ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ FB ಲೈವ್ | ಸ್ವಾತಂತ್ರ್ಯ ದಿನಾಚರಣೆ: ಸಾಂಸ್ಕೃತಿಕ ಪರಂಪರೆ ಅನಾವರಣ...

ಪ್ರಜಾವಾಣಿ ಫೇಸ್‌ಬುಕ್‌ ಲೈವ್
Last Updated 13 ಆಗಸ್ಟ್ 2020, 7:22 IST
ಅಕ್ಷರ ಗಾತ್ರ

ಸ್ವಾತಂತ್ರ್ಯ ದಿನಾಚರಣೆ ಎಂಬುದು ಪ್ರತಿಯೊಂದು ದೇಶದ ರಾಷ್ಟ್ರೀಯ ಹಬ್ಬ. ಈ ಮಹತ್ವದ ದಿನಕ್ಕೆ ಸುದೀರ್ಘ ಇತಿಹಾಸ ಇರುತ್ತದೆ. ಮತ್ತೆ ಈ ಖುಷಿಯ ಕ್ಷಣವನ್ನು ಆಚರಿಸುವ ಅವಕಾಶ ಬಂದಿದೆ.

74ನೇ ಸ್ವಾತಂತ್ರ್ಯ ದಿನದ ಆಚರಣೆಗೆ ಇಡೀ ದೇಶವೇ ಸಜ್ಜಾಗುತ್ತಿದೆ. ಕೋವಿಡ್‌–19 ನಡುವೆಯೇ ಅರ್ಥಪೂರ್ಣ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅನಾವರಣಕ್ಕೆ ‘ಪ್ರಜಾವಾಣಿ’ಯೂ ನಿರ್ಧರಿಸಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮ ಹಮ್ಮಿಕೊಂಡಿದೆ.

ಆಗಸ್ಟ್ 14ರಂದು ರಾತ್ರಿ 10.30ಗಂಟೆಯಿಂದ ಮಧ್ಯರಾತ್ರಿವರೆಗೆ ‘ದೇಶಕ್ಕಾಗಿ ಹೋರಾಡಿದವರಿಗೆ ನಮನ’ ಕಾರ್ಯಕ್ರಮ ಪ್ರಸಾರವಾಗಲಿದೆ. ‘ಏ ಮೇರೇ ವತನ್ ಕೆ ಲೋಗೋಂ’ ಶೀರ್ಷಿಕೆಯ ಈ ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಗಾನ ಸುಧೆ ಹರಿಸಲಿದ್ದಾರೆ. ಅವರಿಗೆ ಕೀಬೋರ್ಡ್‌ನಲ್ಲಿ ಕೃಷ್ಣ ಉಡುಪ, ತಬಲಾದಲ್ಲಿ ಪ್ರದ್ಯುಮ್ನ ಹಾಗೂ ಅಭಿಷೇಕ್ ಅವರು ರಿದಂ ಪ್ಯಾಡ್‌ ಮೂಲಕ ಸಾಥ್‌ ನೀಡಲಿದ್ದಾರೆ.

ಆಗಸ್ಟ್‌ 15ರಂದು ಸಂಜೆ 5 ರಿಂದ 6.30 ಗಂಟೆವರೆಗೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಜನಪದ ಗಾಯಕಿ ಸವಿತಾ ಅವರು 'ಸವಿತಕ್ಕನ ಅಳ್ಳೀ ಬ್ಯಾಂಡ್' ಕಾರ್ಯಕ್ರಮದ ಮೂಲಕ ಏಕತೆ, ಭಾವೈಕ್ಯ ಸಾರುವ ಜನಪದ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಆಗಸ್ಟ್‌ 16ರಂದು ಸಂಜೆ 5ರಿಂದ 6.30ರವರೆಗೆ ಕೊರೊನಾ ತಂದಿತ್ತ ಸಂಕಟಕ್ಕೆ ಸಾಂತ್ವನ, ನೆಮ್ಮದಿಯ ಸಿಂಚನಕ್ಕಾಗಿ ‘ಅಮೃತಧಾರೆ‘ ಗಾಯನ ಕಾರ್ಯಕ್ರಮ ಪ್ರಸಾರವಾಗಲಿದೆ. ಸಂಗೀತ ಋಷಿ ವಿದ್ಯಾಭೂಷಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರಿಗೆ ವಿದ್ವಾನ್ ಪ್ರಾದೇಶ್ ಆಚಾರ್ ಅವರು ಪಿಟೀಲು ಹಾಗೂ ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಆಚಾರ್ ಸಹಯೋಗ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT