ಸೋಮವಾರ, ಜೂನ್ 14, 2021
21 °C

ಪ್ಲಾಸ್ಟಿಕ್‌ ಮಾರಾಟ, ಬಳಕೆ ಮುಕ್ತ... ಮುಕ್ತ!

ಮಹೇಶ ಕನ್ನೇಶ್ವರ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪ್ಲಾಸ್ಟಿಕ್‌ ತ್ಯಾಜ್ಯ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳ 2011ರಂತೆ ಪರಿಸರ ಸಂರಕ್ಷಣಾ ಕಾನೂನು 1986ರ ಅಡಿಯಲ್ಲಿ 40 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ ಚೀಲ ಬಳಕೆಗೆ ನಿಷೇಧ ಹೇರಲಾಗಿದೆ.ನಗರದ ಅಂದ ಹಾಗೂ ಪ್ರಾಣಿ, ಪಕ್ಷಿ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬಿರುವ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಆದೇಶವಿದ್ದರೂ, ಆದೇಶ ಗಾಳಿಗೆ ತೂರಿ ನಗರದ ಎಲ್ಲೆಡೆ 40 ಮೈಕ್ರಾನ್‌ ಗಳಿಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್‌ ಬಳಕೆಗೆ ಮಾಡಲಾಗುತ್ತಿದೆ. ನಗರಕ್ಕೆ ಹೈದರಾಬಾದ್‌ ನಿಂದ 40 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಚೀಲ ಮಾರಾಟಕ್ಕೆ ಇಲ್ಲಿಗೆ ವ್ಯಾಪಕವಾಗಿ ಹರಿದು ಬರುತ್ತಿವೆ. ನಗರದ ಎಲ್ಲ ಕಡೆಗಳಲ್ಲಿಯೂ ಬಳಕೆಯಾಗುತ್ತಿರುವ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪ್ಲಾಸ್ಟಿಕ್‌ಗೆ ನಿಷೇಧ ಹೇರುವ ಉದ್ದೇಶದಿಂದ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಅವಲೋಕನಾ ಸಮಿತಿ (ಸಿಟಿ ಲೆವಲ್‌ ಸ್ಟೀರಿಂಗ್‌) ರಚಿಸಲಾಗಿದೆ. ಆಯುಕ್ತರು ಸಮಿತಿ ಅಧ್ಯಕ್ಷರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ

ಅಧಿಕಾರಿ, ಉಪ ಪೊಲೀಸ್‌ ವರಿಷ್ಠಾಧಿ ಕಾರಿ, ಕ್ಷೇತ್ರ ಶಿಕ್ಷಣಧಿಕಾರಿ, ಪಿಡಿಎ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯ ಸ್ಥರು, ಕೆಬಿಎನ್‌ ಕಾಲೇಜಿನ ಸಿವಿಲ್‌ ಎಂಜಿನಿಯ ರಿಂಗ್‌ ವಿಭಾಗದ ಮುಖ್ಯಸ್ಥ, ಹೈ.ಕ ಪರಿಸರ ಸಂರಕ್ಷಣಾ ಜಾಗೃತಿ ಒಕ್ಕೂಟದ ಅಧ್ಯಕ್ಷರು ಸಮಿತಿ ಸದ್ಯಸರಾ ಗಿದ್ದಾರೆ. ಈ ಸಮಿತಿ ಅಸ್ತಿತ್ವದಲ್ಲಿದ್ದರೂ ಪ್ರಗತಿ ಮಾತ್ರ ಶೂನ್ಯ.ನಗರದ ಎಲ್ಲ ಅಂಗಡಿಗಳಲ್ಲಿ, ತರಕಾರಿ ಮಾರುಕಟ್ಟೆ, ಹಣ್ಣಿನ ವ್ಯಾಪಾರಿಗಳು, ಮೀನು ಮಾರುಕಟ್ಟೆ, ಸಂತೆಗಳಲ್ಲಿ ಪ್ಲಾಸ್ಟಿಕ್‌ ಚೀಲ ಬಳಕೆ ಹಾಗೂ ಮಾರಲಾಗುತ್ತಿದೆ. ವಿವಿಧ ಬಡಾವಣೆ, ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶದ ರಸ್ತೆಗಳು, ಚರಂಡಿಗಳು ಪ್ಲಾಸ್ಟಿಕ್‌ಮಯ ವಾಗಿವೆ. ಎಲ್ಲರ ಕೈಯಲ್ಲಿಯೂ ಪ್ಲಾಸ್ಟಿಕ್‌ ಚೀಲ ಗಳೇ ಕಾಣುತ್ತವೆ. ಚರಂಡಿ ನೀರು ಹರಿ ಯುವ ಕಾಲುವೆಗಳು ಪ್ಲಾಸ್ಟಿಕ್ ಚೀಲ, ವಸ್ತುಗಳಿಂದ ತುಂಬಿದ್ದು, ಚರಂಡಿಯಲ್ಲಿ ನೀರು ಹರಿಯಲು ಅಡ್ಡಿ ಉಂಟಾಗಿದೆ.

ಮಳೆ ಬಂದರೆ ಪ್ಲಾಸ್ಟಿಕ್ ವಸ್ತುಗಳು, ಚೀಲಗಳು ಪಕ್ಕದ ರಸ್ತೆಗೆ ಬಂದು ಬೀಳುತ್ತವೆ. ಇಲ್ಲವೇ ರಸ್ತೆಯಲ್ಲಿಯೇ ಮಳೆ ನೀರಿಗೆ ಹರಿದು ಹೋಗಿ ಅಂಗಡಿ ಮುಂಗಟ್ಟುಗಳ ಮುಂದೆ ಬಿದ್ದು ದುರ್ನಾತ ಹರಡುತ್ತಿವೆ. ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟಗಾರರ ವಿರುದ್ಧ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಯಲ್ಲಿದೆ. ಪ್ಲಾಸ್ಟಿಕ್‌ ಬಳಕೆಯಿಂ ದಾಗುವ ಹಾನಿಕಾರಕ ಅಂಶಗಳ ಬಗ್ಗೆ ಜಾಗೃತಿ ಉಂಟು ಮಾಡುವ ಕಾರ್ಯಗಳು ಪಾಲಿಕೆ ಯಿಂದ ಆಗುತ್ತಿಲ್ಲ.

ರಾಶಿ ರಾಶಿಯಾಗಿ ಬೀಳುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ದೋಷ ಕಾಣುತ್ತಿದೆ. ಜೇವರ್ಗಿ ಕ್ರಾಸ್‌್, ಸೂಪರ್‌ ಮಾರ್ಕೆಟ್‌, ಶಾಸ್ತ್ರಿ ನಗರ, ಸರ್ದಾರ್‌ ವಲ್ಲಭಭಾಯ್ ಪಟೇಲ್‌ ವೃತ್ತ, ಪಂಚಶೀಲ ನಗರ, ರಾಮನಗರ, ಬ್ರಹ್ಮಪುರ ಬಡಾವಣೆ, ಎನ್‌ಜಿಒ ಕಾಲೊನಿ, ಮಹಾವೀರ ನಗರ, ಗೋದುತಾಯಿ ಕಾಲೊನಿ, ವಿದ್ಯಾನಗರ, ಜಗತ್‌ ವೃತ್ತ, ಸಂತ್ರಸವಾಡಿ, ಆನಂದ ನಗರ ಸೇರಿದಂತೆ ಅನೇಕ ಕಡೆ ಪ್ಲಾಸ್ಟಿಕ್‌ ಚೀಲಗಳು ಕಾಣ ಸಿಗುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.