ಅಭಿನವ ಪ್ರಕಾಶನಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ‘ಬೆಳ್ಳಿ ಬೆಗಡು ಮಾಲಿಕೆ’ಯಡಿ ಹೊರತಂದ ಹತ್ತನೆಯ ಕೃತಿ ಇದು. ಲೇಖಕರು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕ ಮಹತ್ವದ ವ್ಯಕ್ತಿಗಳ ಜತೆ ನಡೆಸಿದ ಮಾತುಕತೆಯ ಸಂಪುಟವಿದು. ಇದರಲ್ಲಿರುವ ಮಹತ್ವದ ವ್ಯಕ್ತಿಗಳ ಪೈಕಿ ಕುಸುಮಾಕರ ದೇವರಗೆಣ್ಣೂರ, ಜಿ.ಎಸ್. ಶಿವರುದ್ರಪ್ಪ, ಪಿ.ಎಸ್.ಪಾಟೀಲ, ಢೆರೆ, ಅಸಘರಲಿ, ಶಾಂತರಸ, ಕೋ. ಚೆನ್ನಬಸಪ್ಪ ಹಾಗೂ ಎಂ.ಎಂ. ಕಲಬುರ್ಗಿ ಅಗಲಿದ್ದಾರೆ. ಲೇಖಕರು ಹೇಳಿರುವಂತೆಪ್ರತಿ ಮಾತುಕತೆಯೂ ಆಯಾ ವ್ಯಕ್ತಿಯ ವಿಶಿಷ್ಟ ಚಿಂತನೆ, ಸಾಧನೆ ಮತ್ತು ಪರಿಮಿತಿಗಳ ಬಿಂಬವಾಗಿದೆ. ಸಿದ್ಧ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸುವ ವಿಧಾನಕ್ಕಿಂತ ಅವರು ನೀಡಿದ ಉತ್ತರದೊಳಗಿನಿಂದಲೇ ಹೊಸ ಪ್ರಶ್ನೆ ಹುಟ್ಟಿಸಿ ಮಾತುಕತೆಯನ್ನು ಬಳ್ಳಿಯಂತೆ ಬೆಳೆಸಿರುವುದು ಓದಿನ ಓಘಕ್ಕೆ ಹಿತವೆನಿಸುತ್ತದೆ. ದಾರ್ಶನಿಕ ಗ್ರಹಿಕೆ, ಜ್ಞಾನಶಾಸ್ತ್ರ, ಸಾಹಿತ್ಯ, ನಾಗರಿಕತೆ ಹಾಗೂ ಮನುಕಲ ಕುರಿತ ಚಾಚು, ಅಷ್ಟೇ ಏಕೆ, ರಾಜಕಾರಣದ ಚರ್ಚೆ, ಸಾಮಾಜಿಕ ಚಿಂತನೆ, ಭಾಷೆ ಮತ್ತು ಕಲಾ ಮೀಮಾಂಸೆಯ ಹೊಳವುಗಳು ಓದಿಗೆ ದಕ್ಕುತ್ತವೆ.

ಹದಿನೈದು ಮಂದಿ ನ್ಯಾಯನಿಷ್ಠುರಿಗಳ ಜತೆಗಿನ ಮಾತುಕತೆಗಳು ಅನುಭವ, ನೆನಪು, ಆಲೋಚನೆ ಹಾಗೂ ಕಾಣ್ಕೆಯಿಂದ ತುಂಬಿದ ಕಣಜಗಳಂತಿವೆ.

ನ್ಯಾಯನಿಷ್ಠುರಿಗಳ ಜತೆಯಲ್ಲಿ ಹದಿನೈದು ಮಾತುಕತೆಗಳು

ಲೇ:ರಹಮತ್ ತರೀಕೆರೆ

ಪ್ರ: ಅಭಿನವ

ಮೊ: 94488 04905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.