ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸಂಶೋಧನೆ

ಸಪ್ತಗಿರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ
Last Updated 10 ಜುಲೈ 2018, 15:54 IST
ಅಕ್ಷರ ಗಾತ್ರ

ಬೆಂಗಳೂರು:‘ಸಪ್ತಗಿರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳುವಿದ್ಯುತ್ ಚಾಲಿತ ದ್ವಿಚಕ್ರ ವಾಹನ, ಉಳುಮೆ ಹಾಗೂ ಬೀಜ ಬಿತ್ತನೆ ಉಪಕರಣವನ್ನು ಸಂಶೋಧಿಸಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲಕೆ.ಎಲ್.ಶಿವಬಸಪ್ಪ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ವಿದ್ಯಾರ್ಥಿಗಳು ಬಜಾಜ್ ಚೇತಕ್ ಸ್ಕೂಟರ್‌ ಅನ್ನು ಸುಮಾರು ₹12,000 ವೆಚ್ಚದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ಆಗಿ ಪರಿವರ್ತಿಸಿದ್ದಾರೆ. ಗಂಟೆಗೆ 30 ರಿಂದ 35 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿ‌ದ್ದು, ಒಟ್ಟು 4 ಬ್ಯಾಟರಿಗಳಿವೆ. ಬ್ಯಾಟರಿ ಚಾರ್ಜ್ ಮಾಡಲು 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ.ಹೆಚ್ಚಾಗುತ್ತಿರುವ ಭೂತಾಪಮಾನ ಮತ್ತು ಇಂಧನ ಉಳಿತಾಯಕ್ಕೆ ಇದು ಸಹಕಾರಿಯಾಗಲಿದೆ’ಎಂದು ಅವರು ತಿಳಿಸಿದರು.

‘ಉಳುಮೆ ಹಾಗೂ ಬೀಜ ಬಿತ್ತನೆ ಉಪಕರಣವನ್ನು ₹600 ರಿಂದ ₹800 ವೆಚ್ಚದಲ್ಲಿ ಸಂಶೋಧಿಸಿದ್ದು, ಬಿತ್ತನೆಯ ಅಂತರವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿಮೆ ಮಾಡುವುದರಿಂದ ಹಿಡಿದು ಬಿತ್ತನೆ ಬೀಜಗಳ ಆಯ್ಕೆ, ಕಟಾವಿನವರೆಗೂ ಈ ಉಪಕರಣವನ್ನು ಬಳಸಬಹುದು. ಬೀಜಗಳನ್ನು ತುಂಬುವ ಡ್ರಮ್‌ನಲ್ಲಿ ಎಲ್ಲಾ ವಿಧದ ಬೀಜಗಳನ್ನು ಹಾಕಬಹುದಾಗಿದ್ದು, ನಿರ್ವಹಣೆ ಕೂಡಾ ಅತ್ಯಂತ ಸುಲಭವಾಗಿದೆ’ ಎಂದರು.

ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ.ಮಹಾದೇವಸ್ವಾಮಿ, ಪ್ರೊ.ಪ್ರಶಾಂತ್‌ಕುಮಾರ್‌, ಪ್ರೊ.ಮಹೇಶ್ ಹಾಗೂವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT