ಮಂದಾಕಿನಿ ಕುಟುಂಬಕ್ಕೆ ಪರಿಹಾರ ಚೆಕ್
ಗುಲ್ಬರ್ಗ:ಮಾನಸಿಕವಾಗಿ ನೊಂದು ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂದಾಕಿನಿ ಎಸ್. ಏಕಲೂರ ಅವರ ತಾಯಿ ಛಾಯ ಶಂಕರ ಏಕಲೂರ ಅವರಿಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಪಿ. ನಂದಗಿರಿ ಗುರುವಾರ ರೂ. 1.50 ಲಕ್ಷ ಪರಿಹಾರಧನದ ಚೆಕ್ ನೀಡಿದರು.
ಪರಿಶಿಷ್ಟ ಜಾತಿಗೆ ಸೇರಿದ ಮಂದಾಕಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಅ. 16ರಂದು ದೂರು ದಾಖಲಾಗಿದೆ. ಜಿಲ್ಲಾಧಿಕಾರಿ ಅ.19ರಂದು ಮಂದಾಕಿನಿಯ ವಾರಸುದಾರರಿಗೆ ತುರ್ತು ಪರಿಹಾರಧನ ರೂ. 1.50 ಲಕ್ಷ ಮಂಜೂರಾತಿ ಆದೇಶ ಹೊರಡಿಸಿ ಹಣ ಬಿಡುಗಡೆ ಮಾಡಿದ್ದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ಅಧೀಕ್ಷಕ ರಾಮಚಂದ್ರ, ಪ್ರಥಮ ದರ್ಜೆ ಸಹಾಯಕ ಹಣಮಂತ ಸನಗುಂದಿ, ದಲಿತ ಸಮನ್ವಯ ಸಮಿತಿ ಸಂಚಾಲಕರಾದ ಮಾಪಣ್ಣ ಗಂಜಗೇರಿ, ಭೀಮರಾಯ ಟಿ.ಟಿ, ಎ.ಬಿ.ಹೊಸಮನಿ, ಸೂರ್ಯಕಾಂತ ನಿಂಬಾಳಕರ್, ಸುಭಾಷ ಆಜಾದಪೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.