1776ರಿಂದ 1796ರವರೆಗೆ ಮೈಸೂರು ಸಂಸ್ಥಾನದ ಅರಸರಾಗಿದ್ದ ಎಂಟನೆಯ ಚಾಮರಾಜ ಒಡೆಯರು ರಚಿಸಿದ ‘ಶ್ರೀ ಚಾಮರಾಜೋಕ್ತಿವಿಲಾಸ ಎಂಬ ಕನ್ನಡ ರಾಮಾಯಣ’ ಕೃತಿ ಏಳು ಸಂಪುಟಗಳಲ್ಲಿದೆ.

ನಾಲ್ಮಡಿ ಕೃಷ್ಣರಾಜ ಒಡೆಯರ್ ವರ್ಧ್ಯಂತುತ್ಸವದ ಸಂದರ್ಭದ ಹಿನ್ನೆಲೆಯಲ್ಲಿ ಒಂಬತ್ತನೆಯ ಚಾಮರಾಜ ಒಡೆಯರ ಅಪ್ಪಣೆಯನ್ನು ಪಡೆದು, 1894ರಲ್ಲಿ ಮೊದಲು ಸುಂದರಕಾಂಡ (115 ಪುಟ), 1894 ರಲ್ಲಿಯೇ ಬಾಲಕಾಂಡ (105 ಪುಟ), 1-2-1895ರಲ್ಲಿ ಅಯೋಧ್ಯಾಕಾಂಡ (192 ಪುಟ), 3-6-1895ರಲ್ಲಿ ಅರಣ್ಯಕಾಂಡ (108 ಪುಟ), 1895ರಲ್ಲಿ ಕಿಷ್ಕಿಂಧಾಕಾಂಡ (106 ಪುಟ), 1-2-1896ರಲ್ಲಿ ಯುದ್ಧಕಾಂಡ (244 ಪುಟ), 21-6-1896ರಲ್ಲಿ ಉತ್ತರಕಾಂಡ (145 ಪುಟ)– ಈ ಕ್ರಮದಲ್ಲಿ ಏಳು ಸಂಪುಟಗಳನ್ನು ಮುದ್ರಿಸಲಾಯಿತು. ಡೆಮಿ ಆಕಾರದ ಒಟ್ಟು 1015 ಪುಟಗಳನ್ನೊಳಗೊಂಡ ಈ ಏಳರ ಒಂದೊಂದೂ ಸಂಪುಟಗಳ ತಲಾ ಸಾವಿರ ಪ್ರತಿಗಳನ್ನು ಬೆಂಗಳೂರಿನ ಎಂ. ರುದ್ರಪ್ಪ ಅಂಡ್ ಸನ್ ಅವರು ‘ಶ್ರೀಚಾಮುಂಡೇಶ್ವರಿ ಮುದ್ರಾಕ್ಷರಶಾಲೆ’ಯಲ್ಲಿ ಮುದ್ರಿಸಿ ಪ್ರಕಟಿಸಿರುತ್ತಾರೆ.

1796 ರಲ್ಲಿ ಸಿಡುಬು ರೋಗದಿಂದ ಮರಣ ಹೊಂದಿದ ಎಂಟನೆಯ ಚಾಮರಾಜ ಒಡೆಯರ್ ಅಥವಾ ಖಾಸಾ ಚಾಮರಾಜ ಒಡೆಯರ್ ಅವರನ್ನು ಹಿಂದಿನ ರಾಜರ ಮರಣಾನಂತರ ಹೈದರ್, ಈ ಒಡೆಯರ್ ಬಾಲಕ ಕತ್ತಿ ಮತ್ತು ನಿಂಬೆ ಹಣ್ಣನ್ನು ಆರಿಸಿಕೊಂಡಿದ್ದರಿಂದ ರಾಜರ ಉತ್ತರಾಧಿಕಾರಿ ಪಟ್ಟಕ್ಕೆ ಆರಿಸಿಕೊಂಡನು ಎಂಬುದು ಪ್ರತೀತಿ. ಈ ಚಾಮರಾಜ ಒಡೆಯರ್ ದತ್ತು ಪುತ್ರರೇ 1799ರಿಂದ 1831ರವರೆಗೆ ಅರಸರಾಗಿದ್ದ ಸುಪ್ರಸಿದ್ಧ ಮುಮ್ಮಡಿ ಕೃಷ್ಣರಾಜ ಒಡೆಯರು.

ರಾಮಾಯಣ ಜಗತ್ತಿನ ಆದಿಕಾವ್ಯವೆಂದು ಪ್ರಸಿದ್ಧ. ರಾಮಾಯಣಗಳ ಸಂಖ್ಯೆ ಅಪಾರ ಎನ್ನುವ ಪರಿಕಲ್ಪನೆ ಎಲ್ಲರಿಗೂ ತಿಳಿದದ್ದೇ ಆಗಿದೆ. ವಾಲ್ಮೀಕಿ ರಾಮಾಯಣ, ವಾಸಿಷ್ಠ ರಾಮಾಯಣ, ಅಧ್ಯಾತ್ಮ ರಾಮಾಯಣ, ಅದ್ಭುತ ರಾಮಾಯಣ, ಶೇಷ ರಾಮಾಯಣ, ಜೈನ ರಾಮಾಯಣ, ಬೌದ್ಧ ರಾಮಾಯಣ, ಜಾನಪದ ರಾಮಾಯಣ– ಇತ್ಯಾದಿ ಎಷ್ಟೋ ರಾಮಾಯಣಗಳಿವೆ. ‘ಇಳೆಯೊಳ್ ಎನಿತೋ ರಾಮಾಯಣಂಗಳ್ ಒಳವು’ ಎಂದು ಕನ್ನಡದ ಕವಿ ಮುದ್ದಣ ಹೇಳಿದ್ದಾನೆ. ಎ.ಕೆ. ರಾಮಾನುಜನ್ ಅವರ ‘ಥ್ರೀ ಹಂಡ್ರೆಡ್ ರಾಮಾಯಣಾಸ್’ (ಮುನ್ನೂರು ರಾಮಾಯಣಗಳು) ಎನ್ನುವ ಒಂದು ಪ್ರಸಿದ್ಧ ಲೇಖನವಿದೆ.

ಕುಮಾರವ್ಯಾಸನಂತೂ ‘ತಿಣಿಕಿದನು ಫಣಿರಾಯ ರಾಮಾ | ಯಣದ ಕವಿಗಳ ಭಾರದಲಿ ತಿಂ | ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಹಿಲ್ಲ ||’ ಎಂದು ರಾಮಾಯಣದ ಕವಿಗಳ ಹೆಚ್ಚಳದಿಂದ ಭೂಮಿಗೆ ಭಾರವಾಗಿ ಭೂಮಿಯನ್ನು ಹೊತ್ತ ಆದಿಶೇಷನಿಗೆ ಉಬ್ಬಸವುಂಟಾಯಿತೆಂದೂ ರಾಮಾಯಣ ಬರೆಯುವ ಕವಿಗಳಲ್ಲಿ ಅವಕಾಶವಿಲ್ಲದ್ದರಿಂದ ತಾನು ಮಹಾಭಾರತವನ್ನು ಬರೆದೆನೆಂದೂ ಹೇಳಿಕೊಂಡಿದ್ದಾನೆ. ಅರ್ಥಾತ್ ರಾಮಾಯಣವಲ್ಲದ ಕಾವ್ಯ ಬರೆಯಬೇಕಾದರೆ ಕಾರಣ ಹೇಳಬೇಕಿತ್ತು. ಇವಲ್ಲದೆ ದೇಶ ಭಾಷೆಗಳಲ್ಲೂ ರಾಮಾಯಣಗಳು ಹುಟ್ಟಿಕೊಂಡಿವೆ.

ತಮಿಳಿನ ‘ಕಂಬ ರಾಮಾಯಣ’, ಹಿಂದಿಯ ‘ತುಳಸಿದಾಸ್ ರಾಮಾಯಣ’ದ ಜತೆಗೆ ಕಳೆದ ಶತಮಾನದಲ್ಲಿ ಕನ್ನಡದಲ್ಲಿ ಕುವೆಂಪು ಅವರ ‘ರಾಮಾಯಣ ದರ್ಶನಂ’, ಡಿ.ವಿ.ಜಿ ಅವರ ‘ಶ್ರೀರಾಮ ಪರೀಕ್ಷಣಂ’, ತೆಲುಗು ಕವಿ ವಿಶ್ವನಾಥ ಸತ್ಯನಾರಾಯಣರ ‘ರಾಮಾಯಣ ಕಲ್ಪವೃಕ್ಷಮು’ ಹೆಸರುವಾಸಿಯಾದವು. ಹಳಗನ್ನಡದಲ್ಲಿ ನರಹರಿಯ ‘ತೊರವೆ ರಾಮಾಯಣ’, ಮುದ್ದಣನ ‘ಶ್ರೀರಾಮ ಪಟ್ಟಾಭಿಷೇಕ’, ‘ಅದ್ಭುತ ರಾಮಾಯಣಂ’ ಹಾಗೂ ‘ಶ್ರೀರಾಮಾಶ್ವಮೇಧಂ’ ಗದ್ಯಕಾವ್ಯಗಳು ಪ್ರಸಿದ್ಧವಾಗಿವೆ. ಹತ್ತೊಂಬತ್ತನೆಯ ಶತಮಾನದಲ್ಲಿ ವಿವಿಧ ರಾಮಾಯಣಗಳ ಗದ್ಯಾನುವಾದಗಳು ಹುಟ್ಟಿಕೊಂಡವು. ಆ ಸರಣಿಯಲ್ಲಿ ಚಾಮರಾಜ ಒಡೆಯರ ಈ ಏಳು ಸಂಪುಟಗಳ ‘ಕನ್ನಡ ರಾಮಾಯಣ’ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಈ ಸಂಪುಟಗಳನ್ನು ಮುದ್ರಿಸಿದ ಬೆಂಗಳೂರಿನ ಲಾಲ್ಬಾಗ್ ರೋಡ್ ಶ್ರೀಚಾಮುಂಡೇಶ್ವರಿ ಪ್ರೆಸ್ನ ಪ್ರೊಪ್ರೈಟರ್ಸ್ ಆದ ಎಂ. ರುದ್ರಪ್ಪ ಅಂಡ್ ಸನ್ ಅವರುಗಳು ಮೊದಲ ಸಂಪುಟ ಬಾಲಕಾಂಡದ ಪೀಠಿಕೆಯಲ್ಲಿ ಹೀಗೆ ಹೇಳಿದ್ದಾರೆ: ‘‘ಶ್ರೀಚಾಮರಾಜೋಕ್ತಿವಿಲಾಸವೆಂಬ ವಾಲ್ಮೀಕಿರಾಮಾಯಣದ ಕನ್ನಡ ಟೀಕು ಪೂರ್ವದ ಮೈಸೂರು ಮಹಾರಾಜರಾದ ಚಾಮರಾಜ ಒಡೆಯರವರಿಂದ ರಚಿಸಲ್ಪಟ್ಟು ಅರಮನೆ ಸರಸ್ವತಿ ಭಂಡಾರದಲ್ಲಿಡಲ್ಪಟ್ಟಿತ್ತು; ಇದನ್ನು ಮುದ್ರಿಸಿ ಪ್ರಕಟಿಸಲು ಆಳುವ ಶ್ರೀಮನ್ಮಹಾರಾಜರವರಾದ ಶ್ರೀಚಾಮರಾಜ ಒಡೆಯರ್ ಬಹದೂರ್ ಜಿ.ಸಿ.ಐ ಅವರುಗಳ ಅನುಜ್ಞೆಯನ್ನು ಪಡೆದು ಮೊದಲೇ ಸುಂದರಕಾಂಡವನ್ನು ಮುದ್ರಿಸಿ ಪ್ರಕಟಿಸಿದೆವು! ಈ ಬಾಲಕಾಂಡವನ್ನು ಈಗ ಪ್ರಕಟಿಸುತ್ತಿದ್ದೇವೆ; ಇನ್ನು ಮಿಕ್ಕಿರುವ ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಯುದ್ಧಕಾಂಡ, ಉತ್ತರಕಾಂಡಗಳೆಂಬ ಐದು ಕಾಂಡಗಳನ್ನೂ ಜಾಗ್ರತೆಯಲ್ಲೇ ಮುದ್ರಿಸಿ ಪ್ರಕಟಿಸುವೆವು.

ವ್ಯಾಸಕೃತಮಾದ ಭಾರತದ ಶ್ರೀಕೃಷ್ಣರಾಜ ವಾಣೀವಿಲಾಸವೆಂಬ ಕನ್ನಡದ ಟೀಕನ್ನು ನಾವು ಅತಿಪ್ರಯತ್ನದಿಂದ ಸಂಪೂರ್ಣವಾಗಿ ಮೊದಲ ಸಾರಿ ಪ್ರಕಟಿಸಿದೆವು; ಅದೇ ಪ್ರಕಾರದಲ್ಲಿ ಈಗ ವಾಲ್ಮೀಕಿ ರಾಮಾಯಣದ ಕನ್ನಡ ಟೀಕನ್ನೂ ಪ್ರಥಮತಃ ಮುದ್ರಿಸಿ ಪ್ರಕಟಿಸಲುಪಕ್ರಮಿಸಿದ್ದೇವೆ; ಇಂಥಾ ಉದ್ಯೋಗದಲ್ಲಿ ನಮಗೆ ಪೋಷಕರೂ ಉತ್ಸಾಹವುಂಟುಮಾಡುವವರೂ ಆಗಿರುವ ಶ್ರೀಮನ್ಮಹಾರಾಜರವರುಗಳಿಗೂ ದಿವಾನ್ ಬದೂರ್ ಸರ್ ಕುಮಾರಪುರಂ ಶೇಷಾದ್ರಿ ಅಯ್ಯರ್, ಕೆ.ಸಿ.ಎಸ್.ಐ, ಯವರುಗಳಿಗೂ ದರಬಾರ್ ಬಕ್ಷಿಯವರಾದ ರಾಯಬದೂರ್ ಅಂಬಿಲ್ ನರಸಿಂಹ ಅಯ್ಯಂಗಾರ್ರವರುಗಳಿಗೂ ಮುಜರಾಯಿ ಸೂಪರಿನ್ಟೆಂಡೆಂಟರಾದ ರಾಯಬಹದೂರ್ ಆರ್ಕಾಟ್ ಶ್ರೀನಿವಾಸಾಚಾರ್ಯರವರಿಗೂ ಅತ್ಯಂತ ಕೃತಜ್ಞತೆಯುಳ್ಳವರಾಗಿದ್ದೇವೆ.

ಈ ಬಾಲಕಾಂಡವನ್ನು ಪರಿಶೋಧಿಸುವುದರಲ್ಲಿ ನಮಗೆ ಸಹಾಯ ಮಾಡಿದ ಮll ಕೋಲಾರದ ರಾಮಾಶಾಸ್ತ್ರಿಗಳಿಗೂ ಚಿಕ್ಕಮಗಳೂರ್ ಗವರ್ನಮೆಂಟ್ ಪಾಠಶಾಲೆಯ ಪಂಡಿತರಾದ ಮll ರಾಘವೇಂದ್ರಾಚಾರ್ಯರವರಿಗೂ ವಂದಿಸುತ್ತೇವೆ’’.

ಆ ಕಾಲಘಟ್ಟದಲ್ಲಿನ ಶೃಂಗೇರಿ ಶ್ರೀಶ್ರೀಗಳ ಪರವಾಗಿ ಮಠದ ಶ್ರೀಕಂಠೇಶ್ವರ ಎನ್ನುವವರು ರುದ್ರಪ್ಪನವರಿಗೆ ಚಾಮರಾಜರ ಮಹಾಭಾರತ ಸಂಪುಟಗಳನ್ನು ಕುರಿತು ಹೀಗೆ ಬರೆದಿರುತ್ತಾರೆ: ‘‘ಶ್ರೀಜಗದ್ಗುರು ಮಹಾಸ್ವಾಮಿಯವರ ಸನ್ನಿಧಿಗೆ ನೀವು ಒಪ್ಪಿಸಿದ, ಕನ್ನಡದಿಂದ ಟೀಕಿಸಿ ಇರುವ ಮಹಾಭಾರತದ ಪುಸ್ತಕಗಳನ್ನು ಶ್ರೀಮಹಾಸ್ವಾಮಿಗಳವರು ಪರಾಂಬರಿಸಿ ತುಂಬಾ ಆನಂದಿಸಿ ಇರುವರಲ್ಲದೆ, ಈ ಕಾಲದಲ್ಲಿ ಸಕಲ ಜನರಿಗೂ ಅನುಕೂಲವಾಗಿಯೂ ನಿರಾಯಾಸವಾಗಿ ತಿಳಿದುಕೊಳ್ಳುವುದಕ್ಕೆ ಉಪಯೋಗವಾಗಿಯೂ ಮಾಡಿರತಕ್ಕ ಈ ಕಾರ್ಯವನ್ನು ತುಂಬಾ ಶ್ಲಾಘನೀಯ ಮತ್ತು ಅತ್ಯಂತ ಶ್ರೇಯಸ್ಕರವಾಗಿರುತ್ತೆಂದು ಅಪ್ಪಣೆ ಕೊಡಿಸಿ ಇರುತ್ತಾರೆ’’.

ಜಗತ್ಪ್ರಸಿದ್ಧರಾದ ಮೆll ಆನಿಬೆಸೆಂಟ್ ಎಂಬ ಆಂಗ್ಲೇಯ ದೊರೆಸಾನಿಯವರು ಮಹಾಭಾರತ ಸಂಪುಟಗಳನ್ನು ಕುರಿತು ಬರೆದಿರುವ ಪತ್ರ: ‘‘ಮಹಾರಾಜರವರಿಗೆ ಫಲಪುಷ್ಪ ಸರಬರಾಯಕರಾದ ಮೆll ಎಂ. ರುದ್ರಪ್ಪನವರಿಗೆ, ಪ್ರಿಯರಾದ ಅಯ್ಯಾ, ಈ ಕೆಲಸಗಳಲ್ಲಿಯೂ ಮತ್ತು ಇಂಥಾ ಭೂಷಣಪಾತ್ರವಾದ ಉದ್ಯೋಗಗಳಲ್ಲಿಯೂ ನಿಮಗೆ ಜಯವುಂಟಾಗುವ ಹಾಗೆ ಅಪೇಕ್ಷಿಸುತ– ನಿಮಗೆ ಸದ್ಭಾವವುಳ್ಳ, ಆನ್ನೀ ಬೆಸ್ಸಾಂಟ್’’.

1796ಕ್ಕೆ ಮುಂಚೆ ರಚಿತವಾದ ಒಟ್ಟು 646 ಅಧ್ಯಾಯಗಳ 1015 ಪುಟಗಳ ಈ ಏಳು ಸಂಪುಟಗಳು ಹಸ್ತಪ್ರತಿಯ ರೂಪದಲ್ಲಿ ೧೮೬೭ರ ಹೊತ್ತಿಗೆ ಅರಮನೆಯ ಗ್ರಂಥಭಂಡಾರದಲ್ಲಿತ್ತೆಂದು ಶ್ರೀನಿವಾಸ ಹಾವನೂರರು ಉಲ್ಲೇಖಿಸುತ್ತಾರೆ. ರಚನೆಗೊಂಡ ಸುಮಾರು ಒಂದು ನೂರು ವರ್ಷಗಳ ನಂತರ ಪ್ರಕಟಗೊಂಡ ಕೀರ್ತಿಗೆ ಈ ಕೃತಿಯು ಭಾಜನವಾಗಿದೆ.

ಮೊದಲನೆಯ ಸಂಪುಟವಾದ ‘ಬಾಲಕಾಂಡ’ದಲ್ಲಿ ವಾಲ್ಮೀಕಿಯು ರಾಮಾಯಣವನ್ನು ರಚಿಸಿದ ಪ್ರಕಾರವು ಎನ್ನುವ ಎರಡನೆಯ ಅಧ್ಯಾಯದಲ್ಲಿ ಬರುವ ಪ್ರಸಿದ್ಧವಾದ ಶ್ಲೋಕ ‘ಮಾನಿಷಾದಪ್ರತಿಷ್ಠಾಂತ್ವ ಮಗಮಶ್ಯಾಸ್ವತೀಸ್ಸಮಾಃ ಯತ್ಕ್ರೌಂಚಮಿಥುನಾದೇಕ ಮವಧೀಕಾಮಮೋಹಿತಂ’. ವಾಲ್ಮೀಕಿಮುನಿ ಕಿರಾತನನ್ನು ನೋಡಿ ಹೇಳುವ ಈ ಶ್ಲೋಕಕ್ಕೆ ಚಾಮರಾಜರು ಎರಡು ಅರ್ಥ ನಿಡುತ್ತಾರೆ.

1. ಎಲೈ ಕಿರಾತನೆ, ಯಾವ ಕಾರಣವೂ ಇಲ್ಲದೆ ಹೆಣ್ಣುಗಂಡಾದ ಕ್ರೌಂಚಪಕ್ಷಿಗಳೆರಡೂ ಕಾಮಮೋಹಿತಗಳಾಗಿ ವಿರಮಿಸಿಕೊಂಡು ಆನಂದದಲ್ಲಿರುವಾಗ ಪುರುಷಪಕ್ಷಿಯನ್ನು ಕೊಂದೆಯಲ್ಲಾ! ಆದಕಾರಣ ನೀನು ಬಹುಕಾಲಪರ್ಯಂತರ ಪ್ರತಿಷ್ಠೆಯನ್ನು ಹೊಂದಲಾರೆ!

2. ಎಲೈ ಲಕ್ಷ್ಮೀದೇವಿಗೆ ಆವಾಸಸ್ಥಾನವಾದ ರಘುನಾಥನೇ, ನೀನು ಕ್ರೌಂಚಪಕ್ಷಿಗಳ ಹಾಗೆ ಕೂಡಿರುವ ರಾವಣ ಮಂಡೋದರಿಗಳಲ್ಲಿ ಅತಿಕಾಮುಕನಾದ ರಾವಣನನ್ನು ಕೊಂದು ಜಗತ್ತಿನಲ್ಲಿ ಬಹುಕಾಲಪರ್ಯಂತರ ಪ್ರತಿಷ್ಠೆಯನ್ನು ಪಡೆಯಲುಳ್ಳವನು!

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬಹುದು. ೧೮೨೩ರಲ್ಲಿ ‘ಮುದ್ರಾಮಂಜೂಷ’ವನ್ನು ರಚಿಸಿದ ಕೆಂಪುನಾರಾಯಣನಿಗಿಂತ ಮುಂಚೆಯೇ ಅರ್ಥಾತ್ 18ನೆಯ ಶತಮಾನದಲ್ಲಿಯೇ ಈ ಕೃತಿ ರಚನೆಗೊಂಡಿದೆ. ಹೀಗಾಗಿ ಈ ‘ಕನ್ನಡ ರಾಮಾಯಣ’ವು ಕನ್ನಡ ಸಾಹಿತ್ಯದ ಕುಮಾರವ್ಯಾಸೋತ್ತರ ಯುಗದಲ್ಲಿ ಒಂದು ಮಹತ್ವದ ಗದ್ಯಗ್ರಂಥವಾಗಿದೆ. ಇಲ್ಲಿನ ಕನ್ನಡ ಗದ್ಯ ಭಾಷೆಯ ನಡಿಗೆ ‘ಮುದ್ರಾಮಂಜೂಷ’ಕ್ಕಿಂತ ಸರಳವಾಗಿಯೂ ಸಲೀಸಾಗಿಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.