ಸಾಮಾನ್ಯವಾಗಿ ಮಲೆನಾಡಿನ ಕೃಷಿಕರು ಬೆಟ್ಟ-ಬ್ಯಾಣಗಳಲ್ಲಿಯೇ ವಿವಿಧ ಹಣ್ಣು ಹಂಪಲಿನ ಗಿಡಗಳನ್ನು ನೆಟ್ಟು ಆರೈಕೆ ಮಾಡುತ್ತಾರೆ. ಆದರೆ ಹುಲುಸಾಗಿ ಚಿಗುರುತ್ತಿರುವ ಆ ಗಿಡಗಳನ್ನು ದನಕರುಗಳು, ಮಂಗಗಳು ತಿನ್ನುತ್ತವೆ. ಅವುಗಳ ಕಾಟದಿಂದ ಪಾರಾಗಲು ವಿವಿಧ ವಿಧಾನ ಅನುಸರಿಸಿದರೂ ಪ್ರಯೋಜನವಾಗುತ್ತಿಲ್ಲ. ಪ್ರತಿಯೊಂದು ಗಿಡಕ್ಕೂ ಬೇಲಿ ಹಾಕುವುದು ಸಹ ಈ ಕಾಲದಲ್ಲಿ ದುಬಾರಿ ಕೆಲಸವೇ.

ಆದರೆ ಮನಸ್ಸಿದ್ದರೆ ಮಾರ್ಗವೂ ಉಂಟು ಎನ್ನುವ ಮಾತಿನಂತೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಅನೇಕ ರೈತರು ಬೆಟ್ಟ ಬ್ಯಾಣಗಳಲ್ಲಿ ನೆಟ್ಟ ಗಿಡಗಳನ್ನು ಸಂರಕ್ಷಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.

ಅದೇನೆಂದರೆ ಮೀನಿನ ಬಲೆಯನ್ನು ಗಿಡದ ಮೇಲೆ ಮತ್ತು ಸುತ್ತ ಜೋಡಿಸುವುದು. ಇದರಿಂದ ಸಸಿಗೆ ಗಾಳಿ, ಬೆಳಕು, ಬಿಸಿಲು, ಮಳೆಯ ಅಭಾವವೂ ಆಗುವುದಿಲ್ಲ.

ಪ್ರಾಣಿಗಳು, ಮಂಗಗಳಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ. ಅಲ್ಲದೇ ಖರ್ಚೂ ಕಡಿಮೆ. ಏಕೆಂದರೆ ಮೀನುಗಾರರು ಉಪಯೋಗಿಸಿ ಬಿಟ್ಟ ಬಲೆಯು ಈಗ ತೀರಾ ಅಗ್ಗದ ದರದಲ್ಲಿ ಲಭಿಸುತ್ತದೆ. ಅದನ್ನೇ ಇಲ್ಲಿ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.