ಗುರುವಾರ , ಏಪ್ರಿಲ್ 15, 2021
31 °C

ತೆಂಗಿನಲ್ಲಿ ಲಕ್ಷ್ಮೀ ದೇವಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಗಡಿಭಾಗದ ಗ್ರಾಮ ಖಜೂರಿಯ ಡಾ.ಶ್ರೀನಿವಾಸ ದೇಶಮುಖರ ಮನೆಯ ತೆಂಗಿನಕಾಯಿಯಲ್ಲಿ ಕೊಲ್ಲಾಪೂರದ ಲಕ್ಷ್ಮೀ ದೇವಿ ಆಕೃತಿ ಮೂಡಿದೆ ಎನ್ನುವುದು ಸಾರ್ವಜನಿಕರಲ್ಲಿ ಕೂತಹಲ ಕೆರಳಿಸಿದೆ. ಹಬ್ಬದ ಸಡಗರದಲ್ಲಿರುವ ಗ್ರಾಮದಲ್ಲಿ ದೇವಿಯ ದರ್ಶನ ಪಡೆಯಲು ಜನ ಮುಗಿಬೀಳುತ್ತಿದ್ದಾರೆ.ವೈದ್ಯರು ಇತ್ತೀಚಿಗೆ ಕುಟುಂಬ ಸಮೇತ ಕೊಲ್ಲಾಪೂರ ದೇವಿ ದರ್ಶನಕ್ಕೆ ಹೋಗಿದ್ದರು. ಬರುವಾಗ ಪ್ರಸಾದ ರೂಪದಲ್ಲಿ ತಂದ ತೆಂಗಿನಕಾಯಿಯು ಮೋಳಕೆ ಒಡೆಯುವ ಸ್ಥಳದಲ್ಲಿಯೇ ದೇವಿ ಆಕೃತಿ ಹೊಲುವ ಚಿತ್ರ ಮೂಡಿದೆ. ಈಗ ದೇಶಮುಖರ ಮನೆಯಲ್ಲಿನ ತೆಂಗಿನಕಾಯಿಯನ್ನು ವೆಂಕಟೇಶ್ವರ ದೇವಸ್ಥಾನದಲ್ಲಿ ಇಡಲಾಗಿದೆ. ನರಕ ಚತುರ್ಥಿ ಮತ್ತು ಬಲಿಪಾಡ್ಯಮಿ ದಿನ ಅನೇಕ ಮಹಿಳೆಯರು ಅರಸಿಣ, ಕುಂಕುಮ, ಮತ್ತಿತರ ಪೂಜಾ ಸಾಮಗ್ರಿಗಳೊಂದಿಗೆ ಕೈ ಮುಗಿದು ಹೋಗುತ್ತಿವುದು ವಿಶೇಷವಾಗಿದೆ.ಬೆರಗು ಮೂಡಿಸಿದ ಈ ಘಟನೆಯಿಂದ ಉತ್ತೇಜಿತರಾಗಿರುವ ವೈದ್ಯ ದೇಶಮುಖ ಅವರು ತಮ್ಮ ಮನೆಯಲ್ಲಿ ಲಕ್ಷ್ಮೀ ದೇವಸ್ಥಾನ ನಿರ್ಮಿಸುವುದಾಗಿ `ಪ್ರಜಾವಾಣಿ~ಗೆ ತಿಳಿಸಿದರು.ಸ್ಥಳೀಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿಗಳು ವರದಿಗಾರರೊಂದಿಗೆ ಮಾತನಾಡಿದರು. ಭಕ್ತಿ ಮತ್ತು ಆಸ್ತಿಕತೆ ಅವರವರ ವೈಯಕ್ತಿಕ ನಂಬಿಕೆಗಳು. ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಮಹತ್ವವಿಲ್ಲ. ದಿನಗಳ ಮಾತ್ರ ಪ್ರಭಾವಳಿ ಕಂಡುಬರುವುದು ಎಂದಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.