ಸ್ತ್ರೀವಾದವೆಂಬುದು ದ್ವೀಪವಲ್ಲ. ಅದರ ಸೂಕ್ಷ್ಮಗಳು ಎಲ್ಲಾ ಬಗೆಯ ಎಲ್ಲೆಗಳನ್ನು ಮೀರಿವೆ. ಪ್ರತಿ ಮನುಷ್ಯನ ಅಂತರಂಗವು ಸ್ವಾತಂತ್ರ್ಯದ ದೀಪದಲ್ಲಿ ಬೆಳಗುತ್ತದೆ. ಲಿಂಗದ ಕಾರಣಕ್ಕಾಗಿ ಹೇರುವ ಆಲೋಚನೆಗಳಿಂದ ಮುಕ್ತಗೊಳ್ಳುವುದೇ ಸ್ತ್ರೀವಾದ. ಇದರ ಇನಿಯನ್ನು ಇಸಬೆಲ್ ಅಯೆಂದೆ ಅವರ ಜೀವದನಿ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇದನ್ನು ಎಂ.ಆರ್.ಕಮಲ ಅವರು ಬಹಳ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.

ಗಂಡಸರಿಗೆ ಇರುವ ಅನುಕೂಲಗಳು ಎಲ್ಲ ಕಾಲಕ್ಕೂ ಹೆಂಗಸರಿಗೆ ಮುಗಿಲ ಮಲ್ಲಿಗೆಯೇ. ಕಾಲಚಕ್ರ ಉರುಳುತ್ತಲಿದ್ದರೂ, ನದಿಯ ನೀರು ಬದಲಾಗುತ್ತಿದ್ದರೂ ಈ ಅನುಕೂಲಗಳ ವ್ಯಾಪ್ತಿ ತೃಪ್ತಿಕರ ರೀತಿಯಲ್ಲಿ ಹಿಗ್ಗಿಲ್ಲ ಎಂಬುದನ್ನು ಗಮನಿಸಬೇಕು.

ತಾಯಿಯ ಅಸಹಾಯಕತೆ, ಅಜ್ಜನ ನಿಷ್ಠುರ ನಡವಳಿಕೆಯನ್ನು ಕಂಡು ಬೆಳೆದ ಇಸಬೆಲ್ ಅಯೆಂದೆ ಪುರುಷಾಧಿಕಾರ ವಿರುದ್ಧ ಬಂಡಾಯ ಏಳುವ, ಅದನ್ನು ಅರಗಿಸಿಕೊಳ್ಳುತ್ತಲೇ ತನ್ನ ಬದುಕನ್ನು ಮಟ್ಟಸವಾಗಿ ರೂಪಿಸಿಕೊಳ್ಳುವ ಕಥೆಯನ್ನು ಬಹಳ ಸರಳವಾಗಿ ಹೇಳುತ್ತಾ ಹೋಗಿದ್ದಾರೆ. ಇದು ಆತ್ಮಕತೆಯಾಗಿದ್ದರೂ ಪ್ರತಿ ಪುಟವು ಹಲವು ಹೊಳಹುಗಳಿಂದ, ಸ್ತ್ರೀಪರ ಚಿಂತನೆಗಳಿಂದ ಓದುಗರನ್ನು ಹಿಡಿದಿಡುತ್ತದೆ.

ಸ್ತ್ರೀವಾದವೆಂಬುದು ಗಂಡಸರನ್ನು ದ್ವೇಷಿಸುವ ವಿಷಯದಂತೆ ವ್ಯಾಖ್ಯಾನಿಸಿರುವ ಬಗ್ಗೆ ಇಸಬೆಲ್ ಅವರು ಆಕ್ಷೇಪ ವ್ಯಕ್ತಪಡಿಸುತ್ತಲೇ, ಸ್ತ್ರೀವಾದ ಸಾಗರದಂತೆ ದ್ರವರೂಪ ಹಾಗೂ ಅಷ್ಟೆ ಶಕ್ತಿಯುತ ಹಾಗೂ ಆಳವಾದದ್ದು. ಬದುಕಿನ ಅನಂತ ಸಂಕೀರ್ಣತೆಯನ್ನು ಅವರಿಸಿಕೊಳ್ಳುವಂಥದ್ದು. ಮೌನವಾಗಿ ನಾವೆಂದೂ ಉಳಿಯದಂತೆ ಮಾಡುವುದೇ ಸ್ತ್ರೀವಾದ ಎನ್ನುವ ಖಚಿತ ಅಭಿಪ್ರಾಯವನ್ನು ಇಸೆಬೆಲ್ ಹೇಳುವ ಮೂಲಕ ಓದುಗರನ್ನು ಚಿಂತನೆಗೆ ಒಳಪಡಿಸುತ್ತಾರೆ. ಕನ್ನಡದ ಮಟ್ಟಿಗೆ ಇದು ಅಪರೂಪದ ಆತ್ಮಕತೆಯ ನಿರೂಪಣೆಯಾಗಿದೆ.

ಜೀವದನಿ

ಅನು: ಎಂ.ಆರ್. ಕಮಲ

ಪ್ರ : ಅಮೂಲ್ಯ ಪ್ರಕಾಶನ

ಸಂ: 9448676770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.