ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ಮಾಯಾ ಗುಹೆ ಮತ್ತು ಇತರ ಕತೆಗಳು– ಮಕ್ಕಳಿಗೆ ಆಪ್ತವಾಗುವ ಕತೆಗಳು

ಮಾಯಾ ಗುಹೆ ಮತ್ತು ಇತರ ಕತೆಗಳು– ಲೇಖಕಿ– ನವ್ಯಾ ಆರ್‌.ಕತ್ತಿ
Published : 15 ಸೆಪ್ಟೆಂಬರ್ 2024, 1:11 IST
Last Updated : 15 ಸೆಪ್ಟೆಂಬರ್ 2024, 1:11 IST
ಫಾಲೋ ಮಾಡಿ
Comments

ಮಗುವೊಂದು ಮಕ್ಕಳ ಕತೆ ಬರೆದರೆ ಹೇಗಿರುತ್ತದೆ? ತನ್ನ ಕಲ್ಪನಾಶಕ್ತಿಗೆ ಅಕ್ಷರಗಳ ರೆಕ್ಕೆ ನೀಡಿ, ಹೀಗೊಂದು ಊರಲ್ಲಿ ಅಂತ ಶುರುವಾಗುವ ಕತೆಯಲ್ಲಿ ಚಂದಮಾಮಾದ ಕತೆಯಂತೆ ನಾಯಿ, ಬೆಕ್ಕುಗಳೂ ಮಾತಾಡತೊಡಗುತ್ತವೆ. ಸರಳ ವಾಕ್ಯ, ಸರಳ ಪದಗಳು. ಮಕ್ಕಳು ಓದಿ ಮುಗಿಸಬಹುದಾದ ಕತೆಗಳು. 

ಮಕ್ಕಳಷ್ಟೆ ಅಲ್ಲ, ದೊಡ್ಡವರು ಓದಿದರೂ ಒಂದರೆ ಕ್ಷಣ ತಮ್ಮ ಬಾಲ್ಯಕ್ಕೆ ಮರಳುವಂತಿವೆ. ಕತೆಗೆ ತಕ್ಕಂತಹ ಆಕರ್ಷಕ ಚಿತ್ರಗಳು, ಪುಸ್ತಕದ ಗಾತ್ರ ಎಲ್ಲವೂ ಮಕ್ಕಳನ್ನು ಗಮನದಲ್ಲಿರಿಸಿಕೊಂಡೇ ವಿನ್ಯಾಸಗೊಳಿಸಲಾಗಿದೆ.  

ಕತೆಗಳಲ್ಲಿಯೂ ತನಗೆ ಗೊತ್ತಿರುವ ಊರುಗಳನ್ನೇ ಬರೆದಿರುವ ನವ್ಯಾ, ತಾನಿರುವ ಆಲಮೇಲ, ತನ್ನ ಹತ್ತಿರದ ತಾರಾಪೂರ ಹೀಗೆ ಸುತ್ತಲಿನ ಊರುಗಳನ್ನೇ ಬಳಸಿಕೊಂಡಿದ್ದಾಳೆ. ರಾಜ, ರಾಣಿ, ಪ್ರಾಣಿ, ದೆವ್ವ, ದೇವತೆ, ಗಿಡ, ನದಿ, ಕಾಡು ಎಲ್ಲವೂ ಕಥಾ ವಸ್ತುಗಳಾಗಿವೆ. ಕತೆಯ ಪಾತ್ರಗಳಾಗಿವೆ. 

ಪುಟ್ಟ ಪುಟ್ಟ ಕತೆಗಳಿದ್ದು, ಇನ್ನೂ ಇದೆಯಾ ಎನ್ನುವಾಗಲೇ ಕತೆ ಮುಗಿದು ಹೋಗುತ್ತವೆ. ಓದುವ ಮಗುವಿಗೂ ಕತೆ ಹಿಗ್ಗಲಿಸುವ ಅವಕಾಶವೂ ನೀಡಿದಂತಿದೆ ಈ ಕಥಾ ಸಂಕಲನ. 

ಮಾಯಾ ಗುಹೆ ಮತ್ತು ಇತರ ಕತೆಗಳು ಲೇ: ನವ್ಯಾ ಆರ್‌.ಕತ್ತಿ ಪ್ರ: ವೀರಲೋಕ ಪ್ರಕಾಶನ ಸಂ: 7022122121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT