ಅವರ ಮನೆಯಲ್ಲಿ ತಿಳಿದು, ಸಂಬಂದಿಕನೊಬ್ಬನಿಗೆ ವಿವಾಹ ಮಾಡಿಕೊಟ್ಟು ಊರನ್ನೇ ತೊರೆದರು. ನನ್ನ ಜೀವನದ ಮೊದಲ ಮತ್ತು ಕೊನೆಯ ಪ್ರೀತಿ ಅದೇ ಆಗಿತ್ತು. ನಾನೀಗ ಕೇಂದ್ರ ಸರ್ಕಾರಿ ರೈಲ್ವೇ ನೌಕರನಾಗಿದ್ದೇನೆ.

-ನಚಿಕೇತ್. ಹೆಚ್,ಲಕ್ಕಂಪುರ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT