ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಪ್ರೀತಿಗೆ ಹಂಬಲಿಸಿದವರ ಕಥೆ

Published 27 ಏಪ್ರಿಲ್ 2024, 23:33 IST
Last Updated 27 ಏಪ್ರಿಲ್ 2024, 23:33 IST
ಅಕ್ಷರ ಗಾತ್ರ

ಪ್ರೀತಿಸಿ ಮದುವೆಯಾದ ಜೋಡಿಗಳ ನೈಜ ಘಟನೆಗಳ ಒಳಗೊಂಡ ಕೃತಿ ಎಂಬ ಅಡಿಟಿಪ್ಪಣಿಯ ಈ ಪುಸ್ತಕದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಪತ್ರಕರ್ತ ನಾಗೇಶ ಹೆಗಡೆ ಅವರನ್ನೂ ಒಳಗೊಂಡಂತೆ ಹಲವರ ಪ್ರೇಮಕತೆಗಳಿವೆ. ಆದರೆ ಕತೆ ಕಟ್ಟುವಿಕೆಯಲ್ಲಿ ನಿರೂಪಕರು ತಮ್ಮ ಪಾತ್ರದಿಂದ ಕಥಾನಕದ ನಾಯಕನ ಪಾತ್ರಕ್ಕೂ, ನಾಯಕಿಯ ಪಾತ್ರಕ್ಕೂ ಹೇಗೆ ಪ್ರವೇಶಿಸುತ್ತಾರೆ ಎಂಬ ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೆ ಈಡು ಮಾಡುತ್ತದೆ. ಓದುವಾಗ.. ಯಾರು ಈ ಕತೆ ಹೇಳಿದರು ಎಂದು ತಿಳಿಯಲು ಮತ್ತೆ ಓದಿ, ಅರ್ಥ ಮಾಡಿಕೊಳ್ಳಬೇಕಾಗುತ್ತದೆ. 

ಮಾತು ಬಾರದವರ ಮೌನ ನಲುಮೆ, ದೂರದೂರಿನಲ್ಲಿ ಅಕ್ಷರ ಕಲಿಸುತ್ತಲೇ ಅಕ್ಕರೆಗೆ ಕರಗಿದವರು, ವ್ಯವಸ್ಥೆಯ ವಿರುದ್ಧ ರೋಸಿ ಹೋದವರಲ್ಲಿ ಹುಟ್ಟಿದ ಪ್ರೀತಿ ಇಂಥ ಹಲವಾರು ಕಥನಗಳು ಗಮನಸೆಳೆಯುತ್ತವೆ. ಇಂದಿವರ್‌ ಅವರ ಗೀತೆ, ಹೋಂಟೊಸೆ ಛೂಲೊ ತುಮ್‌ ಹಾಡಿನಲ್ಲಿ ಒಂದು ಸಾಲಿದೆ.. ನಾ ಉಮ್ರ್‌ ಕಿ ಸೀಮಾ ಹೋ.. ನ ಜನ್ಮ್‌ ಕಾ ಹೋ ಬಂಧನ್‌, ಜಬ್‌ ಪ್ಯಾರ್‌ ಕರೆ ಕೋಯಿ ತೋ ದೇಖೆ ಕೇವಲ್‌ ಮನ್ (ವಯಸ್ಸಿನ ಸೀಮೆ ಇಲ್ಲದ, ಜಾತಿಯ ಬಂಧನವಿಲ್ಲದೆ, ಪ್ರೀತಿಸುವುದಾದರೆ ಬರೀ ಮನ ನೋಡಲಿ...) ಎಂಬರ್ಥದ ಸಾಲು ಆಗಾಗ ಗುನುಗುವಂತಾಗುತ್ತದೆ. ಸೀಮೆಯಿರದ ಪ್ರೀತಿಯ ಕಥನಗಳಲ್ಲಿ ಜಗದ ಜಾತಿ ಬಲಕ್ಕಿಂತಲೂ ಒಲವೇ ಹೆಚ್ಚು ಸಲ ಗೆದ್ದಿದೆ. 

ಆದರೆ, ಕಥಾ ನಿರೂಪಣೆಯಲ್ಲಿ ಭಾವತೀವ್ರತೆಯ ಕೊರತೆ ಕಂಡುಬರುತ್ತದೆ. ಪುಸ್ತಕ ಪ್ರಕಟಣೆಗೆ ಹೋಗುವ ಮುನ್ನ, ಇನ್ನೊಮ್ಮೆ ಓದಿದ್ದರೆ ಮುದ್ರಣ ದೋಷಗಳ ಸಂಖ್ಯೆಯೂ ಕಡಿಮೆ ಆಗಿರುತ್ತಿತ್ತು. ಅಲ್ಲಲ್ಲಿ ಅಲ್ಪಪ್ರಾಣ, ಮಹಾಪ್ರಾಣಗಳು, ಹ್ರಸ್ವ, ದೀರ್ಘಗಳು ಅಕ್ಷರಪಲ್ಲಟಗಳು ಗೊಂದಲ ಮೂಡಿಸುತ್ತವೆ. ನಿರೂಪಣಾ ತಂತ್ರದಲ್ಲಿ ಕತೆ ಹೇಳುತ್ತಿದ್ದರೂ, ಅಲ್ಲಲ್ಲಿ ನಿರೂಪಕರೂ ಇಣುಕುತ್ತಾರೆ. ಇಂಥ ಗೊಂದಲವನ್ನು ಬಗೆಹರಿಸಿದರೆ ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ ಇದಾಗಬಹುದಿತ್ತು. ಪ್ರೀತಿಯಿಂದಲೇ ಬದುಕು ಕಟ್ಟಿಕೊಂಡವರು ಈಗ ಕತೆಯಂತೆ ಹೇಳುತ್ತಿದ್ದಾರೆ. ಆ ಕ್ಷಣದ ಆತಂಕ, ಆಘಾತಗಳು ಅವರು ಜೀರ್ಣಿಸಿಕೊಂಡ ಬಗೆ ಇನ್ನೂ ಮನತಟ್ಟುತ್ತಿತ್ತು.  ಅಕ್ಷರಗಳ ಗಾತ್ರ ಆರಾಮದಾಯಕ ಓದನ್ನು ನೀಡುತ್ತವೆ. ಮುದ್ರಣ ದೋಷ ನಿವಾರಿಸಿದರೆ ಒಂದು ವಿರಾಮದ ಓದನ್ನು ಕೊಡುತ್ತಿತ್ತು.

ಕಾಗೆ ಮೇಷ್ಟ್ರು
ಕಾಗೆ ಮೇಷ್ಟ್ರು

Cut-off box - ಪ್ರೀತಿಯ ಹಂಬಲಿಸಿ ಲೇ: ಉಜ್ಜನಿ ರುದ್ರಪ್ಪ ಪ್ರ: ಉರು ಪ್ರಕಾಶನ ಸಂ: 9901503180

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT