ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೊಬ್ಬರು ಪರಿಸರ ಜಾಗೃತಿ ಕುರಿತು ಪಾಠ ಮಾಡುತ್ತಿದ್ದರು. ಆಗ ಸಾಂದರ್ಭಿಕವಾಗಿ ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ತಿಳಿಸಿದರು. ಕುತೂಹಲಗೊಂಡ ಒಬ್ಬ ವಿದ್ಯಾರ್ಥಿ ಸಾಲುಮರದ ತಿಮ್ಮಕ್ಕ ಅವರ ಬಗೆಗಿನ ಸಾಕ್ಷ್ಯಚಿತ್ರವನ್ನು ನೋಡಿದ. ಅದರಿಂದ ಪ್ರೇರೇಪಿತನಾಗಿ ದೊಡ್ಡವನಾದ ಮೇಲೆ ತಾನೂ ಗಿಡಗಳನ್ನು ಬೆಳೆಸಬೇಕೆಂದುಕೊಂಡ. ಆತ ತನ್ನ ಮಾತು ಉಳಿಸಿಕೊಂಡ. ಅದರ ಫಲವಾಗಿ ಈಗ ಸಾವಿರಾರು ಮರಗಳು ನೆರಳು ಹಾಗೂ ಫಲ ನೀಡುವ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ. ಅಂದಹಾಗೆ ಈ ಪರಿಸರ ಪ್ರೇಮಿ ಸಿಂಧನೂರಿನ ಅಮರೇಗೌಡ ಮಲ್ಲಾಪುರ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅವರದು ಕೃಷಿಕ ಕುಟುಂಬ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಕಲಿಕೆಯಲ್ಲಿ ಚುರುಕಾಗಿದ್ದ. ಆದರೆ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಏಳನೇ ತರಗತಿಗೆ ಓದುವುದನ್ನು ನಿಲ್ಲಿಸಿ ಅಣ್ಣಂದಿರ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ.

2014 ರಲ್ಲಿ ಅಮರೇಗೌಡ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡರು. ಅಪಾರವಾಗಿ ಪ್ರೀತಿಸುತ್ತಿದ್ದ ಎರಡೂ ಜೀವಗಳು ತಮ್ಮಿಂದ ದೂರವಾದವು ಎಂಬುದನ್ನು ಅವರಿಗೆ ಅರಗಿಸಿಕೊಳ್ಳಲು ಕಷ್ಟವಾಯಿತು. ತಂದೆ–ತಾಯಿಯ ಸವಿನೆನಪು ಸದಾಕಾಲ ಉಳಿಯಬೇಕಾದರೆ ಅವರ ಹೆಸರಿನಲ್ಲಿ ಗಿಡಗಳನ್ನು ಬೆಳೆಸಬೇಕೆಂದು ತೀರ್ಮಾನಿಸಿದರು. ಅದೇ ವರ್ಷ ನೂರು ಗಿಡಗಳನ್ನು ನೆಟ್ಟರು. ಹೀಗೆ ಪ್ರಾರಂಭವಾದ ಹವ್ಯಾಸ ಈಗ ಚಳವಳಿಯಾಗಿ ರೂಪುಗೊಂಡಿದೆ. ಗಿಡಗಳನ್ನು ನೆಟ್ಟು ಪೋಷಿಸುವುದೇ ಅವರ ಬದುಕಾಗಿದೆ.

‘ಕಲ್ಯಾಣ ಕರ್ನಾಟಕ ಭಾಗವನ್ನು ಹಸಿರುನಾಡನ್ನಾಗಿ ಪರಿವರ್ತಿಸುವ ಉದ್ದೇಶದಿಂದ ‘ವನಸಿರಿ ಫೌಂಡೇಶನ್’ ಪ್ರಾರಂಭಿಸಿದ್ದೇನೆ. ಇದರಲ್ಲಿ 40ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. ಫೌಂಡೇಶನ್ ವತಿಯಿಂದ 40 ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದೇನೆ. ಅರವತ್ತು ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ಇತರರಿಗೆ ವಿತರಿಸಿದ್ದೇನೆ. ಸಿಂಧನೂರು, ಮಾನ್ವಿ, ಕಾರಟಗಿ, ಲಿಂಗಸೂಗೂರು, ಮಸ್ಕಿ, ರಾಯಚೂರು, ದೇವದುರ್ಗ, ಸಿರಗುಪ್ಪ, ಬಳ್ಳಾರಿ, ಗಂಗಾವತಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಶಾಲೆ-ಕಾಲೇಜು, ಹಾಸ್ಟೆಲ್, ಪೋಲೀಸ್ ಠಾಣೆ, ಸ್ಮಶಾನ, ರಸ್ತೆಬದಿ–ಹೀಗೆ ಎಲ್ಲೆಲ್ಲಿ ಖಾಲಿ ಜಾಗ ಇರುತ್ತದೆಯೋ ಅಲ್ಲೆಲ್ಲಾ ಗಿಡಗಳನ್ನು ನೆಡುವ ಕಾಯಕದಲ್ಲಿ ನಿರತನಾಗಿದ್ದೇನೆ’ ಎನ್ನುತ್ತಾರೆ ಅಮರೇಗೌಡ.

ಬೇವು, ಹೊಂಗೆ, ಅರಳಿ, ನೇರಳೆ, ಹಲಸು, ಸಿಹಿಹುಣಸೆ, ಮಹಾಘನಿ, ಹೆಬ್ಬೇವು ಮುಂತಾದ ಸ್ಥಳೀಯ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಕೇವಲ ಗಿಡಗಳನ್ನು ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸುವ, ನೀರುಣಿಸುವ ಹಾಗೂ ಕಾಲಕಾಲಕ್ಕೆ ಟೊಂಗೆಗಳನ್ನು ಕತ್ತರಿಸಿ ಅವು ನೇರವಾಗಿ ಬೆಳೆಯುವಂತೆ ಮಾಡುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಪ್ರತಿ ವರ್ಷ ಇವರು ‘ರಕ್ಷಾಬಂಧನ’ವನ್ನು ‘ವೃಕ್ಷಬಂಧನ’ವನ್ನಾಗಿ ಆಚರಿಸುತ್ತಾರೆ. ಸುತ್ತಮುತ್ತಲಿನ ಗಿಡಗಳಿಗೆ ರಕ್ಷೆ ನೀಡುವ ಮೂಲಕ ವೃಕ್ಷಾಬಂಧನವಾಗಿಸುತ್ತಾರೆ. ಗಣೇಶನ ಹಬ್ಬದಲ್ಲಿ 200ಕ್ಕೂ ಹೆಚ್ಚು ಬೀಜದ ಗಣೇಶನ ಮೂರ್ತಿಗಳನ್ನು ತಯಾರಿಸಿ ಉಚಿತವಾಗಿ ನೀಡುವ ಮೂಲಕ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಒತ್ತು ನೀಡುತ್ತಾರೆ.

ವೃಕ್ಷಗಳ ರಕ್ಷಣೆ ಮಾಡಲು ‘ವೃಕ್ಷ ರಥ’ ವಾಹನ ಪ್ರಾರಂಭಿಸುವ ಮೂಲಕ ಗಿಡಮರಗಳ ರಕ್ಷಣೆಗೆ ಮುಂದಾಗಿದ್ದಾರೆ. ತಮ್ಮದೇ ಟ್ಯಾಂಕರ್ ಹೊಂದಿದ್ದು, ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುತ್ತಾರೆ. ಸಸಿಗಳು ಸೇರಿದಂತೆ ಗಿಡ ನೆಡಲು ಬೇಕಾದ ಗುದ್ದಲಿ, ಸನಿಕೆ, ಹಾರೆ, ಮುಂತಾದ ಪರಿಕರಗಳು ವೃಕ್ಷರಥದಲ್ಲಿ ಸದಾ ಸಿದ್ದವಿರುತ್ತವೆ. ವೃಕ್ಷರಥ ಮತ್ತು ಟ್ಯಾಂಕರ್ಗೆ ದಾನಿಗಳ ಅಲ್ಪ ನೆರವಿದ್ದು ಉಳಿದಂತೆ ಎಲ್ಲವನ್ನೂ ತಾವೇ ಭರಿಸಿದ್ದಾರೆ.

ಮದುವೆ, ನಾಮಕರಣ, ಜನ್ಮದಿನ, ವಾರ್ಷಿಕೋತ್ಸವ ಮುಂತಾದ ಶುಭ ಸಮಾರಂಭಗಳಲ್ಲಿ ಸಸಿಗಳನ್ನು ನೀಡುವ ಮೂಲಕ ವೃಕ್ಷ ಸಂಸ್ಕತಿಯನ್ನು ಹುಟ್ಟು ಹಾಕಿದ್ದಾರೆ. ಪ್ರತಿ ವರ್ಷ ಐದು ಸಾವಿರ ಸಸಿಗಳನ್ನು ಅರಣ್ಯ ಇಲಾಖೆಯಿಂದ ಖರೀದಿಸಿ ಇತರರಿಗೆ ವಿತರಿಸುತ್ತಾರೆ. ಮಳೆಗಾಲ ಪ್ರಾರಂಭವಾಗುವ ವೇಳೆಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಹಾಯದಿಂದ ಬೀಜದುಂಡೆ ತಯಾರಿಸುತ್ತಾರೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗುಡ್ಡ-ಬೆಟ್ಟ, ಬಯಲು, ಹಳ್ಳ-ಕೊಳ್ಳಗಳ ಬಯಲು, ಮುಂತಾದ ಕಡೆಗಳಲ್ಲಿ ಬೀಜದುಂಡೆಗಳನ್ನು ಎಸೆದು ಸಸ್ಯಗಳು ಬೆಳೆಸಲು ಶ್ರಮಿಸುತ್ತಾರೆ. ಸಸಿಗಳ ಖರೀದಿ, ವೃಕ್ಷರಥ ಖರೀದಿ, ಟ್ಯಾಂಕರ್ ಖರೀದಿ, ಸಸಿಗಳ ರಕ್ಷಣೆ... ಹೀಗೆ ಇತರೆ ಕೆಲಸಗಾಗಿ ಬಳಕೆಯಾದ ಹಣವನ್ನು ಹೊಂದಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ.

ವೃಕ್ಷ ಸಂಸ್ಕೃತಿಯೇ ನಿತ್ಯ ಕಾಯಕ

ಅಮರೇಗೌಡರಿಗೆ ಗಿಡಗಳನ್ನು ಬೆಳೆಸುವುದೇ ನಿತ್ಯದ ಕಾಯಕ. ಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲೇ ಅವರ ಅಂದಿನ ದಿನದ ಕಾರ್ಯ ನಿರ್ಧಾರವಾಗುತ್ತದೆ. ಅಂದು ಎಲ್ಲೆಲ್ಲಿ ಹೊಸ ಸಸಿಗಳನ್ನು ನೆಡಬೇಕು. ಎಲ್ಲೆಲ್ಲಿ ಸಸಿಗಳಿಗೆ ನೀರುಣಿಸಬೇಕು, ಎಲ್ಲೆಲ್ಲ ಸಸಿಗಳನ್ನು ಪೋಷಣೆ ಮಾಡಬೇಕು ಪಟ್ಟಿ ಮಾಡಿಕೊಳ್ಳುತ್ತಾರೆ. ಅದರಂತೆಯೇ ಕೆಲಸ ಮಾಡುತ್ತಾರೆ. ಅಂದಿನ ಕಾರ್ಯಗಳ ಅವಲೋಕನ ಮಾಡುತ್ತಾ ರಾತ್ರಿ ಹಾಸಿಗೆಗೆ ಒರಗುತ್ತಾರೆ. ಇದು ಅವರ ನಿತ್ಯದ ಕಾಯಕ.

ಇವರ ಅವಿರತ ಹಾಗೂ ನಿಸ್ವಾರ್ಥ ಸೇವೆಯನ್ನು ಗಮನಿಸಿದ ಕರ್ನಾಟಕ ಸರ್ಕಾರ 2022-23ನೇ ಸಾಲಿನ ‘ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ 50ನೇ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇವರಿಗೆ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿದೆ. 2019ರಲ್ಲಿ ಇವರಿಗೆ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ನೀಡುವ ‘ಕಲಾಂ ಗೋಲ್ಡನ್ ಪ್ರಶಸ್ತಿ’ಯೂ ಲಭಿಸಿದೆ. ಫಲಭರಿತ ಮರ ಬಾಗುವಂತೆ, ಅಮರೇಗೌಡ ಯಾರೊಂದಿಗೂ ಬೀಗದೇ ಎಲ್ಲರೊಂದಿಗೂ ಬಾಗುತ್ತಲೇ ತನ್ನ ಸೇವಾ ಕಾರ್ಯ ಮುಂದುವರೆಸಿದ್ದಾರೆ.

ಬಾಲ್ಯದಲ್ಲೇ ಮಕ್ಕಳ ಮನಸ್ಸಿನಲ್ಲಿ ಕನಸಿನ ಬೀಜಗಳನ್ನು ಬಿತ್ತಿದರೆ ಸಾಕು. ಅವರು ಬೆಳೆಯುವಂತೆ, ಕನಸುಗಳು ಬೆಳೆಯುತ್ತವೆ, ಮುಂದೆ ಸಾಕಾರಗೊಳ್ಳುತ್ತವೆ.

ಪ್ರಾಣಿ–ಪಕ್ಷಿಗಳಿಗೆ ಆಹಾರ

ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ತಣಿಸಲು ಮಡಿಕೆಗಳು, ಮಣ್ಣಿನ ತಟ್ಟೆಗಳು ಅಥವಾ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಅಳವಡಿಸಿ ನೀರುಣಿಸುತ್ತಾರೆ. ಖಾಲಿ ಡಬ್ಬಗಳನ್ನು ಕತ್ತರಿಸಿ ಅವುಗಳಲ್ಲಿ ಜೋಳ, ಅಕ್ಕಿ, ರಾಗಿಯಂತಹ ಧಾನ್ಯಗಳನ್ನು ಇರಿಸಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.