ನಾಲ್ಕು ದಶಕಗಳಿಂದ ಜಾತಿ ಕುದುರೆ ಸಾಕುವ ಹವ್ಯಾಸವಿದೆ. ಇಪ್ಪತ್ತು ವರ್ಷಗಳ ಹಿಂದೆ ಮೂವತ್ತಕ್ಕೂ ಹೆಚ್ಚು ಕುದುರೆಗಳಿದ್ದವು. ಇದೀಗ ಆರು ಕುದುರೆಗಳಿವೆ. ಕುದುರೆ ಸಂತತಿ ಉಳಿಯಬೇಕು. ಬೆಳೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಕುದುರೆ ಸಂತೆಯನ್ನು ಆಯೋಜನೆ ಮಾಡಲಾಗುತ್ತಿದೆ.
– ಕಲ್ಯಾಣರಾವ್ ದೇಶಪಾಂಡೆ, ಕುದುರೆ ಸಂತೆ ಆಯೋಜಕರು
ಹಿಂದೆ ರಾಜ–ಮಹಾರಾಜರು, ಶ್ರೀಮಂತರು ಕುದುರೆಗಳನ್ನು ಸಾಕುತ್ತಿದ್ದರು. ಅಂತಹ ಕುದುರೆಗಳನ್ನು ಸಾಕಿ ಸಲಹುವ ಖುಷಿ ಬೇರೊಂದರಲ್ಲಿ ಸಿಗುವುದಿಲ್ಲ. ನಮ್ಮ ಬಳಿ ತಲಾ ₹10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ನಾಲ್ಕು ಕುದುರೆಗಳಿವೆ. ರಾಯಬಾಗ ಸಂತೆಯಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ.