ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ಭವಭೂತಿಯ ನಾಟಕಗಳ ದರ್ಶನ

ಭವಭೂತಿಯ ಭಾವಚಿತ್ರಗಳು ಪುಸ್ತಕ
Published 22 ಜೂನ್ 2024, 19:33 IST
Last Updated 22 ಜೂನ್ 2024, 19:33 IST
ಅಕ್ಷರ ಗಾತ್ರ

ನಾಟಕ ವಿಜ್ಞಾನ ಕುರಿತ ಜಿಜ್ಞಾಸೆ ಎಂಬ ಅಡಿಟಿಪ್ಪಣಿ ಇರುವ ಈ ಪುಸ್ತಕ, ಭವಭೂತಿಯ ನಾಟಕಗಳೊಂದಿಗೆ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ನಾಟಕ ಓದದ ಓದುಗರಿಗೆ ಸಣ್ಣದೊಂದು ಟ್ರೇಲರ್‌ ನೀಡಿದರೆ, ಓದಿದವರಿಗೆ ಮರು ಓದಿನ ಸುಖವನ್ನೂ ಪಾತ್ರಗಳೊಂದಿಗೆ ಮತ್ತೊಮ್ಮೆ ಮುಖಾಮುಖಿಯಾಗುವ ಅವಕಾಶವನ್ನೂ ಒದಗಿಸಿಕೊಡುತ್ತದೆ. ಭವಭೂತಿಯ ನಾಟಕಗಳನ್ನು ದರ್ಶನ ಮಾಡಿಸುವಂಥ ಕೃತಿ ಇದು.

ಸಂಸ್ಕೃತ ನಾಟಕಕಾರನ ಸಾರ್ವಕಾಲಿಕ ಗುಣವನ್ನು ತರ್ಕದ ಮೂಸೆಗೆ ಒಡ್ಡುತ್ತಲೇ ಮನುಷ್ಯನ ಮೂಲಗುಣಗಳನ್ನೂ ಇಲ್ಲಿ ಚರ್ಚೆಗೆ ತರಲಾಗುತ್ತದೆ. ಈ ಕಾರಣದಿಂದಲೇ ಭವಭೂತಿಯ ಪಾತ್ರಗಳ ಪರಿಚಯ ಆಗಲಿ ಎಂಬ ಆಸೆ ಓದುಗನಲ್ಲಿ ಸಹಜವಾಗಿಯೇ ಮೂಡುತ್ತದೆ. ನಾಟಕಗಳ ತಂತ್ರಗಳನ್ನು ಚರ್ಚಿಸುತ್ತಲೇ ನಾಟಕದ ಆಶಯ ಮತ್ತು ಮೂಲ ಉದ್ದೇಶಗಳನ್ನೂ ಚರ್ಚಿಸುವುದರಿಂದ ಭವಭೂತಿಯ ಪರಿಚಯ ಓದುಗರಿಗೆ ಸಾದ್ಯಂತವಾಗಿಯೇ ಆಗುತ್ತ ಹೋಗುತ್ತದೆ.

ನಾಟಕಗಳ ಓದಿಗಿಂತಲೂ ನಾಟಕಗಳ ಕುರಿತ ಈ ಲೇಖನಗಳೇ ಹೆಚ್ಚು ರುಚಿಸುವಷ್ಟು ಅಚ್ಚುಕಟ್ಟಾಗಿದೆ ಈ ಜಿಜ್ಞಾಸೆ. ಇನ್ನು ಲೇಖಕ ಒಪ್ಪಿಕೊಳ್ಳುವಂತೆ ಕೆಲವು ವಿಷಯಗಳು ಪುನರಾವರ್ತನೆ ಆದಂತೆ ಆನಿಸಿದರೂ, ಅವು ಆಯಾ ಲೇಖನಕ್ಕೆ ಪೂರಕವಾಗಿಯೇ ಇರುವುದರಿಂದ, ಪ್ರತಿ ಸಲವೂ ಹೊಸ ಹೊಳಹಿನೊಂದಿಗೆ ಆಯಾ ಲೇಖನಗಳಲ್ಲಿ ಕಾಣಿಸಿಕೊಳ್ಳುವುದರಿಂದ ಓದಿನ ಓಘಕ್ಕೆ ಕಿರಿಕಿರಿ ಎನಿಸದು. ಒಂದು ಓದು, ಇನ್ನಷ್ಟು ಓದಿಗೆ ಪ್ರಚೋದಿಸುವಂಥ ಪುಸ್ತಕ.

ಭವಭೂತಿಯ ಭಾವಚಿತ್ರಗಳು ಲೇ: ಅಕ್ಷರ ಕೆ.ವಿ.ಪ್ರ: ಬಹುವಚನ ಸಂ: 9035220992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT