ಹೊಸ ತಲೆಮಾರಿಗೆ ಪುಸ್ತಕ ಓದುವ ರುಚಿ ಹಚ್ಚುವ ಮತ್ತು ಭಾಷೆಗಳ ಗಡಿಯನ್ನು ಮೀರಿ ಓದಿನ ವ್ಯಾಪ್ತಿ ಮತ್ತು ಸಾಹಿತ್ಯಿಕ ಶ್ರೀಮಂತಿಕೆ ಬೇರೆ ಬೇರೆ ಭಾಷಿಕರಿಗೆ ತಿಳಿಪಡಿಸುವ ಪ್ರಯತ್ನ ಇದಾಗಿದೆ. ನಾನು ಹಲವು ಸಲ ಭಾಗವಹಿಸಿ ನಾನು ಓದಿದ ಪುಸ್ತಕಗಳ ವಿಷಯ ಹಂಚಿಕೊಳ್ಳುತ್ತೇನೆ. ಕನ್ನಡದ ಕವಿಗಳು ಬರಹಗಾರರ ಬಗ್ಗೆ ಮಾತನಾಡುತ್ತೇನೆ
ನದೀಮ್ ಸನದಿ ಕವಿ
ವಿವಿಧ ಸ್ಪರ್ಧೆಗಳು
ಆರಂಭದಲ್ಲಿ ಕೆಲ ಸದಸ್ಯರಿಗೆ ಓದಿನ ಅಭಿರುಚಿಯೇ ಇರಲಿಲ್ಲ. ಈಗ ಅವರೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಎಂಬುದೇ ಖುಷಿಯ ವಿಷಯ. ಸತತ ಮಳೆ ಪರೀಕ್ಷೆಗಳು ಸಾಲು–ಸಾಲು ರಜೆಗಳಿದ್ದಾಗ ಹೊರತುಪಡಿಸಿ ಉಳಿದೆಲ್ಲ ಭಾನುವಾರ ಸೇರುತ್ತಾರೆ. ಓದು ಮಾತುಕತೆಗಷ್ಟೇ ಕ್ಲಬ್‌ನ ಚಟುವಟಿಕೆ ಸೀಮಿತವಾಗಿಲ್ಲ. ಪ್ರತಿವರ್ಷ ಚಿತ್ರಕಲಾ ಉತ್ಸವ ಕನ್ನಡ ಕಾವ್ಯೋತ್ಸವ ಸ್ಪರ್ಧೆ ಆಯೋಜಿಸುತ್ತದೆ. ಬೆಳಗಾವಿಗೆ ಭೇಟಿ ನೀಡುವ ವಿಮರ್ಶಕರು ಸಾಹಿತಿಗಳು ಮತ್ತು ಲೇಖಕರೊಂದಿಗೆ ಸಂವಾದ ಏರ್ಪಡಿಸುತ್ತದೆ.