ಆರ್‌ಎಸ್‌ಎಸ್ ಟೀಕಿಸಿದರೆ ಉದ್ಧಾರವಾಗಲ್ಲ: ಈಶ್ವರಪ್ಪ ಎಚ್ಚರಿಕೆ

ಬುಧವಾರ, ಏಪ್ರಿಲ್ 24, 2019
25 °C
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ವಿರುದ್ಧ ವಾಗ್ದಾಳಿ

ಆರ್‌ಎಸ್‌ಎಸ್ ಟೀಕಿಸಿದರೆ ಉದ್ಧಾರವಾಗಲ್ಲ: ಈಶ್ವರಪ್ಪ ಎಚ್ಚರಿಕೆ

Published:
Updated:

ಬಾಗಲಕೋಟೆ: ‘ಆರ್‌ಎಸ್‌ಎಸ್‌ ಲೋಕಸಭಾ ಟಿಕೆಟ್ ಮಾರಾಟ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕೇವಲ ಪ್ರಚಾರಕ್ಕಾಗಿ ಹೇಳಿದ್ದಾರೆ. ಅವರ ಮಾತು ಸಿಂಹದ ಬಗ್ಗೆ ಇರುವೆಯೊಂದು ಕೂಗಿದ ಹಾಗಿದೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಿನೇಶ ಗುಂಡೂರಾವ್‌ಗೆ ಆರ್‌ಎಸ್‌ಎಸ್‌ ಬಗ್ಗೆ ಏನೂ ಗೊತ್ತಿಲ್ಲ. ಅದೊಂದು ಯುವಕರಿಗೆ ರಾಷ್ಟ್ರಭಕ್ತಿ ಕಲಿಸುವ ಪವಿತ್ರ ಸಂಸ್ಥೆ. ಅದು ಹಿಂದುತ್ವದ ಬಗ್ಗೆ ಹೇಳುತ್ತದೆ. ನಮ್ಮ ಜೀವನಪದ್ಧತಿಯೂ ಹೌದು. ಅಂತಹ ಸಂಘಟನೆಯ ವಿರುದ್ಧ ಟೀಕೆ ಮಾಡಿದ್ದ ಇಂದಿರಾಗಾಂಧಿ, ಜವಾಹರಲಾಲ್ ನೆಹರೂ ಉದ್ಧಾರ ಆಗಲಿಲ್ಲ. ದಿನೇಶ ಗುಂಡೂರಾವ್ ಒಬ್ಬ ನಿಕೃಷ್ಟ ರಾಜಕಾರಣಿ. ಅಂತಹವರು ನೂರು ಮಂದಿ ಬಂದರೂ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದರು.

ಮಂಡ್ಯದಲ್ಲಿ ನನ್ನ ಮಗನ ವಿರುದ್ಧ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅದೊಂದು ರಾಜಕಾರಣ. ಸಂಚು ಎಂದು ಕರೆಯೋಕಾಗೊಲ್ಲ. ರಾಜಕಾರಣದಲ್ಲಿ ಒಬ್ಬರಿಗೊಬ್ಬರನ್ನು ಸೋಲಿಸೋದು ಸಹಜ ಎಂದು ಈಶ್ವರಪ್ಪ ಹೇಳಿದರು.

ಸಿಎಂಗೆ ಮಂಡ್ಯದಲ್ಲಿ ಮಗನ ಗೆಲುವುದೊಂದು ಬಿಟ್ಟರೆ ಬೇರೆಡೆ ಆಸಕ್ತಿ ಇಲ್ಲ. ಹಾಸನ, ತುಮಕೂರಿಗೂ ಅವರು ಪ್ರಚಾರಕ್ಕೆ ಹೋಗಿಲ್ಲ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಬೆಂಬಲ ನೀಡಿದೆ ಎಂದರು.

‘ಐಟಿ ರೇಡ್ ಬಗ್ಗೆ ಮೊದಲೇ ಮಾಹಿತಿ ಬಹಿರಂಗ ಪಡಿಸಿದ್ದ ಕಾರಣಕ್ಕೆ ಸಿಎಂ ವಿರುದ್ಧ ಅಯೋಗ್ಯ ಪದ ಬಳಸಿದ್ದೆನು. ಸಿಎಂ ನೀಡಿದ ಸುಳಿವಿನಿಂದಾಗಿ ಅವರ ಶಿಷ್ಯರು ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಅದರಿಂದ ಅಯೋಗ್ಯ ಎಂದಿದ್ದೆನು.  ಆ ಪದ ಕುಮಾರಸ್ವಾಮಿಗೆ ಬೇಸರ ತಂದಿರಬಹುದು. ಹಾಗಾಗಿ ಇನ್ನು ಮುಂದೆ ಯೋಗ್ಯತೆ ಇಲ್ಲದ ಸಿಎಂ ಪದ ಬಳಸುವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 2

  Sad
 • 1

  Frustrated
 • 16

  Angry

Comments:

0 comments

Write the first review for this !