ವಡೋದರ: ಇಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದಲ್ಲಿ 93 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಅವರು, ಅಭಿಮಾನಿಗಳ ಕ್ರೇಜ್ನಿಂದ ಆಗುತ್ತಿರುವ ವಿಶಿಷ್ಟ ಸಮಸ್ಯೆಯೊಂದರ ಕುರಿತು ಮಾತನಾಡಿದರು. ಇದೇ ಸಮಸ್ಯೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಚಾರದಲ್ಲೂ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

301 ರನ್ ಚೇಸ್ ಮಾಡುವ ಸಂದರ್ಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಅವರು 26 ರನ್ ಗಳಿಸಿ ಔಟ್ ಆಗುತ್ತಾರೆ. ಈ ವೇಳೆ, ಕ್ರೀಡಾಂಗಣದಲ್ಲಿ ನೆರದಿದ್ದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕುವ ಮೂಲಕ ಸಂಭ್ರಮಿಸುತ್ತಾರೆ. ಕಾರಣ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಾರೆ ಎಂದು. ಕೊಹ್ಲಿಯವರು ಅಭಿಮಾನಿಗಳ ಈ ಅತಿರೇಕದ ಅಭಿಮಾನಕ್ಕೆ ಬೇಸರ ಹೊರಹಾಕಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ವಿರಾಟ್ ಕೊಹ್ಲಿಯವರಿಗೆ ಅಭಿಮಾನಿಗಳ ಹರ್ಷೋದ್ಗಾರದ ಕುರಿತು ಏನು ಹೇಳುತ್ತೀರಾ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ವಿರಾಟ್, ‘ಇಷ್ಟೊಂದು ಪ್ರೀತಿ ಕೊಡುತ್ತಿರುವುದಕ್ಕೆ ಧನ್ಯವಾದಗಳು. ಆದರೆ, ಭಾರತ ತಂಡದ ವಿಕೆಟ್ ಬಿದ್ದಾಗ ಸಂಭ್ರಮಿಸುವುದು ನನಗೆ ಇಷ್ಟವಾಗುವುದಿಲ್ಲ’ ಎಂದರು.
.IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ.IND vs NZ: ವಿರಾಟ್ ಕೊಹ್ಲಿ ಆರ್ಭಟ, ಭಾರತ ಶುಭಾರಂಭ.
‘ಭಾರತದ ಮೊದಲ ವಿಕೆಟ್ ಬಿದ್ದಾಗ ಎಲ್ಲರೂ ಖಷಿಯಿಂದ ಬೊಬ್ಬೆ ಹೊಡೆಯುತ್ತಾರೆ. ಅದು, ಔಟ್ ಆಗಿ ಹೋಗುವವರಿಗೆ ಬೇಸರ ತರಿಸಬಹುದು. ಎಂ.ಎಸ್. ಧೋನಿ ವಿಚಾರದಲ್ಲೂ ಇದೇ ತರ ಆಗಿರುವುದನ್ನು ನಾನು ನೋಡಿದ್ದೇನೆ. ಈ ವಿಚಾರಕ್ಕೆ ನನಗೆ ಬೇಸರವಿದೆ’ ಎಂದು ಅಭಿಮಾನಿಗಳ ಅತಿರೇಕದ ಪ್ರೀತಿಗೆ ವಿರಾಟ್ ಕೊಹ್ಲಿಯವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.