ಬುಧವಾರ, ಮೇ 12, 2021
25 °C

ಕೃಷಿ ಕಾರ್ಯಕ್ರಮಗಳಿಗೆ ಒಟಿಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಚಟುವಟಿಕೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೃಷಿ ಕಾರ್ಯಕ್ರಮಗಳಿಗೆ ಮೀಸಲಾದ ಒಟಿಟಿ ವಾಹಿನಿ ‘ಶ್ರಮಜೀವಿ ಟಿ.ವಿ.’ ಆರಂಭವಾಗಿದೆ. ‘ಫಾರ್ಮ್‌ಟಿವಿ’ ಹೆಸರಿನ ಆ್ಯಪ್‌ ಹಾಕಿಕೊಂಡು ವಾಹಿನಿಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

‘ಪ್ರತಿದಿನ ಅರ್ಧ ಗಂಟೆ ಅವಧಿಯ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಏಪ್ರಿಲ್‌ ಕೊನೆಯ ವೇಳೆಗೆ ಕಾರ್ಯಕ್ರಮ ಪ್ರಸಾರ ಅವಧಿಯನ್ನು ದಿನಕ್ಕೆ ಎರಡು ಗಂಟೆಗಳಿಗೆ ಹೆಚ್ಚಿಸಲಾಗುವುದು’ ಎಂದು ವಾಹಿನಿಯ ಪ್ರಧಾನ ಸಂಪಾದಕ ಡಾ. ವೆಂಕಟ್ರಮಣ ಹೆಗಡೆ ತಿಳಿಸಿದ್ದಾರೆ. ಕಾರ್ಯಕ್ರಮಗಳ ವೀಕ್ಷಣೆ ಸದ್ಯಕ್ಕೆ ಉಚಿತವಾಗಿದೆ.

‘ಕೃಷಿ ಕ್ಷೇತ್ರದಲ್ಲಿನ ಎಲ್ಲರ ನಡುವೆ ಕೊಂಡಿಯಾಗಿ ಈ ಮಾಧ್ಯಮ ಕೆಲಸ ಮಾಡಲಿದೆ’ ಎಂದು ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ www.shramajeevi.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು