ಶನಿವಾರ, ಏಪ್ರಿಲ್ 10, 2021
29 °C

ಗುಣಮಟ್ಟ ಚರಂಡಿ ಕಾಮಗಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಣಮಟ್ಟ ಚರಂಡಿ ಕಾಮಗಾರಿಗೆ ಒತ್ತಾಯ

ವಾಡಿ: ಯಾದಗಿರಿ ಹೆದ್ದಾರಿ ಮುಖ್ಯ ರಸ್ತೆಯ ಎರಡು ಬದಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಚರಂಡಿ ಕಾಮಗಾರಿಯನ್ನು ಗುಣಮಟ್ಟದ್ದಾಗಿರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.`ಪಟ್ಟಣದ ಯಾದಗಿರಿ ಹೆದ್ದಾರಿ ಮುಖ್ಯ ರಸ್ತೆ ರೈಲ್ವೆ ಸೇತುವೆಯಿಂದ ಬಲರಾಮ್ ಚೌಕ್‌ದವರೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಚರಂಡಿ ಕಾಮಗಾರಿಯಲ್ಲಿ ಸಿಮೆಂಟ್‌ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

ಮತ್ತು  ಸರಿಯಾದ ಪ್ರಮಾಣದ ಕಬ್ಬಿಣದ ಸರಳುಗಳನ್ನು ಹಾಕುತ್ತಿಲ್ಲ. ಇದರಿಂದ ಕಾಮಗಾರಿ ಕಳಪೆಯಾಗಿ ಅವಧಿಗೆ ಮೊದಲೇ ಚರಂಡಿ ಒಡೆಯುತ್ತದೆ~ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಮಳೆಗಾಲದಲ್ಲಿ ಚರಂಡಿ ತುಂಬಿ ಹರಿಯುತ್ತದೆ. ಆದ್ದರಿಂದ ಮಳೆ ನೀರು ರಸ್ತೆ ಮೇಲೆ ಬರದಂತೆ ಎಚ್ಚರವಹಿಸಬೇಕು.  ಕಾಮಗಾರಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಸಿಮೆಂಟ್ ಮತ್ತು ಕಬ್ಬಿಣದ ಸರಳುಗಳನ್ನು ಬಳಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.