ಬಾಲಿವುಡ್ನಲ್ಲಿ ದಶಕ ಪೂರೈಸಿದ ನಟ, ನಿರ್ದೇಶಕ ರಿತೇಶ್ ದೇಶಮುಖ್ ತುಂಬಾ ಸಂತಸಗೊಂಡಿದ್ದಾರೆ. `ನಾನು ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿಯುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ' ಎಂದೂ ಹೇಳಿಕೊಂಡಿದ್ದಾರೆ.

ಕೆ.ವಿಜಯ್ ಭಾಸ್ಕರ್ ಅವರ `ತುಝೇ ಮೇರಿ ಕಸಂ' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ರಿತೇಶ್ ಯಶಸ್ಸು ಕಂಡಿದ್ದು ಮಸ್ತಿ ಮತ್ತು `ಬರ್ದಾಶ್' ಚಿತ್ರದಲ್ಲಿ. ಈ ಸಿನಿಮಾ ಪ್ರಪಂಚ ಹತ್ತು ವರ್ಷಗಳಲ್ಲಿ ನೀಡಿದ ಅಸಂಖ್ಯ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

`ಇಲ್ಲಿವರೆಗಿನ ಸಿನಿಮಾರಂಗದ ನನ್ನ ಪಯಣ ತುಂಬಾ ಶ್ರೇಷ್ಠವಾಗಿತ್ತು. ಇಷ್ಟು ಕಾಲ ಇಲ್ಲಿರುತ್ತೇನೆಂಬ ಭರವಸೆಯೂ ನನಗಿರಲಿಲ್ಲ. ಆದರೆ ಹತ್ತು ವರ್ಷಗಳನ್ನು ಇಲ್ಲಿ ಸಂತಸದಿಂದ ಕಳೆದೆ. ಹಲವು ನಿರ್ದೇಶಕರೊಂದಿಗೆ, ಅಜಯ್ ದೇವಗನ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಅವರಂಥ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದು ಅದ್ಭುತವೆನಿಸಿದೆ. ನನಗೆ ಹಲವರು ಇಲ್ಲಿ ಸ್ನೇಹಿತರಾದರು. ಇದೊಂದು ಪರಿಪೂರ್ಣ ಪಯಣ' ಎಂದು ಭಾವುಕರಾದರು ರಿತೇಶ್.

ಮರಾಠಿಯಲ್ಲಿನ ಹಾಸ್ಯ ಪ್ರಧಾನ ಚಿತ್ರ `ಬಾಲಕ್ ಪಾಲಕ್' ಮೂಲಕ ಸಿನಿಮಾ ನಿರ್ಮಾಣಕ್ಕೂ ಕಾಲಿಟ್ಟ ರಿತೇಶ್, ಸಿನಿಮಾ ನಿರ್ಮಾಣದ ಕುರಿತೂ ಹೇಳಿಕೊಂಡರು.

ನನಗೆ `ಬಾಲಕ್' ಸಿನಿಮಾದ ಯಶಸ್ಸು ಖುಷಿ ತಂದಿದೆ. ಆದರೆ ಪ್ರತಿಯೊಂದು ಸಿನಿಮಾದಲ್ಲೂ ಸಾಮಾಜಿಕ ಸಂದೇಶ ನೀಡಲು ಸಾಧ್ಯವಿಲ್ಲ. ಮೊದಲು ನಿರ್ಮಾಪಕನಾಗಿ ಯೋಚಿಸುತ್ತೇನೆ. ಅದು ನನಗೆ ಒಪ್ಪಿಗೆಯಾದರೆ ಮುಂದೆ ಹೋಗುತ್ತೇನೆ. ಆದರೆ ನಟನಾಗಿ ನಾನು ಆಯ್ದುಕೊಳ್ಳುವ ದಾರಿ ನಿರ್ಮಾಪಕನಾಗಿ ಆಯ್ದುಕೊಳ್ಳಲು ಸಾಧ್ಯವಾಗದೇ ಇರಬಹುದು ಎಂದೂ ಅಭಿಪ್ರಾಯ ನೀಡಿದರು.

ಮರಾಠಿ ಚಿತ್ರ `ಲಾಯ್ ಭಾರಿ' ಮೂಲಕ ಮರಾಠಿ ಚಿತ್ರದಲ್ಲಿ ಮೊದಲ ಬಾರಿ ರಿತೇಶ್ ನಟಿಸಲಿದ್ದು, ಇದು ಅವರ ಎರಡನೇ ನಿರ್ಮಾಣವಾಗಲಿದೆ.

ನಿಶಿಕಾಂತ್ ಕಾಮತ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎನ್ನುವ ರಿತೇಶ್, ಬಾಲಕ್ ಪಾಲಕ್ ಸಿನಿಮಾವನ್ನು ಹಿಂದಿಯಲ್ಲೂ ಹೊರತರುವ ಕುರಿತು ಯೋಚಿಸುತ್ತಿದ್ದಾರಂತೆ.

ಹಿಂದಿ, ಮರಾಠಿ ಚಿತ್ರದೊಂದಿಗೆ ರಿತೇಶ್, ಸ್ಟಾರ್ ಪ್ಲಸ್ನ `ಇಂಡಿಯಾ'ಸ್ ಡಾನ್ಸಿಂಗ್ ಸೂಪರ್ಸ್ಟಾರ್'ನಲ್ಲಿ ನೃತ್ಯ ಸಂಯೋಜಕರಾದ ಗೀತಾ ಕಪೂರ್ ಮತ್ತು ಆಶ್ಲೆ ಲೋಬೊ ಅವರೊಂದಿಗೆ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆಗೆ ಕಾಲಿಡಲು ಇದೇ ಸೂಕ್ತ ಸಮಯ ಎಂದೂ ಅವರಿಗನ್ನಿಸಿದೆಯಂತೆ.

`ನೃತ್ಯ ಮನರಂಜನಾತ್ಮಕವಾಗಿದೆ. ಇನ್ನೂ ಕ್ರಿಯಾಶೀಲವಾಗಿರಬೇಕು ಎಂದು ಬಯಸುತ್ತೇವೆ. ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಯುವಂತೆ ಮಾಡುವ ನೃತ್ಯ ಪ್ರದರ್ಶನ ಬೇಕಿದೆ. ಇದುವರೆಗೂ ಹಲವು ನೃತ್ಯ ಸಂಯೋಜಕರೊಂದಿಗೆ ಕೆಲಸ ಮಾಡಿದ್ದೇನೆ. ಸಾಕಷ್ಟು ವಿಷಯಗಳನ್ನೂ ಕಲಿತಿದ್ದೇನೆ. ಆ ಎಲ್ಲಾ ಅನುಭವಗಳನ್ನು ಈ ಶೋನಲ್ಲಿ ತೀರ್ಪು ನೀಡಲು ಉಪಯೋಗಿಸಿಕೊಳ್ಳುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.