ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ಮಾನವತೆಯ ಮಾರ್ಗದಾತ– ‘ಅಂಬೇಡ್ಕರ್‌’ ಚಿಂತನೆಯ ಸಾರ

Published : 15 ಸೆಪ್ಟೆಂಬರ್ 2024, 1:22 IST
Last Updated : 15 ಸೆಪ್ಟೆಂಬರ್ 2024, 1:22 IST
ಫಾಲೋ ಮಾಡಿ
Comments

ಭಾರತ ಭಾಗ್ಯವಿಧಾತ ಅಂಬೇಡ್ಕರ್‌ ಬಹುದೊಡ್ಡ ಪ್ರತಿಮೆ. ಬಾಬಾಸಾಹೇಬರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅವರ ಕುರಿತು ಲೇಖಕರು  ಜ್ಞಾನಿ ಅಂಬೇಡ್ಕರ್‌ ಅವರ ಚಿಂತನೆಯ ಬಹುಮುಖವನ್ನು ಪರಿಚಯಿಸಿದ್ದಾರೆ. ಸಾಹಿತ್ಯ, ಚರಿತ್ರೆ, ದಾರ್ಶನಿಕ ಪರಂಪರೆಯನ್ನು ಸ್ಮರಿಸುವ ಮೂಲಕ ಅಂಬೇಡ್ಕರ್‌ ಚಿಂತನೆ ಮರೆತರೆ ಭಾರತಕ್ಕೆ ಭವಿಷ್ಯ ಇಲ್ಲ ಎಂಬ ಸ್ಪಷ್ಟ ನಿಲುವನ್ನು ಲೇಖಕರು ‘ಬಹುತ್ವ ಭಾರತದ ನೈತಿಕ ಪ್ರಶ್ನೆಗಳು’ ಎಂಬ ಅಧ್ಯಾಯದಲ್ಲಿ ನಿರೂಪಿಸಿದ್ದಾರೆ.

‘ಪೂನಾ ಒಪ್ಪಂದ’ದಲ್ಲಿ ನಿಮ್ನ ವರ್ಗಗಳೂ ಸೇರಿ ಸಮಾಜದ ಎಲ್ಲ ವರ್ಗಗಳಿಗೂ ಪ್ರತ್ಯೇಕ ಮತಕ್ಷೇತ್ರಗಳನ್ನು ಬ್ರಿಟಿಷ್‌ ಸರ್ಕಾರ ರೂಪಿಸುತ್ತದೆ. ಹಿಂದೂಗಳಿಂದ ನಿಮ್ನವರ್ಗವನ್ನು ಬೇರ್ಪಡಿವುದನ್ನು ವಿರೋಧಿಸಿ ಮಹಾತ್ಮ ಗಾಂಧೀಜಿ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೂರುತ್ತಾರೆ. ಸತ್ಯಾಗ್ರಹ ಹಿಂದಕ್ಕೆ ತೆಗೆದುಕೊಳ್ಳಲು ಅಂಬೇಡ್ಕರ್‌–ಗಾಂಧೀಜಿ ಈ ಒಪ್ಪಂದ ಏರ್ಪಡುತ್ತದೆ. ಆನಂತರ ಸಮಾಜವನ್ನು ಉದ್ದೇಶಿಸಿ ಅಂಬೇಡ್ಕರ್‌ ‘ಒಪ್ಪಂದ ನನಗೆ ಸಮಾಧಾನ ತಂದಿದೆ. ಆದರೆ ಮನಸ್ಸಿಗೆ ಅದು ಸಂತೋಷವನ್ನು ತಂದಿಲ್ಲ; ಸಂಕಟವೊಂದು ತಿಳಿಯಾಗಿ ಬಗೆಹರಿಯಿತೆಂಬ ತೃಪ್ತಿ ಇದೆಯಾದರೂ ನನ್ನ ಕರ್ತವ್ಯವನ್ನು ಸಾಧಿಸುವಲ್ಲಿ ವಿಫಲನಾಗಿದ್ದೇನೆ’ ಎಂದು ಹೇಳುತ್ತಾರೆ.

ರಾಜಕೀಯ ಅಧಿಕಾರವೇ ಸಮಾಜದ ಬದಲಾವಣೆಯ ಕೀಲಿಕೈ ಎನ್ನುವುದನ್ನು ಪ್ರತಿಪಾದಿಸುವ ಅಂಬೇಡ್ಕರ್‌ ಮಂದಿರ ಪ್ರವೇಶಕ್ಕಿಂತ ಶಾಸನ ಸಭೆ ತಮ್ಮ ಆದ್ಯತೆ ಎನ್ನುವುದನ್ನು ಹೇಳಿದ್ದೂ ಒಂದು ಚಾರಿತ್ರಿಕ ಸಂದರ್ಭ. ಕೇರಳದ ಗುರುವಾಯೂರಿನ ಮಂದಿರ ಪ್ರವೇಶ ಅಸ್ಪೃಶ್ಯರಿಗೆ ಕಲ್ಪಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಳಪ್ಪನ್‌ ಘೋಷಿಸುತ್ತಾರೆ. ಅವರನ್ನು ಸಂಪರ್ಕಿಸಿದ ಅಂಬೇಡ್ಕರ್‌ ‘ಅಸ್ಪೃಶ್ಯರಿಗೆ ಇಂದು ತುರ್ತಾಗಿ ಬೇಕಾಗಿರುವುದು ಮಂದಿರ ಪ್ರವೇಶದ ಹಕ್ಕಲ್ಲ. ರಾಜಕೀಯ ಪ್ರಾತಿನಿಧ್ಯವನ್ನು ಪಡೆದುಕೊಳ್ಳುವ ಹಕ್ಕು’ ಎಂದು ಪ್ರತಿಪಾದಿಸುತ್ತಾರೆ ಎಂಬ ಅಂಶವನ್ನು ದಾಖಲಿಸುತ್ತಾರೆ. ಹೀಗೆ ಒಟ್ಟು 32 ಅಧ್ಯಾಯಗಳನ್ನು ಈ ಕೃತಿ ಒಳಗೊಂಡಿದೆ.

ಮಾನವತೆಯ ಮಾರ್ಗದಾತ ಲೇ:ಅಪ್ಪಗೆರೆ ಸೋಮಶೇಖರ್‌ ಪ್ರ: ಚಿಂತನ ಚಿತ್ತಾರ ಮೈಸೂರು ಸಂ: 9945668082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT