ಮಂಗಳವಾರ, ಏಪ್ರಿಲ್ 13, 2021
23 °C

ಶಾಸಕ ಮಾಲೀಕಯ್ಯ ಒಳ್ಳೆಯವರು: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: `ತಾಲ್ಲೂಕಿನಲ್ಲಿನ ಮನೆಗಳ ಹಂಚಿಕೆಯಲ್ಲಿ ಶಾಸಕ ಮಾಲಿಕಯ್ಯ ಗುತ್ತೇದಾರ ಯಾವ ತಪ್ಪು ಮಾಡಿಲ್ಲ. ನಾಲ್ಕು ಸಲ ಶಾಸಕರಾಗಿ ಒಂದು ಬಾರಿ ಸಚಿವರಾಗ್ದ್ದಿದ ಅವರು ಒಳ್ಳೆಯವರು. ಒಬ್ಬರಿಗೂ ಕೆಟ್ಟದ್ದನ್ನು ಬಯಸಿದವರಲ್ಲ~ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಅವರು, ಮನೆಗಳ ಹಂಚಿಕೆಯಲ್ಲಿ ತಾರತಮ್ಯವಾಗಿದೆ, ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ನೀಡಿರುವ ಹಕ್ಕು ಪತ್ರಗಳನ್ನು ರದ್ದುಪಡಿಸಿ ಎಂದು ವಿವಿಧ ಗ್ರಾಮಸ್ಥರು ಮತ್ತು ಜಿ.ಪಂ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಈ ಮಾತು  ಹೇಳಿದ್ದಾರೆ.

`ತಾಲ್ಲೂಕಿಗೆ ಈ ಹಿಂದೆ 3500 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇನ್ನೂ 3000 ಮನೆಗಳನ್ನು  ಮಂಜೂರು ಮಾಡುವೆ. ತಹಸೀಲ್ದಾರರು, ತಾ.ಪಂ ಅಧಿಕಾರಿಗಳು ಆಯಾ ಗ್ರಾಮಗಳಿಗೆ ತೆರಳಿ ಪ್ರಾಮಾಣಿಕವಾಗಿ ಮನೆ ವಿತರಣೆ ಮಾಡಿ, ಈ ಹಿಂದೆ ನೀಡಿರುವ ಮನೆಗಳ ಯಾದಿಯಲ್ಲಿ ಅನುಕೂಲಸ್ಥರು ಸೇರಿಕೊಂಡಿದ್ದರೆ ಕಿತ್ತಿ ಬಿಸಾಕಿ~ ಎಂದು ವಸತಿ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

`ನಾನು ಅಗಸ್ಟ್ 30 ರಂದು  ಮತ್ತೆ ಅಫಜಲಪುರಕ್ಕೆ ಬರುತ್ತೇನೆ,ಆ ದಿನ ಶಾಸಕ ಮಾಲೀಕಯ್ಯ ಗುತೇದ್ದಾರ ಹಾಗೂ ಮಾಜಿ ಶಾಸಕ ಎಂ.ವೈ.ಪಾಟೀಲ ಅವರನ್ನ ಕರೆಯಿಸಿ ಇಬ್ಬರ ಸಮ್ಮುಖದಲ್ಲಿ ಮನೆಗಳ ವಿತರಣೆಯಲ್ಲಾದ ತಾರತಮ್ಯ ನಿವಾರಿಸಲಾಗುವುದು~ ಎಂದು ಅವರು ದೂರು ನೀಡಿದವರಿಗೆ ತಿಳಿಸಿದರು.

`ನಾನು ಬರುವುದರೊಳಗಾಗಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪ್ರಾಮಾಣಿಕ ಸಮೀಕ್ಷೆ ಮಾಡಿ ಮನೆ ನೀಡುತ್ತಾರೆ. ಯಾರಿಗೂ ಹಣ ಕೊಡಬೇಡಿ. ಅಧಿಕಾರಿಗಳು ತಪ್ಪು ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು~ ಎಂದ ಅವರು, ಮನೆ ದೊರೆಯದೆ ಅನ್ಯಾಯಕ್ಕೆ ಒಳಗಾದ ಜನರಿಗೆ ಭರವಸೆ ನೀಡಿದರು.

ಮುಖಭಂಗ:  `ಮನೆಗಳ ಹಂಚಿಕೆಯಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ತಾರತಮ್ಯ ಮಾಡಿಲ್ಲ~ ಎಂದ ವಸತಿ ಸಚಿವ ಬಿ ಸೋಮಣ್ಣ, ಅವರ ಕಾರ್ಯವೈಖರ್ಯ ಕೊಂಡಾಡಿದ್ದರಿಂದ, ಶಾಸಕರ ವಿರುದ್ಧ ದೂರು ನೀಡಿದ್ದ ರಾಜಕಿಯ ನಾಯಕರಿಗೆ, ಕಾರ್ಯಕರ್ತರಿಗೆ ಮುಖಭಂಗವಾದಂತಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವೈ.ಪಾಟೀಲ, ಜಿ ಪಂ.ಸದಸ್ಯರಾದ ಪ್ರಕಾಶ ಜಮಾದಾರ, ಮತೀನ ಪಟೇಲ, ಸಿದ್ಧಾರ್ಥ ಬಸರಿಗಿಡದ, ತಾ.ಪಂ ಅಧ್ಯಕ್ಷೆ ಸುಜ್ಙಾನಿಬಾಯಿ ಪಾಟೀಲ, ಉಪಾದ್ಯಕ್ಷ ಶಿವಾನಂದ ಗಾಡಿಸಾಹುಕಾರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಪ.ಪಂ ಅದ್ಯಕ್ಷ ಮಳೇಪ್ಪ ಮನ್ಮಿ, ಸದಸ್ಯರಾದ ರಮೇಶ ದೇಸಾಯಿ, ಪ್ರೇಮ ಅಂಬೂರೆ, ರಾಜು ಪಾಟೀಲ, ಎ.ಪಿ.ಎಂ.ಸಿ ಸದಸ್ಯರಾದ ಚೆನ್ನಬಸಯ್ಯ ಹಿರೇಮಠ, ರಮೇಶ ನೀಲಗಾರ ಉಪಸ್ಥಿತರಿದ್ದರು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.