ಗುರುವಾರ , ಡಿಸೆಂಬರ್ 3, 2020
23 °C

ಸೂಪರ್ ಕಪ್ ಫುಟ್‌ಬಾಲ್ ಟೂರ್ನಿ ಇಂದಿನಿಂದ

ಪಿಟಿಐ Updated:

ಅಕ್ಷರ ಗಾತ್ರ : | |

ಭುವನೇಶ್ವರ್: ದೇಶದ ಪ್ರಮುಖ ಫುಟ್‌ಬಾಲ್ ಟೂರ್ನಿಗಳಲ್ಲಿ ಒಂದಾಗಿರುವ ಸೂಪರ್ ಕಪ್‌ನ ನಾಕೌಟ್‌ ಪಂದ್ಯಗಳು ಶುಕ್ರವಾರದಿಂದ ಇಲ್ಲಿ ನಡೆಯಲಿವೆ. 16ರ ಘಟ್ಟದ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ.

ಐ ಲೀಗ್‌ನಲ್ಲಿ ಪಾಲ್ಗೊಂಡ ಎಂಟು ತಂಡಗಳಿಗೆ ಸಂಬಂಧಿಸಿದ ಕ್ಲಬ್‌ಗಳು ಬಹಿಷ್ಕಾರ ಹಾಕಲು ನಿರ್ಧರಿಸಿದ ಕಾರಣ ಈ ಬಾರಿ ಸೂಪರ್ ಕಪ್ ಟೂರ್ನಿ ನಡೆಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನ ಮೂಡಿತ್ತು.

ದೇಶಿ ಟೂರ್ನಿಯಲ್ಲಿ ಅನುಸರಿಸುವ ಮಾದರಿಯನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಈ ಕ್ಲಬ್‌ಗಳು ಬಹಿಷ್ಕಾರಕ್ಕೆ ಮುಂದಾಗಿದ್ದವು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು