ಭಾನುವಾರ, ಸೆಪ್ಟೆಂಬರ್ 26, 2021
28 °C

ಅಕ್ಷಯ ತೃತೀಯ: ಆಭರಣ ಅಂಗಡಿಗಳಲ್ಲಿ ಜನದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಕ್ಷಯ ತೃತೀಯ ದಿನವಾದ ಮಂಗಳವಾರ ಜಿಲ್ಲಾಕೇಂದ್ರದ ಚಿನ್ನಾಭರಣ ಅಂಗಡಿಗಳಲ್ಲಿ ಜನ ಸಂದಣಿ ಕಂಡು ಬಂತು.

ನಗರದಲ್ಲಿ ಚೆನ್ನಮ್ಮನ್ನೂರ್‌ ಜ್ಯುವೆಲ್ಲರ್ಸ್‌ ಬಿಟ್ಟರೆ ಬೇರೆ ದೊಡ್ಡ ಮಟ್ಟಿನ ಆಭರಣದ ಅಂಗಡಿಗಳಿಲ್ಲ. ಹಾಗಿದ್ದರೂ  ಇರುವ ಮಳಿಗೆಗಳಿಗೆ ಭೇಟಿ ನೀಡಿದ ಜನರು ಚಿನ್ನ ಖರೀದಿಯಲ್ಲಿ ತೊಡಗಿದ್ದರು.

ಅಕ್ಷಯ ತೃತೀ‌ಯದಂದು ಚಿನ್ನ ಖರೀದಿಗೆ ಶುಭ ದಿನ. ಅಂದು ಚಿನ್ನಾಭರಣ ಖರೀದಿಸಿದರೆ ಐಶ್ವರ್ಯ ಇನ್ನಷ್ಟು ಹೆಚ್ಚುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ, ಆಭರಣ ಮಳಿಗೆಗಳು ಕೂಡ ಹಲವು ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತವೆ.

ಜಿಲ್ಲಾ ಕೇಂದ್ರದ ದೊಡ್ಡ ಅಂಗಡಿ ಬೀದಿಗಳಲ್ಲಿ ಹೆಚ್ಚು ಆಭರಣ ಅಂಗಡಿಗಳಿವೆ. ಎಲ್ಲ ಮಳಿಗೆಗಳಲ್ಲೂ ಗ್ರಾಹಕರ ಸಂಖ್ಯೆ ಮಂಗಳವಾರ ಹೆಚ್ಚಿತ್ತು. ತಮ್ಮಲ್ಲಿರುವ ಹಣಕ್ಕೆ ಅನುಸಾರ ಜನರು ಚಿನ್ನ ಖರೀದಿಸಿದರು.

ಕೆಲವು ಮಂದಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಕೂಡ ಅಕ್ಷಯ ತೃತೀಯದಂದೇ ಬಿಡಿಸಿಕೊಂಡರು.

ರಾಯರ ಬೃಂದಾವನಕ್ಕೆ ಶ್ರೀಗಂಧ ಲೇಪನ

ಅಕ್ಷಯ ತೃತೀಯ ಅಂಗವಾಗಿ ಚಾಮರಾಜನಗರದ ವಾದಿರಾಜನಗರದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃತ್ತಿಕಾ ಬೃಂದಾವನಕ್ಕೆ ಶ್ರೀಗಂಧದ ಲೇಪನ ಮಾಡಲಾಗಿತ್ತು.

ಬೆಳಗ್ಗೆ ರಾಯರ ಬೃಂದಾವನಕ್ಕೆ ಸಾಂಪ್ರಾದಾಯಿಕವಾಗಿ ಅಭಿಷೇಕಗಳನ್ನು ಮಾಡಿ ನಂತರ 2 ಕೆಜಿ ಶ್ರೀಗಂಧದ ಚಕ್ಕೆಗಳನ್ನು ತೇದು ರಾಯರ ಬೃಂದಾವನಕ್ಕೆ ಲೇಪನ ಮಾಡಲಾಯಿತು. 

ಮುಖ್ಯ ಅರ್ಚಕರಾದ ಪವನಾಚಾರ್, ಶ್ರೀಧರಾಚಾರ್, ರಾಮಚಂದ್ರ ಮಾರುತಿ, ದೇವಸ್ಥಾನದ ವ್ಯವಸ್ಥಾಪಕರಾದ ನಂಜುಂಡಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.