ಕೋಲ್ಕತ್ತ: ಉತ್ತಮ ಲಯದಲ್ಲಿರುವ ನಾಯಕಿ ಕಶ್ವಿ ಕಂಡಿಕೊಪ್ಪ ಅವರ ಮತ್ತೊಂದು ಶತಕದ ನೆರವಿನಿಂದ ಕರ್ನಾಟಕ ತಂಡ ಬಿಸಿಸಿಐ ಮಹಿಳಾ (15 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಲೀಟ್ ಗುಂಪಿನ ಪಂದ್ಯದಲ್ಲಿ ಗುರುವಾರ ರಾಜಸ್ಥಾನ ತಂಡದವನ್ನು 122 ರನ್ಗಳಿಂದ ಸೋಲಿಸಿತು.

ಮೂರನೇ ಕ್ರಮಾಂಕದ ಆಟಗಾರ್ತಿ ಕಶ್ವಿ 84 ಎಸೆತಗಳಲ್ಲಿ 121 ರನ್ ಬಾರಿಸಿದರು. ಅವರು ಈಗ ರಾಜ್ಯ ತಂಡದ ಪರ 348 ರನ್ ಗಳಿಸಿದ್ದು ಯಶಸ್ವಿ ಬ್ಯಾಟರ್ ಎನಿಸಿದ್ದಾರೆ. ಯಶಿಕಾ ಗೌಡ (55), ಶೀತಲ್ ಸಂತೋಷ್ (45) ಅವರೂ ಉಪಯುಕ್ತ ಆಟವಾಡಿ ಕರ್ನಾಟಕ ತಂಡ 35 ಓವರುಗಳಲ್ಲಿ 7 ವಿಕೆಟ್ಗೆ 233 ರನ್ ಪೇರಿಸಲು ಗಳಿಸಲು ನೆರವಾದರು.

ಹರ್ಷಿತಾ ಕೆ (10ಕ್ಕೆ4) ಅವರ ದಾಳಿಗೆ ಸಿಲುಕಿ ರಾಜಸ್ಥಾನ 35 ಓವರುಗಳಲ್ಲಿ 8 ವಿಕೆಟ್ಗೆ 111 ರನ್ ಗಳಿಸಿ ಹೋರಾಟ ಮುಗಿಸಿತು.

ಸತತ ನಾಲ್ಕನೇ ಗೆಲುವಿನೊಡನೆ ಕರ್ನಾಟಕ ತಂಡವು ಆರು ತಂಡಗಳ ಡಿ ಗುಂಪಿನಲ್ಲಿ 16 ಅಂಕಗಳೊಡನೆ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಮುಂದಿನ ಪಂದ್ಯವನ್ನು ಇದೇ 10ರಂದು ಮಣಿಪುರ ವಿರುದ್ಧ ಆಡಲಿದೆ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 35 ಓವರುಗಳಲ್ಲಿ 7ಕ್ಕೆ 233 (ಶೀತಲ್ ಸಂತೋಷ್ 45, ಕಶ್ವಿ ಕಂಡಿಕೊಪ್ಪ 121, ಯಶಿಕಾ ಕೆ.ಗೌಡ 55; ಆರತಿ 31ಕ್ಕೆ2); ರಾಜಸ್ಥಾನ: 35 ಓವರುಗಳಲ್ಲಿ 8 ವಿಕೆಟ್ಗೆ 111 (ಸಾರಿಕಾ ಸೋನಿ 34, ಹರ್ಷಿತಾ 10ಕ್ಕೆ4, ನೇಸರ ಸಪ್ತಾ ಗಿರೀಶ್ 13ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.