ಗೋಪಿನಾಥ್ ಮಲ್ಯ ಅವರ ಮಂಗಳೂರಿನ ಗಾರ್ಡನ್ನಲ್ಲಿ 1.5 ಇಂಚು ಎತ್ತರದ ಕುಂಡಗಳಲ್ಲಿ ವೈವಿಧ್ಯಮಯ ಬೋನ್ಸಾಯ್ ಮರಗಳು ಮೈದಳೆದಿವೆ. ಇವುಗಳಲ್ಲಿ ಹೆಚ್ಚಿನವು ಮೂರು ಅಥವಾ ನಾಲ್ಕು ದಶಕಗಳಷ್ಟು ಹಳೆಯವು. ‘ಐವತ್ತು ವರ್ಷಗಳ ಹಿಂದೆ ಈ ಹವ್ಯಾಸ ತಂದೆಯಿಂದ ನನ್ನಲ್ಲಿ ಬೆಳೆಯಿತು. ಅವರಿಗೆ ಗಾರ್ಡನ್ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಅವರ ಸ್ನೇಹಿತರೊಬ್ಬರು ವಿದೇಶದಿಂದ ಬೋನ್ಸಾಯ್ ಪದ್ಧತಿ ಕುರಿತ ಪುಸ್ತಕವನ್ನು ತಂದು ಕೊಟ್ಟಿದ್ದರು’ ಎಂದು ಮಲ್ಯ ನೆನಪಿಸಿಕೊಂಡರು.

ಮಲ್ಯ ಅವರು ಐದು ದಶಕಗಳಲ್ಲಿ ಸಾವಿರ ಬೋನ್ಸಾಯ್ ಮರಗಳನ್ನು ಬೆಳೆಸಿದ್ದಾರೆ. ಅವರ ಉದ್ಯಾನದಲ್ಲಿ ಫೈಕಸ್, ಬೋಗನ್ವಿಲ್ಲಾ, ಬೀಚ್ವುಡ್ (ಜಮೆಲಿನಾ ಅರ್ಬೋರಿಯಾ) ಕಾಶ್ಯುರೀನಾ, ಬಾರ್ಬಡೋಸ್ ಚೆರ್ರಿ ಸೇರಿ ಹಲವು ವೈವಿಧ್ಯಮಯ ಮರಗಳು ಬೆಳೆದಿವೆ. ಜನಪ್ರಿಯ ಊಹೆಗೆ ವಿರುದ್ಧವಾಗಿ ಅನೇಕ ಮರಗಳು ಹಣ್ಣುಗಳನ್ನೂ ಕೊಡುತ್ತಿವೆ.

‘ನಮ್ಮಲ್ಲಿ ಹಣ್ಣು ಬಿಡುವ ಹಲವು ಮಾವಿನಮರಗಳಿವೆ. ಹಲವು ಮರಗಳಲ್ಲಿ ಹೂವುಗಳು ಅರಳುತ್ತವೆ’ ಎನ್ನುತ್ತಾರೆ ಮಲ್ಯ.

ಕೆಲವರಿಗೆ ಈ ಹವ್ಯಾಸವು ನಂತರ ವೃತ್ತಿಯಾಗುತ್ತದೆ. 1998ರಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಅನುಪಮಾ ವೇದಾಚಲ ಅವರು ಮೊದಲಿಗೆ ಈ ಕಲೆಗೆ ಮುಖಾಮುಖಿಯಾದರು. ಪ್ರಸ್ತುತ ಅವರು ಭಾರತದಾದ್ಯಂತ ಪ್ರಯಾಣಿಸಿ ಬೋನ್ಸಾಯ್ ಕುರಿತು ಕಾರ್ಯಾಗಾರ ಮತ್ತು ತರಬೇತಿಯನ್ನು ನೀಡುತ್ತಾರೆ.

‘ಬೋನ್ಸಾಯ್ ಪದ್ಧತಿಯು ಕಲೆ, ತೋಟಗಾರಿಕೆ ಮತ್ತು ವಿಜ್ಞಾನದ ಸಮ್ಮಿಶ್ರಣ. ಒಮ್ಮೆ ಕಲಿಕೆ ಆರಂಭಿಸಿದರೆ, ನಿಲ್ಲಿಸುವ ಮನಸ್ಸೇ ಆಗದು. ಕಲಿಯುವ ಹಂಬಲ ಹೆಚ್ಚುತ್ತಲೇ ಇರುತ್ತದೆ’ ಎನ್ನುತ್ತಾರೆ ಅನುಪಮಾ. ಈಗ ವೃತ್ತಿಪರ ಬೋನ್ಸಾಯ್ ಕಲಾವಿದೆಯಾಗಿರುವ ಅನುಪಮಾ, ಸುಮಾರು ಐದು ಸಾವಿರ ಮರಗಳನ್ನು ಬೆಳೆಸಿದ್ದಾರೆ.

ಸಮುದಾಯ ಕಲಿಕೆ

ಅನೇಕರಂತೆ ಅನುಪಮಾ ಅವರೂ ಸಮುದಾಯ ಕಲಿಕೆಯಿಂದಲೇ ಈ ಹವ್ಯಾಸ ಬೆಳೆಸಿಕೊಂಡರು. ಬೋನ್ಸಾಯ್ ಮರಗಳ ಪ್ರದರ್ಶನದಲ್ಲಿ ‘ವೃಕ್ಷ ಬೋನ್ಸಾಯ್ ಸರ್ಕಲ್’ ಎಂಬ ಕೂಟದೊಂದಿಗೆ ಸಂಪರ್ಕ ಸಾಧಿಸಿದರು. ಇದು 1990ರಲ್ಲಿ ಸ್ಥಾಪನೆಯಾದ ಬೆಂಗಳೂರು ಮೂಲದ ಕೂಟವಾಗಿದ್ದು, ನಿವೃತ್ತರು, ಎಂಜಿನಿಯರ್ಗಳು, ವೈದ್ಯರು, ಗಾಲ್ಫ್ ಆಟಗಾರರು ಸೇರಿ ಐವತ್ತು ಮಂದಿ ಸದಸ್ಯರನ್ನು ಒಳಗೊಂಡಿದೆ.

‘ಮೊದಲು ಗೃಹಿಣಿಯರು ಮಾತ್ರ ಕೂಟದಲ್ಲಿ ಇದ್ದರು. ಈಗ, ವೃತ್ತಿಪರರು, ನಿವೃತ್ತರೂ ಕೂಟದ ಭಾಗವಾಗಿದ್ದಾರೆ. ಇತ್ತೀಚೆಗೆ ಯುವ ಜನರು ಆನ್ಲೈನ್ ಮೂಲಕ ಕೂಟದ ಬಗ್ಗೆ ಮಾಹಿತಿ ತಿಳಿದು ಬೋನ್ಸಾಯ್ ಕಲೆ ಕುರಿತ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ’ ಎನ್ನುತ್ತಾರೆ ಅನುಪಮಾ.

‘ತಿಂಗಳಿಗೆ ಒಮ್ಮೆ ಭೇಟಿಯಾಗಿ, ವರ್ಷಕ್ಕೆ ಎರಡು ಬಾರಿ ಪ್ರದರ್ಶನ ಆಯೋಜಿಸುತ್ತೇವೆ. ಜಪಾನ್ ಮತ್ತು ಇಂಡೊನೇಷ್ಯಾದಲ್ಲಿ ಜರುಗುವ ಶೃಂಗಗಳಲ್ಲೂ ಭಾಗಿಯಾಗುತ್ತೇವೆ’ ಎನ್ನುತ್ತಾರೆ ‘ವೃಕ್ಷ’ದ ಅಧ್ಯಕ್ಷೆ ಉಮಾ ಎಸ್.

‘ಈ ಕಲೆಯು ಒತ್ತಡ ನಿವಾರಣೆಗೆ ಅತ್ಯುತ್ತಮ ಮಾರ್ಗ. ಬೋನ್ಸಾಯ್ ಪದ್ಧತಿಯಲ್ಲಿ ಕುಂಡಗಳಲ್ಲಿ ಮರಗಳನ್ನು ಬೆಳೆಸುವುದು ಹೆಚ್ಚು ವಿಶೇಷ ಎನಿಸುತ್ತದೆ’ ಎಂಬುದು ಉಮಾ ಅವರ ಮಾತು.

‘ನಾನು ಅಪಾರ್ಟ್ಮೆಂಟ್ ವಾಸಿ. ಇಲ್ಲಿನ ಪಾರ್ಕಿಂಗ್ ಪ್ರದೇಶದ ಬಳಿ ಕಿರಿದಾದ ಜಾಗ ಇದೆ. ಅಲ್ಲಿ ನೆಲದ ಮೇಲೆ ಯಾವ ಗಿಡಗಳನ್ನು ನೆಡುವುದೂ ಅಸಾಧ್ಯ. ಹಾಗಿದ್ದರೂ ಮೂರು ಹಂತದ ಗ್ಯಾಲರಿ ಮಾಡಿಸಿ ಐವತ್ತು ಬೋನ್ಸಾಯ್ ಮರಗಳನ್ನು ಇಡಲು ಸಾಧ್ಯವಾಗಿದೆ’ ಎಂದು ಉಮಾ ಹೇಳುತ್ತಾರೆ.

ಹೋಂ ಗಾರ್ಡನ್ಗಳ ಹೊರತಾಗಿ, ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತು ರಾಕ್ ಗಾರ್ಡನ್ಗಳು ಬೋನ್ಸಾಯ್ ಪ್ರಿಯರನ್ನು ಆಕರ್ಷಿಸುತ್ತಿವೆ. ಹೊಸ ವಿನ್ಯಾಸ ಮತ್ತು ವಿನೂತನ ತಳಿಯ ವೈವಿಧ್ಯಮಯ ಮರಗಳು ಹೆಚ್ಚಿನ ಜನರನ್ನು ಸೆಳೆಯುತ್ತವೆ ಮತ್ತು ಅವರಲ್ಲಿ ಬೋನ್ಸಾಯ್ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕುತ್ತವೆ. ಎರಡನೇ ಹಂತ ತಳಿ ಅಭಿವೃದ್ಧಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಭೇಟಿ ನೀಡಲು ಇಚ್ಛಿಸುವವರು ಹೊಸ ತಳಿಗಳು ಮತ್ತು ವಿನ್ಯಾಸಗಳ ಬೋನ್ಸಾಯ್ ಮರಗಳನ್ನು ನಿರೀಕ್ಷಿಸಬಹುದು.

‘ಲಾಲ್ಬಾಗ್ಗೆ ಭೇಟಿ ನೀಡಿದ ನಂತರ ಈ ಬಗ್ಗೆ ನನಗೆ ಆಸಕ್ತಿ ಮೂಡಿತು. ಅದರ ಕುರಿತು ಓದಲು ಪ್ರಾರಂಭಿಸಿದೆ. ಒಎಲ್ಎಕ್ಸ್ ಮತ್ತು ಕ್ವಿಕರ್ (Quikr) ವೇದಿಕೆಗಳಲ್ಲಿ ಕೆಲವು ಬೋನ್ಸಾಯ್ ಗಿಡಗಳನ್ನು ಖರೀದಿಸಿದೆ’ ಎಂದು ಅಜಯ್.ಎಚ್ ಹೇಳುತ್ತಾರೆ.

2014ರಲ್ಲಿ, ನಗರದ ಪ್ರತಿಯೊಂದು ಮನೆಗೆ ಒಂದು ಮರವನ್ನು ತರುವ ಗುರಿಯೊಂದಿಗೆ ಅವರು ಬೆಂಗಳೂರಿನಲ್ಲಿ ‘ಬೋನ್ಸಾಯ್ ಮನೆ’ ಎಂಬ ನರ್ಸರಿಯನ್ನು ಪ್ರಾರಂಭಿಸಿದರು.

‘ಹತ್ತು ವರ್ಷಗಳ ಹಿಂದೆ ಈ ಕಲೆಯ ಬಗ್ಗೆ ಅಲ್ಪಜ್ಞಾನ ಇತ್ತು. ಕಚ್ಚಾ ವಸ್ತುಗಳನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತು. ಅಗತ್ಯವಿರುವ ವಸ್ತುಗಳನ್ನು ನಾವೇ ಬೆಳೆಸಬೇಕಾಗಿತ್ತು ಮತ್ತು ಗಿಡಗಳನ್ನು ಪಡೆಯಲು ಭಾರತದಾದ್ಯಂತ ಪ್ರಯಾಣಿಸಬೇಕಾಗಿತ್ತು. ಆಗ, ಬೋನ್ಸಾಯ್ ಎಂಬ ಪದವೂ ಹೊಸದಾಗಿತ್ತು. ನೆರೆಹೊರೆಯವರಲ್ಲಿ ಅರಿವು ಮೂಡಿಸಲು ಕರಪತ್ರಗಳನ್ನು ಹಂಚುತ್ತಿದ್ದೆ’ ಎಂದು ನೆನಪಿಸಿಕೊಂಡರು.

ಸದ್ಯ ಬೋನ್ಸಾಯ್ ಕುರಿತ ಜ್ಞಾನವು ಬೆಳೆಯುತ್ತಿದೆ. ನಗರಗಳಲ್ಲಿನ ಸಣ್ಣ ನರ್ಸರಿಗಳಲ್ಲಿಯೂ ಹಲವು ವಿಧದ ಬೋನ್ಸಾಯ್ ಗಿಡಗಳು ಲಭ್ಯ ಇವೆ. ಲಾಲ್ಬಾಗ್ನಲ್ಲಿಯೂ ಬೋನ್ಸಾಯ್ ಮರಗಳು ಗ್ರಾಹಕರಿಗೆ ಲಭ್ಯ ಇವೆ.

‘ಜಪಾನ್ ಮತ್ತು ದಕ್ಷಿಣ ಏಷ್ಯಾದ ಕೆಲವು ದೇಶಗಳಿಂದ ಬೋನ್ಸಾಯ್ ಗಿಡಗಳನ್ನು ತರಿಸಿಕೊಳ್ಳುತ್ತೇವೆ. ಹೀಗಾಗಿ ನಮ್ಮಲ್ಲಿ ₹5,000 ದಿಂದ ₹20,000ವರೆಗೆ ಗಿಡಗಳು ಲಭ್ಯವಿವೆ’ ಎಂದು ಬೆಂಗಳೂರು ಉತ್ತರ ಗಾರ್ಡನ್ನ ಸಿಬ್ಬಂದಿಯೊಬ್ಬರು ತಿಳಿಸುತ್ತಾರೆ.

‘ಗ್ರಾಹಕರ ಅರಿವಿನ ಕೊರತೆಯೇ ಕೆಲವರಿಗೆ ಬಂಡವಾಳವಾಗುವ ಸಾಧ್ಯತೆ ಇರುತ್ತದೆ. ಸಣ್ಣ ಬೋನ್ಸಾಯ್ ಮರಕ್ಕೆ ₹1,000 ದಿಂದ ₹ 5000 ಇರುತ್ತದೆ. ಸೆಮಿ ಮೆಚ್ಯೂರ್ ಮರಗಳಿಗೆ ₹5,000 ದಿಂದ ₹15,000 ವರೆಗೆ ಬೆಲೆ ಇರುತ್ತದೆ. ಮೆಚ್ಯೂರ್ ಮರಗಳ ಬೆಲೆಯು ಹಲವು ಅಂಶಗಳನ್ನು ಆಧರಿಸಿರುತ್ತದೆ. ಇಂತಿಷ್ಟೇ ಬೆಲೆ ಎಂದು ನಿಗದಿಪಡಿಸಲು ಸಾಧ್ಯವಿಲ್ಲ’ ಎಂದು ಅಜಯ್ ವಿವರಿಸುತ್ತಾರೆ.

ಸ್ಥಳೀಯ ಪ್ರಭೇದಗಳಿಗೆ ಆದ್ಯತೆ

ಬೋನ್ಸಾಯ್ ವಿದೇಶಿ ಕಲೆ ಎಂಬ ಗ್ರಹಿಕೆಯು ಖರೀದಿದಾರರ ಆದ್ಯತೆ ಮೇಲೆ ಪ್ರಭಾವ ಬೀರುತ್ತದೆ. ‘ಜನರು ಚೀನಾ ಮೂಲದ ತಳಿಗಳನ್ನು ಖರೀದಿಸಲು ಬಯಸುತ್ತಾರೆ. ಅವುಗಳು ಸಣ್ಣ ಎಲೆಗಳನ್ನು ಹೊಂದಿರುತ್ತವೆ ಅಥವಾ ಹೆಚ್ಚು ‘ಆಲಂಕಾರಿಕ’ವಾಗಿ ಕಾಣುತ್ತವೆ. ಆದರೆ ನಾವು ಅರಳಿಮರ ಮತ್ತು ಆಲದಮರದಂತಹ ಸ್ಥಳೀಯ ಪ್ರಭೇದಗಳಿಗೆ ಆದ್ಯತೆ ನೀಡಬೇಕಾಗಿದೆ’ ಎಂದು ಅಜಯ್ ಹೇಳುತ್ತಾರೆ.

ಬೋನ್ಸಾಯ್ ಕಲೆಯು ಸಂಯಮ, ತಾಳ್ಮೆ ಮತ್ತು ಸತತ ಪರಿಶ್ರಮದ ಪ್ರಕ್ರಿಯೆಯಾಗಿದೆ. ಒಂದೇ ಮರದ ಬೆಳವಣಿಗೆಗೆ ಹಲವು ವರ್ಷಗಳ ಸೂಕ್ತ ಆರೈಕೆ ಬೇಕಾಗುತ್ತದೆ. ಆದರೆ ಪ್ರತಿಫಲಗಳು ಹಲವು ಪಟ್ಟು ಹೆಚ್ಚಿರುತ್ತದೆ ಎಂದು ಕಲಾವಿದರು ಒತ್ತಿ ಹೇಳುತ್ತಾರೆ. ‘ಬೋನ್ಸಾಯ್ ನಿಮಗೆ ಪ್ರಕೃತಿಯೊಂದಿಗೆ ಬೆರೆಯಲು ಅನುವು ಮಾಡಿಕೊಡುತ್ತದೆ. ದಿನಚರಿಯನ್ನು ರೂಪಿಸುತ್ತದೆ. ನಮ್ಮಲ್ಲಿ ಧ್ಯಾನಸ್ಥ ಮತ್ತು ಶಾಂತ ಸ್ವಭಾವವನ್ನು ಬೆಳೆಸುತ್ತದೆ’ ಎಂದು ಹೇಳುತ್ತಾರೆ ಅನುಪಮಾ.

‘ನಾವು ಪ್ರಕೃತಿಯ ಮಕ್ಕಳು. ಬೋನ್ಸಾಯ್ ಒಂದು ಉದ್ದೇಶದೊಂದಿಗೆ ವಿಭಿನ್ನವಾಗಿ ಏನನ್ನಾದರೂ ಮಾಡುವ ಅವಕಾಶವನ್ನು ನೀಡುತ್ತದೆ ಮತ್ತು ಪರಂಪರೆಗೆ ಕೊಡುಗೆ ನೀಡಲು ನಮ್ಮನ್ನು ಪ್ರೇರೇಪಿಸುತ್ತದೆ’ ಎಂದು ಅಜಯ್ ಹೇಳುತ್ತಾರೆ.

ಅನುವಾದ: ಕೀರ್ತಿಕುಮಾರಿ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.