ಗುರುವಾರ , ಸೆಪ್ಟೆಂಬರ್ 24, 2020
27 °C

ಹೊಸತು: ಹೋಂಡಾ ಪವರ್‌ನಿಂದ ಹೊಸ ಬ್ರಷ್ ಕಟರ್‌

ಹೊಸತು Updated:

ಅಕ್ಷರ ಗಾತ್ರ : | |

ಬ್ರಷ್‌ ಕಟರ್‌

ರೈತರು ಬೆಳೆಗಳ ನಡುವಿನ ಕಳೆ ಕೀಳುವುದು, ಬೆಳೆ ಕೊಯ್ಲು ಮುಂತಾದ ಕೃಷಿ ಕೆಲಸಗಳಿಗಾಗಿ ಬ್ರಷ್‌ ಕಟರ್‌ಗಳನ್ನು ಅವಲಂಬಿಸಿದ್ದಾರೆ. ರಸ್ತೆ ಬದಿಯಲ್ಲಿ, ಉದ್ಯಾನದಲ್ಲಿ ಕಳೆ ಕೀಳಲು ಕೂಡ ಬ್ರಷ್‌ ಕಟರ್‌ಗಳು ನೆರವಾಗುತ್ತವೆ. ಆ ಕಾರಣಕ್ಕಾಗಿ ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ ಲಿಮಿಟೆಡ್‌ ಕಂಪನಿ 4-ಸ್ಟ್ರೋಕ್ ಎಂಜಿನ್ ತಂತ್ರಜ್ಞಾನವಿರುವ ಹೊಸ ಬ್ರಷ್‌ ಕಟರ್‌ಗಳನ್ನು ಬಿಡುಗಡೆ ಮಾಡಿದೆ. ಇದು 1.3 ಎಚ್‌ಪಿ ಸಾಮರ್ಥ್ಯದ್ದಾಗಿದ್ದು, ಯುಎಂಆರ್ 435ಟಿ ಮಾದರಿಯನ್ನು ಹೊಂದಿದೆ.

ಜೊತೆಗೆ ಹಗುರ ಬಳಕೆಗಾಗಿ 1 ಎಚ್‌ಪಿ ಹಾಗೂ ಹೆವಿ ಡ್ಯೂಟಿ ಬಳಕೆಗಾಗಿ 2 ಎಚ್‌ಪಿ ವ್ಯಾಪಕ ಶ್ರೇಣಿ ಮಾದರಿಗಳನ್ನು ಹೊಂದಿದೆ.

ಈ ಬ್ರಷ್‌ ಕಟರ್‌ ಬೆಟ್ಟ ಹಾಗೂ ಪರ್ವತ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯುವ ರೈತರಿಗೆ ಹೆಚ್ಚು ನೆರವಾಗುತ್ತದೆ. ಇಳಿಜಾರಿನ ಕೃಷಿಭೂಮಿಗಳು ಹಾಗೂ ಹಣ್ಣಿನ ತೋಟಗಳಲ್ಲಿ ಕಳೆಯನ್ನು ಸಮರ್ಥವಾಗಿ ಕೀಳಲು ಹೊಸ ಮಾದರಿಯ ಈ ಬ್ರಷ್‌ ಕಟರ್ ಹೆಚ್ಚು ಸೂಕ್ತ. ಅಲ್ಲದೇ ಸಾಲು ಬೆಳೆಗಳ ನಡುವೆ ಕಳೆ ತೆಗೆಯಲು ಇದು ನೆರವಾಗುತ್ತದೆ ಎಂದಿದೆ ಕಂಪನಿ.

ಯುಎಂಆರ್ 435 ಟಿ ಬ್ಯಾಕ್‍ಪ್ಯಾಕ್ ಬ್ರಷ್ ಕಟರ್ ಎರಡು ಮಾದರಿಗಳಲ್ಲಿ ಲಭ್ಯವಿದೆ. 2 ಹಲ್ಲುಗಳ ಬಾರ್ ಬ್ಲೇಡ್‌ನೊಂದಿಗೆ ಎಲ್ 2 ಎಸ್‌ಟಿ ಮತ್ತು 3 ಹಲ್ಲುಗಳ ಬ್ಲೇಡ್‍ನೊಂದಿಗೆ ಎಲ್‍ಇಡಿಟಿ ಮತ್ತು ನೈಲಾನ್ ಲೈನ್ ಕಟರ್ ಭೂ ಪ್ರದೇಶಕ್ಕೆ ಅನುಗುಣವಾಗಿ ಕಳೆ ಕತ್ತರಿಸುವ ಆಯ್ಕೆಯನ್ನು ನೀಡಿದೆ. ಈ ಉಪಕರಣವು ಕರ್ನಾಟಕದಲ್ಲಿ ಹೋಂಡಾ ಇಂಡಿಯಾ ಪವರ್‌ ಶೋರೂಮ್‌ಗಳಲ್ಲಿ ಲಭ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು