ಭಾರತದ ಸಾಹಿತಿಗಳಿಗೆ ಕೊಡಮಾಡುವ ಉನ್ನತ ಪ್ರಶಸ್ತಿ ಜ್ಞಾನಪೀಠ. ಅದನ್ನು ಸ್ಥಾಪಿಸಿದ್ದು ಯಾರು?

1961ರಲ್ಲಿ ಸಾಹು ಶಾಂತಿಪ್ರಸಾದ್ ಜೈನ್ ಹಾಗೂ ಅವರ ಪತ್ನಿ ರಮಾ ಜೈನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಅವರು `ದಿ ಟೈಮ್ಸ ಆಫ್ ಇಂಡಿಯಾ~ದ ಪ್ರಕಾಶಕರು. ಭಾರತೀಯ ಜ್ಞಾನಪೀಠ ಎಂಬ ಟ್ರಸ್ಟ್ ಹುಟ್ಟುಹಾಕಿ ಜ್ಞಾನಪೀಠ ಪ್ರಶಸ್ತಿ ನೀಡುವ ಪರಿಪಾಠವನ್ನು ಅವರು ಪ್ರಾರಂಭಿಸಿದರು.

ಪ್ರಶಸ್ತಿಗೆ ಯಾರು ಅರ್ಹರು?

ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ ಭಾರತದ ಪೌರರೂ ಆಗಿರುವ ಸಾಹಿತಿ ಈ ಪ್ರಶಸ್ತಿ ಪರಿಗಣನೆಯ ವ್ಯಾಪ್ತಿಗೆ ಬರುತ್ತಾರೆ. ಮೊದಲು ಸಾಹಿತಿಗಳ ನಿರ್ದಿಷ್ಟ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಸಂದದ್ದು ಇದೆ. ಈಗ ದೀರ್ಘಕಾಲ ಅವರ ಬರವಣಿಗೆಯನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತದೆ.

ಮೊದಲ ಜ್ಞಾನಪೀಠ ಪ್ರಶಸ್ತಿ ಸಂದದ್ದು ಯಾರಿಗೆ?

ಮಲಯಾಳ ಸಾಹಿತಿ ಜಿ.ಸಂಕರ ಕುರುಪ್ ಮೊದಲ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ಒಡಕ್ಕುಳಲ್ (ಬಿದಿರಿನ ಕೊಳಲು) ಎಂಬ ಕವನ ಸಂಕಲನಕ್ಕೆ 1965ರಲ್ಲಿ ಅವರಿಗೆ ಪ್ರಶಸ್ತಿ ಸಂದಿತು.

ಪ್ರಶಸ್ತಿಯು ಏನೇನನ್ನು ಒಳಗೊಂಡಿರುತ್ತದೆ?

ಏಳು ಲಕ್ಷ ರೂಪಾಯಿ, ಬಿನ್ನವತ್ತಳೆ ಹಾಗೂ ಸರಸ್ವತಿಯ ಕಂಚಿನ ಮೂರ್ತಿಯನ್ನು ಪ್ರಶಸ್ತಿಯು ಒಳಗೊಂಡಿದೆ.

ಇತ್ತೀಚೆಗೆ ಯಾರಿಗೆ ಈ ಪ್ರಶಸ್ತಿ ಸಂದಿದೆ?

2009ನೇ ಸಾಲಿನ ಪ್ರಶಸ್ತಿಯು ಹಿಂದಿ ಸಾಹಿತಿಗಳಾದ ಅಮರ್‌ಕಾಂತ್ ಹಾಗೂ ಶ್ರೀಲಾಲ್ ಶುಕ್ಲಾ ಅವರಿಗೆ ಸಂದಿತು. 2010ರ ಪ್ರಶಸ್ತಿಯ ಗೌರವ ಕನ್ನಡದ ಸಾಹಿತಿ ಚಂದ್ರಶೇಖರ ಕಂಬಾರರದ್ದಾಯಿತು.

ಈ ವರ್ಷ ಜ್ಞಾನಪೀಠದ ಗೌರವಕ್ಕೆ ಒಂದು ಭಾಷೆಯ ಸಾಹಿತಿ ಆಯ್ಕೆಯಾಗುತ್ತಾರೆಂದಿಟ್ಟುಕೊಳ್ಳಿ. ಇನ್ನು ಮೂರು ವರ್ಷ ಆ ಭಾಷೆಯ ಯಾವ ಸಾಹಿತಿಯನ್ನೂ ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.