ಭಾರತದಲ್ಲಿರುವ ದೇವರ ಕಾಡುಗಳ ಕುರಿತ ಅಧಿಕೃತ ಅಧ್ಯಯನ 1891ರಲ್ಲಿ ಆರಂಭವಾಗಿ ಇಂದಿನವರೆಗೂ ಮುಂದುವರಿದು ಬಂದಿದೆ. ಭಾರತದ ದೇವರ ಕಾಡುಗಳ ಅನನ್ಯತೆಯನ್ನು ಹಾಗೂ ಇಲ್ಲಿನ ನಿಸರ್ಗ ಮತ್ತು ಮನುಷ್ಯರ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಮೊದಲ ಬಾರಿಗೆ ಗುರುತಿಸಿ, ಭಾರತದ ಅರಣ್ಯ ಇಲಾಖೆಗೆ ಭದ್ರ ಬುನಾದಿ ಹಾಕಿದವರು ಡಯಟ್ರಿಚ್ ಬ್ರ್ಯಾಂಡಿಸ್ ಎಂಬ ಜರ್ಮನ್ ವ್ಯಕ್ತಿ. ಇವರು ಭಾರತದ ಪ್ರಥಮ ಇನ್ಸ್ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಹುದ್ದೆಗೇರಿದವರು. 1868 ರಲ್ಲಿ ಆಗಿನ ಮೈಸೂರು ಸಂಸ್ಥಾನದಲ್ಲಿದ್ದ ಕೊಡಗು ಪ್ರದೇಶದ ಅರಣ್ಯಗಳು, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಒರಿಸ್ಸಾ ಅರಣ್ಯ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನರ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿದ್ದರು. ಹಲವು ಅಧ್ಯಯನಗಳ ನಡುವೆಯೂ ಭಾರತದಲ್ಲಿ ಅಧಿಕೃತವಾಗಿ ಇರುವ ದೇವರ ಕಾಡುಗಳ ಸಂಖ್ಯೆ ಕುರಿತಂತೆ ನಿಖರವಾದ ಮಾಹಿತಿ ಇಲ್ಲ. ಸದ್ಯಕ್ಕಿರುವ ಮಾಹಿತಿ ಮತ್ತು ಅಂಕಿಅಂಶಗಳು ಸಹ ಗೊಂದಲದ ಗೂಡಾಗಿವೆ. 2006 ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಉಡುಪಿ ಸೇರಿದಂತೆ) 1011 ದೇವರ ಕಾಡುಗಳು ಪತ್ತೆಯಾಗಿವೆ. ಇನ್ನು ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾಡುಗಳನ್ನು ಸೇರಿಸಿದರೆ, ಕರ್ನಾಟಕದ ದೇವರಕಾಡುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ಗ್ರಾಮದ ನಾಗರಿಕ ಟ್ರಸ್ಟ್ 2006 ರಲ್ಲಿ ಕೆ.ಪ್ರಭಾಕರ ಆಚಾರ್ಯ ಮತ್ತು ವಿದ್ಯಾ ನಾಯಕ್ ಎಂಬ ತಜ್ಞರ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 460 ಭೂತವನಗಳು ಮತ್ತು 651 ನಾಗಬನಗಳು ಪತ್ತೆಯಾಗಿವೆ. ಅಲ್ಲಿನ ಸ್ಥಳಗಳಲ್ಲಿ ಇರುವ ಸಸ್ಯ ಮತ್ತು ಮರಗಳ ಪ್ರಭೇದ ಹಾಗೂ ಪ್ರಾಣಿ, ಪಕ್ಷಿಗಳನ್ನು ಸಹ ಗುರುತಿಸಿ ದಾಖಲಿಸಿದ್ದು, ಇದು ಇತ್ತೀಚೆಗಿನ ದಿನಗಳಲ್ಲಿ ಬಂದ ಅತ್ಯುತ್ತಮ ಸಮೀಕ್ಷಾ ವರದಿಯಾಗಿದೆ. ಕ್ರಿ.ಶ. 1870 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿಯಾಗಿ ಕರ್ನಾಟಕದಲ್ಲಿ ಪ್ರವಾಸ ಮಾಡಿ ದೇವರ ಕಾಡುಗಳ ಬಗ್ಗೆ ಅಧ್ಯಯನ ನಡೆಸಿರುವ ಬಖನನ್ ಪ್ರತಿಯೊಂದು ಕಾಡುಗಳು ಆಯಾ ಗ್ರಾಮದೇವತೆಯ ಆಸ್ತಿಯೆಂಬಂತೆ ಇದ್ದವು ಎಂದು ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂತಪ್ಪನ ಕಾಡು, ಜಕ್ಕಪ್ಪನ ಕಾಡು, ಹುಲಿದೇವರ ಕಾಡು, ಮಾರಿಯಮ್ಮನ ಕಾಡುಗಳು ಸಿದ್ಧಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದ್ದವು ಎಂಬುದು ಬುಖನನ್ ವರದಿಯಲ್ಲಿ ದಾಖಲಾಗಿದೆ. ಜೊತೆಗೆ ಇಲ್ಲಿ ವಾಸಿಸುವ ಹವ್ಯಕ ಬ್ರಾಹ್ಮಣರು ಸಹ ಇಂತಹದ್ದೇ ಮಾದರಿಯ 116 ಮೆಣಸಿನ ಕಾಡುಗಳನ್ನು ಪೋಷಿಸಿದ್ದರು ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ 1,214 ದೇವರ ಕಾಡುಗಳಿದ್ದವು ಎಂಬುದು ಬುಖನನ್ ಅಧ್ಯಯನದಲ್ಲಿ ಕಂಡು ಬಂದಿದೆ. ಇವುಗಳಲ್ಲಿ ಕೆಲವು ದೇವರ ಕಾಡುಗಳಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಮಾತ್ರ ಮರ ಕಡಿಯಲು ಅನುಮತಿಯಿತ್ತು ಎಂದು ತಿಳಿಸಿರುವ ಅವರು, ಮತ್ತೆ ಕೆಲವು ದೇವರ ಕಾಡುಗಳಿಗೆ ಮನುಷ್ಯ ಪ್ರವೇಶ ನಿಷಿದ್ಧವಾಗಿತ್ತು ಎಂದು ದಾಖಲಿಸಿದ್ದಾರೆ. ಅಂತಹ ಕಾಡುಗಳಲ್ಲಿ ಸ್ವರ್ಗಸ್ಥರಾದವರು ವಾಸಿಸುವುದರಿಂದ, ಆ ಕಾಡುಗಳಲ್ಲಿ ಜೀವಂತ ಮನುಷ್ಯರ ಹೆಜ್ಜೆ ದಾಖಲಿಸಬಾರದು ಎಂಬುದು ಕೊಡವರ ನಂಬಿಕೆಯಾಗಿತ್ತು ಎಂಬ ಅಂಶ ವರದಿಯಲ್ಲಿದೆ. ಈ ಕಾರಣಕ್ಕಾಗಿ ಬ್ರಿಟಿಷರು ಇಂತಹ ದೇವರ ಕಾಡುಗಳಲ್ಲಿ ಬೇಟೆಯಾಡುತ್ತಿರಲಿಲ್ಲ.

ಯುನೆಸ್ಕೊ ವರದಿಯ ಪ್ರಕಾರ ಜಗತ್ತಿನಲ್ಲಿ 1.47 ಲಕ್ಷ ದೇವರ ಕಾಡುಗಳಿವೆ ಎಂದು ಅಂದಾಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ದೇವರ ಕಾಡುಗಳ ಬಗ್ಗೆ 2011 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ರಾಜಶ್ರೀ ರೇ, ಸುಭಾಷ್ ಚಂದ್ರನ್ ಮತ್ತು ಟಿ.ವಿ. ರಾಮಚಂದ್ರನ್ ಸಮೀಕ್ಷೆ ನಡೆಸಿ, ಅಲ್ಲಿರುವ 54 ದೇವರ ಕಾಡುಗಳಲ್ಲಿರುವ ಜೀವ ವೈವಿಧ್ಯತೆಯನ್ನು ದಾಖಲಿಸಿದ್ದಾರೆ. ಕಡಗೋಡು ಚೌಡಮ್ಮ ಬನ, ಚೌಡಿ ಬನ, ಜೆಟ್ಟಿ ಬನ, ದೇವರತ್ತಿ ಕಾನು, ಬೀರಪ್ಪ ಮತ್ತು ಚೌಡಿ ಎಂಬ ದೇವರ ಹೆಸರುಗಳಲ್ಲಿರುವ ಕಾಡುಗಳನ್ನು ಗುರುತಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಬನಗಳಿಗೆ ಸೂಕ್ತ ರಕ್ಷಣೆಯಿಲ್ಲದೆ, ಅಲ್ಲಿನ ಮರಗಳು ಕಾಡುಗಳ್ಳರ ಪಾಲಾಗುತ್ತಿರುವ ಅಂಶ ತಜ್ಞರ ವರದಿಯಲ್ಲಿ ದಾಖಲಾಗಿದೆ. ಕೊಡಗಿನಲ್ಲಿ ಕಳೆದ ಎರಡು ದಶಕಗಳಿಂದ ವಿಸ್ತರಣೆಗೊಂಡ ಕಾಫಿ ಪ್ಲಾಂಟೇಶನ್ನಿಂದಾಗಿ 1891ರಲ್ಲಿ 755 ಇದ್ದ ದೇವರ ಕಾಡುಗಳು ಈಗ 346 ಕ್ಕೆ ಇಳಿದಿವೆ.

ದೇಶದ ವಿವಿಧೆಡೆ ಇರುವ ದೇವರ ಕಾಡುಗಳಲ್ಲಿ ಹಲವನ್ನು ರಾಜ್ಯ ಸರ್ಕಾರಗಳ ಅರಣ್ಯ ಇಲಾಖೆಗಳು ಸಂರಕ್ಷಿಸಿಕೊಂಡು ಬರುತ್ತಿವೆ. ಇನ್ನೂ ಕೆಲವು ದೇವರ ಕಾಡುಗಳು, ದೇವಸ್ಥಾನಗಳ ಸಮಿತಿ, ಗ್ರಾಮ ಸಮಿತಿ ಹಾಗೂ ಕೇರಳ ರಾಜ್ಯದ ಹಲವೆಡೆ ಕೆಲವು ಕುಟುಂಬಗಳ ಮೇಲ್ವಿಚಾರಣೆಯಲ್ಲಿವೆ. ಇವೊತ್ತಿಗೂ ಈ ದೇಶದಲ್ಲಿ ಅರಣ್ಯ, ಅಪರೂಪದ ಸಸ್ಯ ಪ್ರಭೇದಗಳು, ಪ್ರಾಣಿ ಮತ್ತು ಒಂದಿಷ್ಟು ಪಕ್ಷಿಗಳು ಸುರಕ್ಷಿತವಾಗಿದ್ದರೆ, ಅದು ದೇವರ ಕಾಡುಗಳಲ್ಲಿ ಮಾತ್ರ.

ನಮ್ಮ ಪೂರ್ವಿಕರ ಜ್ಞಾನಶಿಸ್ತುಗಳಲ್ಲಿ, ಭೂಮಿ, ನೀರು, ಪರಿಸರ ಇವೆಲ್ಲವನ್ನೂ ದೈವೀಕರಿಸಿ ಆರಾಧಿಸುವ, ಸಂರಕ್ಷಿಸುವ ಭಾವನೆ ಬೆಳೆದು ಬಂದಿತ್ತು. ವೇದಗಳಲ್ಲಿ ಒಂದಾದ ಅಥರ್ವ ವೇದದಲ್ಲಿ ದುರಾಸೆ ಎಂಬುದು ಜನರ ಒಡಲನ್ನು ಸುಡುವ ಅಗ್ನಿ ಎಂಬ ಸೂಕ್ತಿ ಇದೆ. ಈ ಕಾರಣಕ್ಕಾಗಿಯೇ ನಮ್ಮ ವೇದಗಳು ಮತ್ತು ಪುರಾಣಗಳು ಭೂಮಿ, ಆಕಾಶ, ನೀರು, ವಾಯು, ಅಗ್ನಿ ಇವೆಲ್ಲವುಗಳಿಗೆ ದೈವ ಸ್ವರೂಪ ನೀಡಿವೆ. ಭೂಮಿಯನ್ನು ದೇವತೆ, ನೀರನ್ನು ಗಂಗೆ ಎಂತಲೂ, ಮಳೆಯನ್ನು ವರುಣ, ಗಾಳಿಗೆ ಇಂದ್ರ, ಬೆಂಕಿಗೆ ಅಗ್ನಿ, ಆಕಾಶಕ್ಕೆ ಸೂರ್ಯ, ಚಂದ್ರರೆಂಬ ದೇವತೆಗಳು... ಹೀಗೆ ತಮ್ಮ ಭಾವಕ್ಕೆ, ಭಕ್ತಿಗೆ ಅನುಸಾರವಾಗಿ ಪೂಜಿಸುತ್ತಾ ಬಂದ ಕಾರಣ ನಿಸರ್ಗದ ಮೇಲೆ ಒಂದಿಷ್ಟು ಅಭಿಮಾನ ಮತ್ತು ಕಾಳಜಿಗಳಿದ್ದವು. ಇಂತಹ ಸಂಸ್ಕಾರಗಳು ಭಾರತದುದ್ದಕ್ಕೂ ಪ್ರಾದೇಶಿಕ ಆಚರಣೆಗೆ ತಕ್ಕಂತೆ ಬಳಕೆಯಲ್ಲಿದ್ದ ಕಾರಣದಿಂದಾಗಿ ಭಾರತದ ಪಶ್ಚಿಮ ಮತ್ತು ಈಶಾನ್ಯ ಭಾರತದ ಘಟ್ಟದ ಪ್ರದೇಶಗಳ ಅರಣ್ಯದಲ್ಲಿ ಅತಿ ಹೆಚ್ಚು ಇಂತಹ ದೇವರ ಕಾಡುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.