ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಕಥೆಯೊಂದಿಗೆ ಪ್ರಕೃತಿ ದರ್ಶನ

Published 28 ಅಕ್ಟೋಬರ್ 2023, 23:31 IST
Last Updated 28 ಅಕ್ಟೋಬರ್ 2023, 23:31 IST
ಅಕ್ಷರ ಗಾತ್ರ

ಅರಸಿಕೆರೆಯ ಅಬ್ಬೆಪಾರಿಯೊಬ್ಬನ ಕಥೆಯನ್ನು ಹೊಂದಿರುವ ಕಾದಂಬರಿ ‘ಅಬ್ಬೆ’. ‘ಇದೊಂದು ಆತ್ಮಕಥಾನಕ ಸ್ವರೂಪದ ಕಥನ. ಕೃತಿಯಲ್ಲಿ ನಿರೂಪಣೆ ಉತ್ತಮಪುರುಷದಲ್ಲಿದ್ದರೂ ಕಥಾ ಹಂದರ ಕಾಲ್ಪನಿಕ. ಬರುವ ಕೆಲವು ಊರುಗಳು, ಬೆಟ್ಟ,ಗುಡ್ಡಗಳು ವಾಸ್ತವಕ್ಕೆ ಹತ್ತಿರವಿದ್ದರೂ ಪಾತ್ರಗಳು ಕಾಲ್ಪನಿಕ’ ಎಂದು ಲೇಖಕ ಶಶಿಧರ ಹಾಲಾಡಿ ಪ್ರಾರಂಭದಲ್ಲಿಯೇ ಹೇಳುತ್ತಾರೆ.

ವ್ಯಕ್ತಿಯೊಬ್ಬನ ನೈಜ ಕಥೆಯಂತೆ ನಿರೂಪಣೆ ಸಾಗುತ್ತದೆ. ‘ಕಟ್ಟು ಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಹಾಲಾಡಿಯವರ ಕಥನ ಕಲೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಮನದಟ್ಟಾಗುತ್ತದೆ. ಅಬ್ಬೆ ಜೇಡ, ಫ್ಲಾಮಿಂಗೋ ಹಕ್ಕಿಗಳು, ಕಲ್ಕೆರೆಯ ಕೆರೆ ಏರಿಯ ಮರದಲ್ಲಿ ಗೂಡು ಕಟ್ಟಿಕೊಂಡಿರುವ ಕೊಕ್ಕರೆಗಳಂತಹ ಸಾಕಷ್ಟು ಪ್ರಾಣಿ, ಪಕ್ಷಿಗಳು, ಬೆಟ್ಟ–ಗುಡ್ಡಗಳ ವಿವರಣೆ ಕಥೆಯ ಜೊತೆಗೆ ಸಿಗುತ್ತದೆ’ ಎಂದು ಬೆಳಗೋಡು ರಮೇಶ ಭಟ್ಟರು ಕೃತಿಯ ಬೆನ್ನುಡಿಯಲ್ಲಿ ಬರೆಯುತ್ತಾರೆ.  ಸರಳ ಕಥೆಯೊಂದಿಗೆ ಸಾಕಷ್ಟು ಮಾಹಿತಿ ಒಳಗೊಂಡಿರುವ ಕೃತಿಯಿದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT