ಸೋಮವಾರ, 22 ಡಿಸೆಂಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಮಂಗಳೂರು|BJP ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

National Herald Protest: ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಾಗೂ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ವಿರುದ್ಧ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ವಶಕ್ಕೆ ಪಡೆಯಲಾಯಿತು.
Last Updated 22 ಡಿಸೆಂಬರ್ 2025, 7:57 IST
ಮಂಗಳೂರು|BJP ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

ದಕ್ಷಿಣ ಕನ್ನಡ| ಪೋಲಿಯೊ ಅಭಿಯಾನ: ಶೇ 96 ಗುರಿ ಸಾಧನೆ

ದಕ್ಷಿಣ ಕನ್ನಡದಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯಿದ್ದು, ಶೇ.96.80 ಗುರಿ ಸಾಧಿಸಲಾಗಿದೆ. 1,41,594 ಮಕ್ಕಳ ಪೈಕಿ 1,37,057 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಅಭಿಯಾನ ಡಿ.24ರವರೆಗೆ ಮುಂದುವರೆಯಲಿದೆ.
Last Updated 22 ಡಿಸೆಂಬರ್ 2025, 5:02 IST
ದಕ್ಷಿಣ ಕನ್ನಡ| ಪೋಲಿಯೊ ಅಭಿಯಾನ: ಶೇ 96 ಗುರಿ ಸಾಧನೆ

ಪಿಲಿಕುಳ: ಹುಲಿ ಮರಿಗಳ ದತ್ತು ಪಡೆದ ಉದ್ಯಮಿ

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹುಲಿ ಮರಿಗಳಿಗೆ ನಾಮಕರಣ ಹಾಗೂ ದತ್ತು ಯೋಜನೆಗೆ ಚಾಲನೆ ದೊರೆತಿದ್ದು, ಉದ್ಯಮಿ ದಿವಾಕರ್ ಕದ್ರಿ ಎರಡು ಹುಲಿ ಮರಿಗಳನ್ನು ದತ್ತು ಪಡೆದರು. ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಮುಂದಿನ ಹುಲಿ ಮರಿಯನ್ನು ದತ್ತು ಪಡೆಯಲು ಆಸಕ್ತಿ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2025, 5:02 IST
ಪಿಲಿಕುಳ: ಹುಲಿ ಮರಿಗಳ ದತ್ತು ಪಡೆದ ಉದ್ಯಮಿ

ಕೋಳಿ ಅಂಕ: ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ 27 ಮಂದಿ ವಿರುದ್ಧ ಪ್ರಕರಣ

ವಿಟ್ಲದ ಕೇಪು ಗ್ರಾಮದಲ್ಲಿ ಅಕ್ರಮ ಕೋಳಿ ಅಂಕ ದಾಳಿ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ 27 ಮಂದಿ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 22 ಡಿಸೆಂಬರ್ 2025, 5:02 IST
ಕೋಳಿ ಅಂಕ: ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ 27 ಮಂದಿ ವಿರುದ್ಧ ಪ್ರಕರಣ

ಬಜಪೆ ಪಟ್ಟಣ ಪಂಚಾಯಿತಿ ಚುನಾವಣೆ: ಶೇ.64, ಕಿನ್ನಿಗೋಳಿ ಶೇ 69.36 ಮತದಾನ

ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣಗಳಲ್ಲಿ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಶೇ.64 ಮತ್ತು ಶೇ.68.36 ಮತದಾನ ದಾಖಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಮತದಾರರ ಮೇಲೆ ಒತ್ತಡ, ಬೂತ್‌ಗಳಲ್ಲಿ ಬಿಗುವು ಕಾಣಿಸಿಕೊಂಡಿತು.
Last Updated 22 ಡಿಸೆಂಬರ್ 2025, 5:02 IST
ಬಜಪೆ ಪಟ್ಟಣ ಪಂಚಾಯಿತಿ ಚುನಾವಣೆ: ಶೇ.64, ಕಿನ್ನಿಗೋಳಿ ಶೇ 69.36 ಮತದಾನ

ಮಂಗಳೂರು| ಕರಾವಳಿ ಉತ್ಸವ– ಹತ್ತಾರು ಆಕರ್ಷಣೆ: ಕಡಲತಡಿಯ ನಗರದಲ್ಲಿ ಸಡಗರವೋ ಸಡಗರ

ಕರಾವಳಿ ಉತ್ಸವ 2025 ಮಂಗಳೂರಿನಲ್ಲಿ ಭಾರೀ ಸಡಗರದಿಂದ ಆರಂಭ, ಕಡಲ ತಡಿಯಲ್ಲಿ ಕ್ರೀಡೆ, ಸಂಗೀತ, ಗಾಳಿಪಟ ಉತ್ಸವ, ಪಿಲಿಕುಳ ವೈಜ್ಞಾನಿಕ ಚಟುವಟಿಕೆ, ಕಲಾಪರ್ಬ, ಹೆಲಿರೈಡ್ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ಭಕ್ತಿ–ಮನರಂಜನೆಯ ಸಂಭ್ರಮ.
Last Updated 22 ಡಿಸೆಂಬರ್ 2025, 5:01 IST
ಮಂಗಳೂರು| ಕರಾವಳಿ ಉತ್ಸವ– ಹತ್ತಾರು ಆಕರ್ಷಣೆ: ಕಡಲತಡಿಯ ನಗರದಲ್ಲಿ ಸಡಗರವೋ ಸಡಗರ

ಕುಕ್ಕೆ ಕಿರುಷಷ್ಠಿ: ಆಹ್ವಾನಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರು; ಆಕ್ಷೇಪ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರು ಉಲ್ಲೇಖವಾಗಿದೆ ಎಂಬುದಾಗಿ ಕ್ಷೇತ್ರ ಸಂರಕ್ಷಣಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಡಿ.22ರಂದು ಪ್ರತಿಭಟನೆ ಎಚ್ಚರಿಕೆ ನೀಡಿದೆ.
Last Updated 22 ಡಿಸೆಂಬರ್ 2025, 5:01 IST
ಕುಕ್ಕೆ ಕಿರುಷಷ್ಠಿ: ಆಹ್ವಾನಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರು; ಆಕ್ಷೇಪ
ADVERTISEMENT

ಉಳ್ಳಾಲ| ಶಿಕ್ಷಕನ ಶವ ಬಾವಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

Teacher Death Investigation: ಉಳ್ಳಾಲದ ನರಿಂಗಾನ ಗ್ರಾಮದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ್ ಜೋಗಿ ಅವರ ಶವ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಅನಾರೋಗ್ಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Last Updated 22 ಡಿಸೆಂಬರ್ 2025, 5:01 IST
ಉಳ್ಳಾಲ| ಶಿಕ್ಷಕನ ಶವ ಬಾವಿಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಬಂಟ್ವಾಳ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

ಬಂಟ್ವಾಳದ ಮಹಿಷಮರ್ಧಿನಿ ಕಂಬಳ ಸಮಿತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಭಾನುವಾರ ಧಾರ್ಮಿಕ ಶ್ರದ್ಧೆ ಹಾಗೂ ಮನೋರಂಜನೆಯ ನಿಟ್ಟಿನಲ್ಲಿ ಭಕ್ತಿಭರಿತ ಚಾಲನೆ ದೊರೆಯಿತು.
Last Updated 22 ಡಿಸೆಂಬರ್ 2025, 5:01 IST
ಬಂಟ್ವಾಳ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

ಉಪ್ಪಿನಂಗಡಿ: ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಸೆರೆ

Child Sexual Assault Case: ಕೂಲಿ ಕಾರ್ಮಿಕ ಕುಟುಂಬದ 13 ವರ್ಷದ ಬಾಲಕಿಯನ್ನು ಜೇನು ಕೃಷಿ ಕಲಿಸುವ ನೆಪದಲ್ಲಿ ಮನೆಯಲ್ಲಿರಿಸಿಕೊಂಡು ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ ನೆಕ್ಕಿಲಾಡಿ ನಿವಾಸಿ ಅಬ್ದುಲ್ ಗಫೂರ್ ಅನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
Last Updated 21 ಡಿಸೆಂಬರ್ 2025, 20:11 IST
ಉಪ್ಪಿನಂಗಡಿ: ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಸೆರೆ
ADVERTISEMENT
ADVERTISEMENT
ADVERTISEMENT