ನವದೆಹಲಿ: ರಾಷ್ಟ್ರೀಯ ಕ್ರೀಡಾಡಳಿತ ಮಸೂದೆ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ (ತಿದ್ದುಪಡಿ) ಮಸೂದೆ (2025)ಗಳು ದಿನದ ಕಲಾಪ ಪಟ್ಟಿಯಲ್ಲಿ ಆದ್ಯತೆ ಪಡೆದಿದ್ದರೂ ಅವು ಗಳನ್ನು ಲೋಕಸಭೆಯಲ್ಲಿ ಮಂಡಿಸಲು ಸರ್ಕಾರ ಒಲವು ತೋರಿಸಲಿಲ್ಲ.

ಈ ಎರಡು ಮಸೂದೆಗಳನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಲು ಸಂಸದೀಯ ಸಮಿತಿಗೆ ಒಪ್ಪಿಸಬೇಕೆಂದು ವಿರೋಧ ಪಕ್ಷಗಳು ಸ್ಪೀಕರ್ ಓಂ ಬಿರ್ಲಾ ಅವರನ್ನು ಕೇಳಿದ ಕಾರಣ ಸರ್ಕಾರ ಈ ನಿಲುವು ತಳೆಯಿತು.

‘ವಿರೋಧ ಪಕ್ಷಗಳ ಮನವಿಯ ಮೇರೆಗೆ’ ಸರ್ಕಾರ ಮಸೂದೆಗಳನ್ನು ಮಂಡಿಸಲು ಮುಂದಾಗಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಗೆ ತಿಳಿಸಿದರು.

ಆದರೆ ಇವುಗಳನ್ನು ಸಂಸದೀಯ ಸಮಿತಿಗೆ ಪರಿಶೀಲನೆಗೆ ಒಳಪಡಿಸುವ ಬಗ್ಗೆ ರಿಜಿಜು ಅವರು ಭರವಸೆ ನೀಡಲಿಲ್ಲ.

ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯಲ್ಲಿ ಆರ್ಟಿಐಗೆ ಸಂಬಂಧಿ ಸಿದ ನಿಯಮದಲ್ಲಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ಸರ್ಕಾರದಿಂದ ಅನುದಾನ ಮತ್ತು ನೆರವು ಪಡೆಯುವ ಕ್ರೀಡಾ ಫೆಡರೇಷನ್ಗಳು ಮಾತ್ರ ಆರ್ಟಿಗೆ ವ್ಯಾಪ್ತಿಗೆ ಬರಲಿವೆ. ತಿದ್ದುಪಡಿಯಾದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆರ್ಟಿಐ ಪರಿಧಿಯಿಂದ ಹೊರಬರಲಿದೆ.

ಇದಕ್ಕೆ ಮೊದಲು, ವಿರೋಧ ಪಕ್ಷಗಳ ನಾಯಕರು ಸ್ಪೀಕರ್ ಅವರನ್ನು ಭೇಟಿ ಮಾಡಿ, ರಾಷ್ಟ್ರೀಯ ಮಹತ್ವದ ಈ ಎರಡೂ ಮಸೂದೆಗಳನ್ನು ಮಂಡಿಸುವ ಮೊದಲು ಒಮ್ಮತ ಮೂಡಿಸುವ ಅಗತ್ಯವಿದೆ. ಹಾಗಾಗಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಒತ್ತಾಯಿಸುವ ಪತ್ರ ನೀಡಿದರು.

ಕಾಂಗ್ರೆಸ್ನ ಕೆ.ಸಿ.ವೇಣುಗೋಪಾಲ್, ಎನ್ಸಿಪಿಯ (ಎಸ್ಪಿ) ಸುಪ್ರಿಯಾ ಸುಳೆ, ತೃಣಮೂಲ ಕಾಂಗ್ರೆಸ್ನ ಕಾಕೋಲಿ ಘೋಷ್, ಡಿಎಂಕೆಯ ಕನಿಮೋಳಿ ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಪಿಟಿಐ ವರದಿ: ಕ್ರೀಡಾ ಆಡಳಿತ ಮಸೂದೆ ಯನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಜುಲೈ 23ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆಯ ನಿಯಮ 15 (2)ರ ಪ್ರಕಾರ ಮಾನ್ಯತೆ ಪಡೆದ ಎಲ್ಲ ಕ್ರೀಡಾ ಸಂಸ್ಥೆ
ಗಳೂ, ಸಾರ್ವಜನಿಕ ಸಂಸ್ಥೆಗಳಾಗಲಿದ್ದು, ಅದರ ಕರ್ತವ್ಯ, ಅಧಿಕಾರ ಚಲಾವಣೆ ಎಲ್ಲವೂ 2005ರ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಬರಬೇಕಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹಿಂದಿನಿಂದಲೂ ಆರ್ಟಿಐ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸುತ್ತ ಬಂದಿದೆ. ಇತರ ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಂತೆ ತಾನು ಸರ್ಕಾರದ ಯಾವುದೇ ಅನುದಾನದ ಮೇಲೆ ಅವಲಂಬಿತವಾಗಿಲ್ಲ ಎಂದು ಮಂಡಳಿಯು ವಾದಿಸುತ್ತ ಬಂದಿದೆ.

ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್) ಆಗಿ ನೋಂದಾಯಿಸಿಕೊಳ್ಳಬೇಕಾಗು
ತ್ತದೆ. ಕ್ರಿಕೆಟ್ ಒಲಿಂಪಿಕ್ ಕ್ರೀಡೆಯಾಗ
ಲಿರುವ ಕಾರಣ ಬಿಸಿಸಿಐಗೂ ಈ ನಿಯಮ ಅನ್ವಯಿಸಲಾಗುತ್ತಿದೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಟಿ20 ಕ್ರಿಕೆಟ್ ಪರಿಚಯಿಸಲಾಗುತ್ತಿದೆ.

ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್ಎಸ್ಬಿ) ಸ್ಥಾಪನೆಯ ಪ್ರಸ್ತಾವವೂ ಈ ಮಸೂದೆಯಲ್ಲಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳ ಮಾನ್ಯತೆ, ಅವುಗಳಿಗೆ ಉತ್ತರದಾಯಿತ್ವ, ಕ್ರೀಡಾ
ಸಂಸ್ಥೆಗಳ ಪದಾಧಿಕಾರಿಗಳ ವಯಸ್ಸು ಮತ್ತು ಅವಧಿಯ ಮಿತಿ ಬದಲಾವಣೆ, ವ್ಯಾಜ್ಯಗಳ ಪರಿಹಾರ ವಿಷಯವು ಮಂಡ ಳಿಯ ಅಧಿಕಾರ ವ್ಯಾಪ್ತಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.