ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಪೀಠ ಪ್ರಶಸ್ತಿ ಮೀರಿ ಬೆಳೆದ ‘ಆನಂದಕಂದ’

ಬೆಟಗೇರಿ ಕೃಷ್ಣಶರ್ಮರ ಸ್ಮಾರಕ ಭವನ, ಗ್ರಂಥಾಲಯ ನಿರ್ಮಾಣ ಶೀಘ್ರ
Last Updated 3 ನವೆಂಬರ್ 2015, 9:43 IST
ಅಕ್ಷರ ಗಾತ್ರ

ಬೆಟಗೇರಿ (ಮೂಡಲಗಿ): ‘ಡಾ. ಬೆಟಗೇರಿ ಕೃಷ್ಣಶರ್ಮ ಮಾತುಗಳನ್ನು ಕಾವ್ಯ ವನ್ನಾಗಿಸಿದ ನಾಡಿನ ಶ್ರೇಷ್ಠ ಸಾಹಿತಿ’ ಎಂದು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಅಧ್ಯಕ್ಷ ಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು.

ಇಲ್ಲಿಯ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಆಶ್ರಯದಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಈ ನೆಲದ ಮಗ ‘ಆನಂದಕಂದರ ನೆನಪು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ ನಾಡು, ನುಡಿಗಾಗಿ ಕೃಷ್ಣಶರ್ಮರ ಕೊಡುಗೆಯು ಅಪಾರವಾಗಿದೆ ಎಂದರು.

ಕೃಷ್ಣಶರ್ಮರ ಹುಟ್ಟೂರು ಬೆಟಗೇರಿ ಯಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ನೀಲನಕ್ಷೆ ಹಾಕಲಾಗಿದ್ದು, ಸರ್ಕಾರದ ಅನುದಾನದಲ್ಲಿ ಅದನ್ನು ಆದಷ್ಟು ಬೇಗ ನಿರ್ಮಿಸಲಾಗುವುದು. ಗ್ರಂಥಾಲಯಕ್ಕೆ ತಾತ್ಕಾಲಿಕ ಕಟ್ಟಡ ದೊರೆತರೆ ಅದನ್ನು ಶೀಘ್ರವಾಗಿ ಪ್ರಾರಂಭಿಸಲಾಗುವದು ಮತ್ತು ಆನಂದಕಂದರ ಕುರಿತು ವರ್ಷ ದಲ್ಲಿ ಕನಿಷ್ಠ ಎರಡು ಕಾರ್ಯಕ್ರಮಗಳನ್ನು ನಡೆಸಿಕೊಡುವುದಾಗಿ ಕರವೇ ಯುವಕರ ಬೇಡಿಕೆಗಳಿಗೆ ಪ್ರೊ. ಪಾಟೀಲ ಅವರು ಭರವಸೆ ನೀಡಿದರು.

ಗೋಕಾಕ ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯ ಹಾಗೂ ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ  ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ ‘ಬೆಟಗೇ ರಿಯ ಕಂದರಾಗಿ ನಾಡಿನ ಸಾಹಿತ್ಯದ ತಂದೆಯಾಗಿ ಬೆಳೆದ ಶರ್ಮರ ಸಾಹಿತ್ಯ ಅಜರಾಮರವಾದದ್ದು’ ಎಂದರು.

ಕೃಷ್ಣಶರ್ಮರು ತಮ್ಮ ಹೆಸರಿನ ಜೊತೆಗೆ ಹುಟ್ಟೂರು ಬೆಟಗೇರಿಯ ಹೆಸರನ್ನು ಅಮರವಾಗಿಸಿದ  ಸಾರಸ್ವತ ಲೋಕದ ಮಹಾನ ಸಾಹಿತಿ. ನಾಡಹಬ್ಬ ವನ್ನು ಕನ್ನಡ ನಾಡಿಗೆ ಸಮರ್ಪಿಸಿದ ಮೊದಲಿಗ ಸಾಹಿತಿ ಎನ್ನುವ ಕಿರ್ತಿ ಕೃಷ್ಣ ಶರ್ಮರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಾಲಶೇಖರ ಬಂದಿ ಹಾಗೂ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಅವರು ಮಾತನಾಡಿದರು. ಸಾನಿಧ್ಯ ವಹಿಸಿದ್ದ ಸುಣಧೋ ಳಿಯ ಜಡಿಸಿದ್ಧೇಶ್ವರಮಠದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಪಂಚಾಯ್ತಿ ಅಧ್ಯಕ್ಷ ಪರಮಾನಂದ ಕೋಣಿ, ಕಲಾವಿದ ಈಶ್ವರಚಂದ್ರ ಬೆಟ ಗೇರಿ, ಕರವೇ ಅಧ್ಯಕ್ಷ ಈರಣ್ಣಾ ಬಳಿ ಗಾರ, ಅರ್ಜುನ ಅಂದಾನಿ ಹಾಗೂ ಕರವೇ ಸದಸ್ಯರು ಉಪಸ್ಥಿತರಿದ್ದರು.ಶಿವು ನಾಯ್ಕರ ಸ್ವಾಗತಿಸಿದರು, ಬಸವರಾಜ ಪಣದಿ ನಿರೂಪಿಸಿದರು.

ಕಪರಟ್ಟಿಯ ಬಸವರಾಜ ಹಿರೇಮಠ ಅವರು ಆನಂದಕಂದರ ಕವಿತೆ ಹಾಡಿ ಕೇಳುಗರ ಮನತಣಿಸಿದರು, ರವಿ ಭಜಂತ್ರಿ ಅವರ ಹಾಸ್ಯ ಕಾರ್ಯಕ್ರಮವು ಎಲ್ಲರನ್ನು ನಗೆಗೆಡಲಲ್ಲಿ ತೇಲಿಸಿತು.
**
ಆನಂದಕಂದ ಎಂಬ ಕಾವ್ಯ ನಾಮದಿಂದ ಸಾರಸ್ವತ ಲೋಕದಲ್ಲಿ ಪರಿಚಿತರಾದ ಕೃಷ್ಣಶರ್ಮರು ಬೆಟಗೇರಿ ಗ್ರಾಮವನ್ನು ಅಜರಾಮರಗೊಳಿಸಿದ್ದಾರೆ
-ಡಾ.ಸಿ.ಕೆ.ನಾವಲಗಿ, ಜಾನಪದ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT