ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಈಡಿಗ ಸಮುದಾಯದ ಸಾಧಕರ ಕಥನ

Published 18 ಫೆಬ್ರುವರಿ 2024, 0:28 IST
Last Updated 18 ಫೆಬ್ರುವರಿ 2024, 0:28 IST
ಅಕ್ಷರ ಗಾತ್ರ

ಸಾಂಸ್ಕೃತಿಕವಾಗಿ, ರಾಜಕೀಯ, ವ್ಯವಹಾರಿಕ, ಕೃಷಿ ಕ್ಷೇತ್ರದಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಈಡಿಗ ಸಮುದಾಯದ ಅದಮ್ಯ ಚೇತನಗಳ ಬದುಕು ಮತ್ತು ಸಾಧನೆಗಳ ಕುರಿತ ‘ಈಡಿಗ ಸಮುದಾಯದ ಮರೆಯಲಾಗದ ಮಹನೀಯರು’ ಕೃತಿಯನ್ನು ಸುಜಯಾ ಸುರೇಶ್ ಸಂಪಾದಿಸಿದ್ದಾರೆ.

ಈಡಿಗರ ಮೂಲ, ರೇಣುಕಾ ಯಲ್ಲಮ್ಮನ ಆರಾಧನೆ, ಮಹಾಶರಣ ಹೆಂಡದ ಮಾರಯ್ಯನವರ ಇತಿಹಾಸ, ಬಿಲ್ಲವರ ಅವಳಿ ವೀರರಾದ ಕೋಟಿ ಚೆನ್ನಯ್ಯರ ಹೋರಾಟ, ತಳ ಸಮುದಾಯಗಳ ಏಳಿಗೆಗೆ ದುಡಿದ ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರುಗಳು, ರಾಜರ ಕಾಲದ ಪೈಲ್ವಾನರಾದ ಪೈಲ್ವಾನ್ ಪಾಪಯ್ಯ, ಕೋರಾಪೀಟ್ ಶ್ರೀಕಂಠ ಅವರ ಕುರಿತ ಬರಹಗಳು ಇದರಲ್ಲಿ ದಾಖಲಾಗಿವೆ.

‘ಪ್ರಜಾವಾಣಿ’ ಪತ್ರಿಕೆಯ ಸಂಸ್ಥಾಪಕರಾದ ಇದೇ ಸಮುದಾಯದ ಕೆ.ಎನ್. ಗುರುಸ್ವಾಮಿ ಹಾಗೂ ಪತ್ರಿಕೆ ಬೆಳೆದುಬಂದ ಹಾದಿಯನ್ನೂ ದಾಖಲಿಸಲಾಗಿದೆ. ಸಾಂಸ್ಕೃತಿಕ ಕ್ಷೇತ್ರದ ಮೇರುಪರ್ವತ ಡಾ. ರಾಜಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ಕುರಿತ ಬರಹದ ಜತೆಗೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜೀವನ ಸಾಧನೆ ಒಳಗೊಂಡ ಬರಹಗಳನ್ನು ಹಲವಾರು ಲೇಖಕರು ಬರೆದಿದ್ದಾರೆ.

ಆಧುನಿಕ ಭಾರತದ ಸರ್ಕಸ್ ಪಿತಾಮಹ ಜೆಮಿನಿ ಶಂಕರನ್, ಎಚ್‌ಸಿಎಲ್ ಕಂಪನಿಯ ಸಂಸ್ಥಾಪಕ ಶಿವ ನಾಡರ್, ಇನ್ಫೊಸಿಸ್‌ನ ಎಸ್‌.ಡಿ. ಶಿಬುಲಾಲ್ ಸೇರಿದಂತೆ ದೇಶದೆಲ್ಲೆಡೆ ಪಸರಿಸಿರುವ ಈಡಿಗ ಸಮುದಾಯದ ಹಲವು ಮಹನೀಯರ ಪರಿಚಯ ಮತ್ತು ಯಶೊಗಾಥೆ ಈ ಕೃತಿಯಲ್ಲಿದೆ.

ಈಡಿಗ ಜನಾಂಗದ ಮರೆಯಲಾಗದ ಮಹನೀಯರು

ಸಂ: ಸುಜಯ ಸುರೇಶ್

ಪ್ರ: ಶ್ರೀ ವೆಂಕಟಾದ್ರಿ ಪಬ್ಲಿಕೇಷನ್ಸ್

ಸಂ: 84315 60031

ಪು: 696

ಬೆಲೆ: ₹ 600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT