ನಾನು ‘ಗುಬ್ಬಚ್ಚಿಗಳು’ ಎಂಬ ಹೆಸರಿನ ಮಕ್ಕಳ ಸಿನಿಮಾ ಮಾಡಿ ಸುಮಾರು ಐದು ವರ್ಷ ಆಯಿತು. ಅದರಲ್ಲಿ ನಟಿಸಿದ ಪ್ರಕೃತಿ ಇವತ್ತು ಮತ್ತೊಮ್ಮೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಪಡೆದಿದ್ದಾಳೆ. ಅಭಿಲಾಷ ಇಂಜಿನಿಯರಿಂಗ್ ಓದುತ್ತಿದ್ದಾನೆ! ನಾನೂ ಮೂರನೇ ಸಿನಿಮಾ ‘ಸಕ್ಕರೆ’ ಮಾಡಿ ಮುಂದಿನ ಚಿತ್ರದ ಬಗ್ಗೆ ಯೋಚಿಸಲಾರಂಭಿಸಿದ್ದೇನೆ.

ಆದರೂ ಮೊದಲ ಸಿನಿಮಾ, ಅದೂ ಮಕ್ಕಳ ಸಿನಿಮಾದ ಸಂತೋಷಗಳನ್ನು ನೆನಪಿಸಿಕೊಳ್ಳುವುದೇ ಒಂದು ಸಂತೋಷದ ವಿಷಯ. ‘ಗುಬ್ಬಚ್ಚಿಗಳು’ ಚಿತ್ರದಲ್ಲಿ ನಾನು ಚಿತ್ರರಂಗಕ್ಕೆ ಅಂಬೆಗಾಲಿಡುತ್ತಾ ಪ್ರವೇಶಿಸಿದ್ದು. ನಾನೇ ಬಚ್ಚ, ನನ್ನ ಜೊತೆ ನಿಜವಾದ ಇಬ್ಬರು ಮಕ್ಕಳು! ಇದು ಒಂಥರಾ ವಿಚಿತ್ರ ಅನುಭವ.

ಇಂದು ವೇಗವಾಗಿ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳನ್ನು ಹುಡುಕಿಕೊಂಡು ಮನೆಯಿಂದ ಹೊರಗೆ ಅಡಿಯಿಡುವ ಇಬ್ಬರು ಮಕ್ಕಳು ಹಾಗೂ ಅವರ ಮೂಲಕ ನಮ್ಮ ಸುತ್ತ ಬದಲಾಗುತ್ತಿರುವ ಪರಿಸರ, ಆದ್ಯತೆಗಳ ಚಿತ್ರಣ ನಮ್ಮ ಚಿತ್ರದ ಕಥಾನಕವಾಗಿತ್ತು. ಇದಕ್ಕೆ ಗೆಳೆಯ ಇಸ್ಮಾಯಿಲ್ ಅವರ ಕಥೆಯೂ, ಬಿ. ಸುರೇಶ ಹಾಗೂ ಶೈಲಜಾ ನಾಗ್ ಅವರ ನಿರ್ಮಾಣವೂ ಇತ್ತು.

ಚಿತ್ರಕಥೆ ಒಂದು ಹಂತಕ್ಕೆ ಮುಗಿಸಿಕೊಂಡು ಪಾತ್ರಧಾರಿಗಳ ಅನ್ವೇಷಣೆಯನ್ನು ಆರಂಭಿಸಿದಾಗ ಅನೇಕ ಮಕ್ಕಳನ್ನು ನಾವು ಭೇಟಿಯಾದೆವು. ಆಗ ಮಕ್ಕಳನ್ನು ಮಾತನಾಡಿಸಲು ನನ್ನ ಮೊದಲ ಪ್ರಶ್ನೆ, ‘ಗುಬ್ಬಚ್ಚಿ ನೋಡಿದ್ದೀಯಾ?’. ಮಕ್ಕಳು ಅನೇಕ ಬಾರಿ ಗುಬ್ಬಚ್ಚಿ ಎಂದಾಗ ಮಿಕಮಿಕ ನೋಡುತ್ತಿದ್ದರು. ಆಮೇಲೆ ‘ಸ್ಪಾರೋ’ ಎಂದಾಗ ಅದರಲ್ಲಿ ಅನೇಕ ಮಕ್ಕಳ ಮುಖ ಬೆಳಗಿತು! ಇಂಗ್ಲೀಷು ಮೀಡಿಯಮ್ಮ್ ಐಕ್ಳು ಅವು, ಪಾಪ. ಹೋ! ‘ನೋಡಿದ್ದೇವೆ’ ಎಂದ ಎಷ್ಟೋ ಮಕ್ಕಳಿಗೆ ಎರಡನೇ ಪ್ರಶ್ನೆ, ‘ಎಷ್ಟು ದೊಡ್ಡದಿರುತ್ತೆ ಅದು?’.

ಹದ್ದಿನ ಗಾತ್ರದಿಂದ ಕೋಳಿಯ ಗಾತ್ರದವರೆಗೆ ಅನೇಕ ಗಾತ್ರಗಳನ್ನು ತೋರಿಸಿದವು ಮಕ್ಕಳು. ಹೀಗೆ ಇಂದಿನ ಮಕ್ಕಳ ಶಿಕ್ಷಣ, ಅವರ ಕಲಿಕೆ, ಅರಿವುಗಳ ಬಗ್ಗೆ ಒಂದು ಹೊಸ ನೋಟವೇ ನಮಗೆ ಪಾತ್ರಾನ್ವೇಷಣೆಯ ಸಂದರ್ಭದಲ್ಲೇ ದೊರೆಯಿತು. ಇವೆಲ್ಲವನ್ನೂ ಚಿತ್ರಕಥೆಯಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದೆ.

ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಮಕ್ಕಳ ಆದ್ಯತೆಗಳೇ ಭಿನ್ನವಾಗಿರುತ್ತವೆ. ಇಂಥಾ ಶಾಟುಗಳನ್ನು ಇಷ್ಟು ವೇಳೆಯೊಳಗೆ ಮುಗಿಸಬೇಕು ಇತ್ಯಾದಿ ಯಾವುದೇ ಒತ್ತಡಗಳು ಅವರ ಮೇಲಿರುವುದಿಲ್ಲ. ನೀವು ಅಭಿನಯಿಸಿ ತೋರಿಸಿದರೆ ಪರಿಷ್ಕಾರವಾಗಿ ಅಣಕ ಮಾಡುತ್ತಾರೆ. ಅವರಿಗೇ ಅಭಿನಯಿಸಲು ಬಿಟ್ಟರೆ ಅವರಂತೆಯೇ ಅಭಿನಯಿಸುತ್ತಾರೆ. ಎರಡೂ ವಿಧದಲ್ಲೂ ಸರಳ ವಿಧಾನ.

ಕಥೆಯನ್ನು ಹಿಂದೆ ಮುಂದಾಗಿ ಚಿತ್ರೀಕರಣದ ಅನುಕೂಲಕ್ಕಾಗಿ ಚಿತ್ರೀಕರಿಸುತ್ತಿದ್ದರೂ, ಆ ಎರಡೂ ಮಕ್ಕಳ ಮನಸ್ಸಲ್ಲಿ ಒಂದು ಕಥೆ ಇಡಿಯಾಗಿಯೇ ರೂಪುಗೊಳ್ಳುತ್ತಿದ್ದದ್ದನ್ನು ನಾನು ಕಂಡುಕೊಂಡಿದ್ದೆ. ಯಾವುದೋ ಒಂದು ದೃಶ್ಯದ ಜೋಡಣೆಯಾಗಿ ಇನ್ನೊಂದು ದೃಶ್ಯವನ್ನು ಚಿತ್ರೀಕರಿಸುತ್ತಿರಬೇಕಾದರೆ, ‘ಅಂಕಲ್, ಅಲ್ಲಿ ಹೀಗಿತ್ತು, ಇಲ್ಲಿ ಹೀಗಿದೆಯಲ್ಲಾ? ಅದು ಹಾಗಿರಬೇಕಲ್ಲಾ?’ ಎಂದು ಕಲಾನಿರ್ದೇಶನದ ಯಾವುದೋ ಒಂದು ಸೂಕ್ಷ್ಮವನ್ನು ಮಗು ಪ್ರಕೃತಿ ಎತ್ತಿ ತೋರಿಸಿದಾಗ ನಾನು ದಿಗ್ಭ್ರಮೆಗೊಂಡಿದ್ದೆ.

ಇದರಿಂದಾಗಿ ಈ ಮಕ್ಕಳು ಹೇಗೆ ಕಥೆಯನ್ನು ಇಡಿಯಾಗಿ ಗ್ರಹಿಸುತ್ತಾರೆ ಎನ್ನುವುದನ್ನು ಮನಗಂಡೆ. ಇದು ನಮ್ಮ ನಾನ್-ಲೀನಿಯರ್ ನಿರೂಪಣೆ ಹೇಗೆ ಇಂದಿನ ಮಕ್ಕಳಿಗೆ ಅಂತರ್ಗತವಾಗಿಯೇ ಬರುತ್ತದೆ ಎನ್ನುವುದನ್ನು ನನಗೆ ತೋರಿಸಿಕೊಟ್ಟಿತು.

ಇನ್ನು ಕಥೆಯನ್ನೇ ನೋಡಿದರೆ, ಮಕ್ಕಳಿಗಾಗಿ ಒಂದು ಚಿತ್ರ ಮಾಡಬೇಕು ಎಂದು ಗೆಳೆಯ ಇಸ್ಮಾಯಿಲ್ ಹಾಗೂ ನಾನು ಯೋಚಿಸಿದಾಗ, ಕಥೆಯ ಒಟ್ಟೂ ಸ್ವರೂಪದ ಬಗ್ಗೆ ಒಂದಷ್ಟು ಯೋಚನೆ ಮಾಡಿದೆವು. ಮಕ್ಕಳ ಕಥೆ ಎಂದರೆ ಮಕ್ಕಳು ಇಂದು ಓದುತ್ತಿರುವ ಕಥೆಗಳಂತೆಯೇ ನಮ್ಮ ಕಥೆ ಇರಬೇಕು. ಅದರಲ್ಲಿನ ಮಾಯ, ವಿಸ್ಮಯ, ದರ್ಶನಗಳೆಲ್ಲವೂ ನಮ್ಮ ಚಿತ್ರದಲ್ಲಿ ಇರಬೇಕು ಎಂದುಕೊಂಡು ಆ ನಿಟ್ಟಿನಲ್ಲಿ ದುಡಿದೆವು.

ಹೀಗಾಗಿ ನಮ್ಮ ಚಿತ್ರದಲ್ಲಿ ಕ್ಯಾಮೆರಾ ಸಾಮಾನ್ಯವಾಗಿ ಮಕ್ಕಳ ಕಣ್ಣ ಎತ್ತರದಿಂದಲೇ ಜಗತ್ತನ್ನು ನೋಡುತ್ತಾ, ಅವರ ಸಾಧ್ಯತೆಗಳ ನೈಜ ವಿಸ್ತಾರದಲ್ಲೇ ಹೊಸತಾದ ಒಂದು ಜಗತ್ತನ್ನು ನೋಡುತ್ತಾ ಸಾಗಿತು. ಇದರಿಂದಾಗಿ ಗೋಡೆ ಹಾರಿದರೆ ಇನ್ನೊಂದೇ ಪ್ರಪಂಚಕ್ಕೆ ಹೋಗುವುದು, ಎಲ್ಲೆಲ್ಲೂ ಸಿಕ್ಕಿ ಜೀವತಳೆಯುವ ವಿಗ್ರಹ ಇತ್ಯಾದಿ ಸೃಷ್ಟಿಗಳು ನಮ್ಮ ಚಿತ್ರದೊಳಗೆ ಬರಲು ಸಾಧ್ಯವಾದವು. ಮುಂದೆ ಚಿತ್ರ ನಿರ್ಮಾಣವಾಗಿ ಅನೇಕ ಶಾಲೆಗಳಲ್ಲಿ ಚಿತ್ರವನ್ನು ಪ್ರದರ್ಶಿಸಿದಾಗ, ಮಕ್ಕಳು ಇವುಗಳನ್ನು ಸಹಜವಾಗಿ ಗುರುತಿಸಿ, ಒಪ್ಪಿಕೊಳ್ಳುವುದನ್ನು ಕಂಡಾಗ ನಮಗೆ ಗೆದ್ದ ಭಾವ!

‘ಗುಬ್ಬಚ್ಚಿಗಳು’ ಚಿತ್ರ, ನಿರ್ದೇಶಕನಾಗಿ, ಕಥೆಗಳನ್ನು ಹೇಳುವವನಾಗಿ ನನ್ನೊಳಗಿನ ಮಗುವಿನಂತೆ ಕಥೆ ಕಟ್ಟುವ, ಕಥೆ ಹೇಳುವ ತುಡಿತಕ್ಕೂ ಒಂದು ಅಭಿವ್ಯಕ್ತಿಯಾಗಿತ್ತು ಎನ್ನುವುದು ನನಗೆ ಇಂದು ಅನಿಸುತ್ತದೆ. ‘ಗುಬ್ಬಚ್ಚಿಗಳು’ ಸುಮಾರು ಆರು ತಿಂಗಳ ದುಡಿಮೆಯ ಫಲವಾಗಿ, ನಮ್ಮ ಅಂದಿನ ಅನುಭವದ ಪರಿಧಿಯೊಳಗೆ ಮೂಡಿಬಂತು, ಅದಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರಪ್ರಶಸ್ತಿಯೂ ದೊರೆಯಿತು.

ಮಗು ಮೊದಲ ಹೆಜ್ಜೆ ಇಟ್ಟಾಗ ಅರಳುವ ಹೆತ್ತವರ ಮುಖದಲ್ಲಿನ ನಗುವಿನಂತೆಯೇ ನಮ್ಮೊಳಗಿನ ಭಾವವೂ ಅರಳಿತು. ಮುಂದಿನ ಹೆಜ್ಜೆಗಳಿಗೆ ಇನ್ನಷ್ಟು ಬಲ ಸಿಕ್ಕಿತು. ಇಷ್ಟಕ್ಕೆಲ್ಲಾ ಅನುವು ಮಾಡಿದ ನನ್ನ ಮೊದಲ ಚಿತ್ರ ‘ಗುಬ್ಬಚ್ಚಿಗಳು’ ಎಂದೆಂದೂ ನನ್ನ ನೆನಪಿನಲ್ಲಿ ಚಿಂವ್ಚಿಂವ್ಎನ್ನುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.