ಶನಿವಾರ, ಆಗಸ್ಟ್ 8, 2020
22 °C

ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಿಸಿದ ವಿಜಯ್ ಮಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತದ ಬ್ಯಾಂಕುಗಳಿಂದ ಬೃಹತ್ ಮೊತ್ತದ ಸಾಲ ಮಾಡಿ ಪಂಗನಾಮ ಹಾಕಿರುವ ಆರೋಪ ಎದುರಿಸುತ್ತಿರುವ  ಉದ್ಯಮಿ ವಿಜಯ್ ಮಲ್ಯ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಪಂದ್ಯ ವೀಕ್ಷಿಸಿದರು.

ದ ಓವಲ್‌ನಲ್ಲಿ ನಡೆದ ಪಂದ್ಯವನ್ನು ಅವರು ವೀಕ್ಷಿಸಿದರು. ಅವರು ಕ್ರೀಡಾಂಗಣಕ್ಕೆ ಪ್ರವೇಶಿಸುವ ಮುನ್ನವೇ ಸುದ್ದಿಗಾರರು ಸುತ್ತುವರಿದರು.

‘ನಾನು ಇಲ್ಲಿ ಬಂದಿರುವುದು ಪಂದ್ಯ ನೋಡಲು. ಬೇರೆ ಏನೂ ಕೇಳಬೇಡಿ. ನಾನು ಮಾತನಾಡುವುದಿಲ್ಲ’ ಎಂದು ಮಲ್ಯ ಪ್ರತಿಕ್ರಿಯಿಸಿದರು.

ತಮ್ಮ ಮಗ ಸಿದ್ಧಾರ್ಥ್ ಮಲ್ಯ ಕೂಡ ಈ ಸಂದರ್ಭದಲ್ಲಿದ್ದರು. ಅವರು ತಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್‌ ಮತ್ತು ಟ್ವಿಟರ್‌ಗಳಲ್ಲಿ ಚಿತ್ರಗಳನ್ನು ಪ್ರಕಟಿಸಿದ್ದಾರೆ.

‘ಇಲ್ಲಿಯ ಸ್ಪೋರ್ಟ್ಸ್‌ ಬಾರ್ ಅದ್ಭುತವಾಗಿದೆ. ದಕ್ಷಿಣ ಭಾರತದ ತಿನಿಸುಗಳನ್ನು ಸವಿದೆ. ಬಹಳ ಖುಷಿಪಟ್ಟೆ’ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು