ಬಂಡೀಪುರ: ಬಿರುಸಿನ ಮಳೆ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬಂಡೀಪುರ: ಬಿರುಸಿನ ಮಳೆ

Published:
Updated:
Prajavani

ಮೈಸೂರು: ಮಂಡ್ಯ, ಚಾಮರಾಜನಗರ ‌ಜಿಲ್ಲೆಯ ಹಲವೆಡೆ ಸೋಮವಾರ ಸಂಜೆ ಸಿಡಿಲಿನ ಅಬ್ಬರದೊಂದಿಗೆ ಬಿರುಸಿನ ಮಳೆಯಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.

ಮೈಸೂರು ಜಿಲ್ಲೆಯ ಹಲವು ಭಾಗ, ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದ ಭಾಗದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಬಳಿಯ ಕಾಲುವೆಯಲ್ಲಿ ನೀರು ನದಿಯಂತೆ ಹರಿಯಿತು. ಕಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಹಾಗಲಕಾಯಿ, ಸೂರ್ಯಕಾಂತಿ ಕೊಚ್ಚಿ ಹೋಗಿವೆ.

ಮೈಸೂರಿನಲ್ಲಿ ಸಿಡಿಲಬ್ಬರ ಹೆಚ್ಚಿತ್ತು. ಎಚ್‌.ಡಿ.ಕೋಟೆಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು, ಹಲವು ಮನೆಗಳ ಗೋಡೆಗಳು ಉರುಳಿವೆ. ಇಲ್ಲಿನ ನಂಜನಾಯಕನಹಳ್ಳಿಯಲ್ಲಿ ಜಮೀನಿನಲ್ಲಿ ಕಟ್ಟಿದ್ದ ಹಸುವೊಂದು ಸಿಡಿಲಿಗೆ ಮೃತಪಟ್ಟಿದೆ.

ಜಿ.ಎಂ.ಹಳ್ಳಿ, ಸೊಳ್ಳಾಪುರ ನಂಜನಾಯಕನಹಳ್ಳಿ, ಬಸಾಪುರ ಮತ್ತು ಸಿದ್ದಾಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮನೆಗಳ ಹೆಂಚು, ಕಲ್ನಾರ್ ಶೀಟುಗಳು ಹಾರಿವೆ. ಗಿಡ–ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿವೆ.

‌ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು, ಕೊಪ್ಪದ ಬೆಸಗರಹಳ್ಳಿ, ಚೊಟ್ಟನಹಳ್ಳಿ, ಕೋಣಸಾಲೆ, ಬೆಳತೂರು, ಗೂಳೂರು ದೊಡ್ಡಿಯಲ್ಲಿ ಧಾರಾಕಾರ ಮಳೆಯಾಗಿದೆ.

ಚಳ್ಳಕೆರೆ ವರದಿ: ನಗರದಲ್ಲಿ ಸೋಮವಾರ ಸಂಜೆ 4.30 ವೇಳೆ 20 ನಿಮಿಷ ಬಿರುಗಾಳಿ ಹಾಗೂ ಮಳೆ ಸುರಿಯುತು. ಮಳೆಯಿಂದಾಗಿ ರೈತರು ಹರ್ಷಗೊಂಡರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !