ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

7

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

Published:
Updated:
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಚಿಂಚೋಳಿ: ಸಂಪದ್ಭರಿತ ಜಮೀನು ಅತಿ ಕಡಿಮೆ ಬೆಲೆಗೆ ರೈತರಿಂದ ವಶಪಡಿಸಿಕೊಂಡು ತಾಲ್ಲೂಕಿನಲ್ಲಿ ಸ್ಥಾಪನೆಯಾಗುತ್ತಿರುವ ವಿಕಾಟ್ ಸಾಗರ್ ಮತ್ತು ಚೆಟ್ಟಿನಾಡ ಸಿಮೆಂಟ್ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಕಾರ್ಯದರ್ಶಿ ಶೌಕತ್ ಅಲಿ ಆಲೂರು ಆರೋಪಿಸಿದ್ದಾರೆ.ಆರಂಭದಲ್ಲಿ ರೈತರಿಂದ ಜಮೀನು ಕೇವಲ 2.25 ಲಕ್ಷ ರೂ.ಗಳಿಗೆ ಎಕರೆಯಂತೆ ಖರೀದಿಸಿದ ಸಿಮೆಂಟ್ ಕಾರ್ಖಾನೆಗಳ ಧೋರಣೆ ಖಂಡಿಸಿದ ಅವರು, ಅನ್ಯಾಯಕ್ಕೊಳಗಾದ ರೈತರಿಗೆ ಎಕರೆಗೆ 9.5 ಲಕ್ಷ ರೂ.ಗಳ ದರದ ಆಧಾರದಲ್ಲಿ ಪರಿಹಾರ ಧನ ನಿಡಬೇಕೆಂದು ಒತ್ತಾಯಿಸಿದ್ದಾರೆ.

 

ಇಲ್ಲಿನ ಮಿನಿ ವಿಧಾನ ಸೌಧದ ಎದುರು ಬುಧವಾರ ಅಖಿಲ ಭಾರತ ಕಿಸಾನ ಸಭಾ ನಡೆಸಿದ ಧರಣಿಯ ನೇತೃತ್ವ ವಹಿಸಿದ್ದ ಅವರು, ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿಯೂ ಅನ್ಯಾಯ ಮಾಡುತ್ತಿವೆ ಎಂದರು.ಭೂಮಿ ನೀಡಿದ ಪ್ರತಿ ಕುಟುಂಬಕ್ಕೆ ಉದ್ಯೋಗ, ಕಲ್ಲೂರು ರೋಡ್, ಕರ್ಚಖೇಡ್ ಗ್ರಾಮಗಳಲ್ಲಿ ಆರೋಗ್ಯ, ಶಿಕ್ಷಣ, ಕುಡಿವ ನೀರು ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದು, ಕಾರ್ಖಾನೆಗಳಲ್ಲಿ ಈಗಾಗಲೇ ದುಡಿಯುತ್ತಿರುವ ಕಾರ್ಮಿಕರಿಗೆ ಮಹಿಳೆಯರಿಗೆ ದಿನಕ್ಕೆ 160 ರೂ. ಪುರುಷರಿಗೆ 220 ದಿನಗೂಲಿ ನೀಡಬೇಕೆಂಬುದು ಸೇರಿದಂತೆ ಒಟ್ಟು 9 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

 

ಮನವಿ ಸ್ವೀಕರಿಸಿದ ತಹಸೀಲ್ದಾರ ಪಲ್ಲವಿ ಅಕುರಾತಿ ಅವರು ಈ ಭಾಗದ ರೈತರ ಬಗ್ಗೆ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ಹೊಂದಿದ್ದು, ಅವರಿಗೆ ನಿಮ್ಮ ಬೇಡಿಕೆಗಳ ಮನವಿ ಪತ್ರ ಕಳುಹಿಸುವುದಾಗಿ ಭರವಸೆ ನೀಡಿದರು.

 

ಧರಣಿಯಲ್ಲಿ ತಾಲ್ಲೂಕು ಅಧ್ಯಕ್ಷ ಶಿವಪ್ಪ ಪೂಜಾರಿ, ಕಾರ್ಯದರ್ಶಿ ಹಣಮಂತರಾವ್ ಮೋಘಾ, ಗ್ರಾಮ ಘಟಕದ ಸುಧಾಕರ ಪಾಟೀಲ್, ತಿಪ್ಪಣ್ಣ ಇಂದೋಲ್, ಬ್ರಹ್ಮಯ್ಯ, ಝರಣಪ್ಪ, ಸತ್ಯನಾರಾಯಣ,     ನರಸಪ್ಪ ಮುಂತಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry