ಭಾನುವಾರ, 8 ಮಾರ್ಚ್ 2026
×
ADVERTISEMENT

ಭೂಮಿಕಾ| ಕ್ಯಾನ್ಸರ್‌; ಇರಲಿ ಜಾಗೃತಿ

ಡಾ. ವೀಣಾ ಭಟ್‌
Published : 7 ಫೆಬ್ರುವರಿ 2026, 4:46 IST
Last Updated : 7 ಫೆಬ್ರುವರಿ 2026, 4:46 IST
ADVERTISEMENT
ಫಾಲೋ ಮಾಡಿ
Comments
ಮಹಿಳೆ–ಪುರುಷ ಇಬ್ಬರನ್ನೂ ಬಾಧಿಸುವ ಕ್ಯಾನ್ಸರ್ ಹೊರತಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಥವಾ ಮಹಿಳೆಯರಿಗೆ ಮಾತ್ರ ಬರುವ ಕೆಲವು ಕ್ಯಾನ್ಸರ್‌ಗಳಿವೆ. ಅವುಗಳಲ್ಲಿ ಸ್ತನ, ಗರ್ಭಗೊರಳು ಅಥವಾ ಸರ್ವೈಕಲ್‌, ಗರ್ಭಾಶಯ ಅಥವಾ ಎಂಡೋಮೆಟ್ರಿಯಲ್, ಅಂಡಾಶಯ, ಗೊಲ್ಲಿ ಅಥವಾ ವಲ್ವ, ಯೋನಿ, ಗರ್ಭನಾಳದ ಕ್ಯಾನ್ಸರ್‌ಗಳು ಪ್ರಮುಖವಾಗಿವೆ. ಅಜ್ಞಾನ, ಅರೆ ಅರಿವು, ಜಾಗೃತಿಯ ಕೊರತೆ, ಕ್ಯಾನ್ಸರ್ ಬಗೆಗಿನ ಹಲವಾರು ಮಿಥ್ಯೆಗಳು ಈ ರೋಗ ಬೇಗ ಪತ್ತೆಯಾಗದೇ ಇರುವುದಕ್ಕೆ ಮತ್ತು ಪತ್ತೆಯಾದರೂ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದಕ್ಕೆ ಸಾಮಾನ್ಯ ಕಾರಣಗಳು. ಒಮ್ಮೆ ಕ್ಯಾನ್ಸರ್ ಪತ್ತೆಯಾದರೆ ಎದೆಗುಂದಬಾರದು, ಪ್ರಸ್ತುತ ಲಭ್ಯವಿರುವ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅರಿತು ಚಿಕಿತ್ಸೆ ಪಡೆಯಬೇಕು; ಉಚಿತವಾಗಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಸ್ಥೈರ್ಯ ಬಹಳ ಮುಖ್ಯ ಎಂಬುದನ್ನು ವಿಶ್ವ ಕ್ಯಾನ್ಸರ್‌ ದಿನದ (ಫೆ. 4) ಈ ಸಂದರ್ಭ ನಮಗೆ ನೆನಪಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT