ಕುವೆಂಪು ಸೃಜನಶೀಲ ಧ್ಯಾನದಲ್ಲಿ ಅನುಸಂಧಾನ ಮಾಡುತ್ತಲೇ ಸರ್ವರ ಏಳಿಗೆಗೆ ತಮ್ಮ ಚಿಂತನೆಯನ್ನು ವಿಸ್ತರಿಸಿದವರು. ‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ’ ಎಂಬ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ನೀಡಿದವರು. ಸೃಜನಶೀಲ ಸಾಹಿತ್ಯದ ಜೊತೆ ಭಾಷಣ ಮತ್ತು ಗದ್ಯ ಬರಹಗಳ ಮೂಲಕ ಜಡ್ಡುಗಟ್ಟಿದ ವ್ಯವಸ್ಥೆಗೆ ಚಲನಶೀಲ ಶಕ್ತಿ ನೀಡಿ ಬದಲಾವಣೆಯನ್ನು ಬಯಸಿದವರು. ಅವರ ಕೆಲವು ವೈಚಾರಿಕ ಬರಹಗಳನ್ನು ಬರಗೂರು ರಾಮಚಂದ್ರಪ್ಪ ಸಂಪಾದಿಸಿ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ರೂಪಿಸಿದ್ದಾರೆ.

ಕುವೆಂಪು ಚಿಂತನೆಯನ್ನು ಆಂದೋಲನದ ರೀತಿಯಲ್ಲಿ ಪ್ರಚಾರ ಮಾಡುವ ಯೋಚನೆ ಈ ಕೃತಿಯ ಹಿಂದೆ ಇದೆ. ದೀರ್ಘ ಪ್ರಸ್ತಾವನೆಯನ್ನು ಬರೆದಿರುವ ಬರಗೂರು ‘ವಿಶ್ವಕವಿ’ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಜಗತ್ತಿನ ಎಲ್ಲರಿಗೂ ಅಗತ್ಯ ಇದೆ ಎನ್ನುವುದನ್ನು ನಿರೂಪಿಸುತ್ತಾರೆ. ವಿಶ್ವ ದ್ವೇಷ, ಹಿಂಸೆ, ಭ್ರಷ್ಟಾಚಾರ ಮಾತ್ರವಲ್ಲದೆ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ವೈಚಾರಿಕ ಪ್ರಜ್ಞೆಯ ಅಗತ್ಯ ಇದೆ. ಆ ನಿಟ್ಟಿನಲ್ಲಿ ಕುವೆಂಪು ವಿಚಾರ ಸಾಹಿತ್ಯ ಮಾರ್ಗದರ್ಶಿ ಆಗಬಲ್ಲದು ಎನ್ನುವುದು ಸಂಪಾದಕರ ಆಶಯ.

ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದ ಭಾಷಣ ‘ವಿಚಾರ ಕ್ರಾಂತಿಗೆ ಆಹ್ವಾನ’, ಶ್ರೀರಂಗಪಟ್ಟಣದಲ್ಲಿ 1938ರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿದ ಭಾಷಣ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಒಳಗೊಂಡು ‘ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ’, ‘ಸಂಸ್ಕೃತಿ ಕರ್ನಾಟಕ’ ಮೊದಲಾದ ಎಂಟು ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಬೇರೆ ಬೇರೆ ಸಂದರ್ಭದಲ್ಲಿ ಬರೆದ ಭಾಷಣ ಮತ್ತು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

ಕುವೆಂಪು ವಿಚಾರ ಕ್ರಾಂತಿ

ಸಂ: ಬರಗೂರು ರಾಮಚಂದ್ರಪ್ಪ

ಪ್ರ: ಜನ ಪ್ರಕಾಶನ

ಸಂ: 9632329955

ಪು: 112

ಬೆ: ₹100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.