ಬೆಳ್ತಂಗಡಿ: ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಸಿರು ಹೊರೆಕಾಣಿಕೆಯ ಶೋಭಯಾತ್ರೆಯು ಕಲಾತಂಡ, ಭಜನೆ, ವಿವಿಧ ವೇಷ ಭೂಷಣ, ಚೆಂಡೆ ವಾದನದೊಂದಿಗೆ ಅರಸುಕಟ್ಟೆ ಬಳಿಯಿಂದ ದೇವಸ್ಥಾನದವರೆಗೆ ನಡೆಯಿತು.

ಶೋಭಯಾತ್ರೆಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ಚಾಲನೆ ನೀಡಿದರು.

ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಸೂರ್ಯ ವಂದನ ಭಜನೋತ್ಸವದ ದೀಪ ಪ್ರಜ್ವಲನೆಯನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ನೆರವೇರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ‘ಸ್ವಯಂ ಸೇವಕರು ದೇವರ ಮೇಲಿನ ಭಕ್ತಿಯಿಂದ ಶ್ರಮಪಟ್ಟು ದುಡಿಯುತ್ತಿರುವುದರಿಂದ ಎಲ್ಲ ವ್ಯವಸ್ಥೆಗಳೂ ಅಚ್ಚುಕಟ್ಟಾಗಿ ನಡೆಯುತ್ತಿವೆ’ ಎಂದರು.

ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೋಟ್ಟು, ಅಳದಂಗಡಿ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಆಡಳ್ತೇದಾರ ಶಿವಪ್ರಸಾದ್ ಅಜಿಲ, ಪೆರಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಢಾರಿ, ಉಜಿರೆಯ ಉದ್ಯಮಿ ಪ್ರವೀಣ್ ಫರ್ನಾಂಡಿಸ್, ಪ್ರಧಾನ ಆರ್ಚಕ ಕೃಷ್ಣ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಮಹಾವೀರ್ ಜೈನ್, ಜಗದೀಶ್ ಅಂಚನ್, ಎನ್.ಶ್ರೀನಿವಾಸ್ ಕಿಣಿ, ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಎನ್.ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್, ಯಶೋದಾ, ರಶ್ಮಿ, ಸಮಿತಿಯ ಪದಾಧಿಕಾರಿಗಳು, ಸಂಚಾಲಕರು, ಭಕ್ತರು ಭಾಗವಹಿಸಿದ್ದರು.

ಸೂರ್ಯನಾರಾಯಣ ಭಜನಾ ಮಂಡಳಿ ನೇತೃತ್ವದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನಾರಾವಿ ವಲಯದ ವತಿಯಿಂದ ಸೂರ್ಯವಂದನ ಭಜನೋತ್ಸವ, ಸಂಗೀತ ನೃತ್ಯ ಸಭಾ ಸೂರ್ಯನಾರಾಯಣ ದೇವಸ್ಥಾನ ನಾರಾವಿ ವತಿಯಿಂದ ಸಂಗೀತ ನೃತ್ಯ ವೈಭವ ನಡೆಯಿತು.

ಇಂದಿನ ಕಾರ್ಯಕ್ರಮಗಳು: ಬೆಳಿಗ್ಗೆ 7.30ರಿಂದ ಪುಣ್ಯಾಹ ವಾಚನ ಆದ್ಯ ಗಣಯಾಗ ಶಾಂತಿ, ಪ್ರಾಯಶ್ಚಿತ್ತ ಹೋಮಗಳು, ಕೊಡಮಣಿತ್ತಾಯ ದೈವದ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7ರಿಂದ ಗ್ರಹಣಶಾಂತಿ, ದೇವರಿಗೆ ಕಲಶಾಭಿಷೇಕ, ಧ್ವಜಾರೋಹಣ, ಉತ್ಸವ ಬಲಿ, ವಸಂತ ಪೂಜೆ, ಮಹಾಪೂಜೆ, ದೀಪ ಬಲಿ, ಕೋಳಿಗುಂಟ ಹಾಕುವ ಕಾರ್ಯ ನಡೆಯಲಿದೆ.

ಬೆಳಿಗ್ಗೆ 10ರಿಂದ ಉಮಾಮಹೇಶ್ವರ ಭಜನಾ ಮಂಡಳಿ ಶಿವತಿಕೆರೆ ಕಾರ್ಕಳ ಮತ್ತು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಾವ್ಯದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ 6.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮೂಡಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಉಡುಪಿ ಆನೆಗುಂದಿ ಮಹಾಸಂಸ್ಥಾನ ಪಡುಕುತ್ಯಾರಿನ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ಚನ ನೀಡುವರು. ಶಾಸಕ ಸುನಿಲ್ ಕುಮಾರ್, ಪ್ರಮುಖರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ, ಪ್ರತಿಭಾ ಕುಳಾಯಿ ಭಾಗವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ರಾತ್ರಿ ಶ್ರೀಮುರಳಿ ಯೋಗ ಗುರುಕುಲ ಹೊಸ್ಮಾರ್ ತಂಡದ ಮಕ್ಕಳಿಂದ ಯೋಗಾಸನ ನೃತ್ಯ, ವೇಣೂರಿನ ಕುಂಭಶ್ರೀ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸೂರ್ಯನಾರಾಯಣ ಮಹಿಳಾ ಕುಣಿತ ಭಜನಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾರಾವಿಯ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.