ಲೇಖಕರು ಬೆಳೆದ ಪರಿಸರ, ಅನುಭವಿಸಿದ ಬದುಕು ಮತ್ತು ವೃತ್ತಿ ಬದುಕಿನಲ್ಲಿ ಕಂಡ ಕಥೆಗಳ ಬುತ್ತಿ ಈ ಕೃತಿ. ಅನುಭವಗಳನ್ನು ಕಥನ ರೂಪದಲ್ಲಿ ಲೇಖಕರು ಹೇಳುತ್ತಾ ಹೋಗಿದ್ದಾರೆ. ಹೀಗಾಗಿ ಲೇಖಕರ ಜೊತೆಯಲ್ಲೇ ನಿಂತು ಈ ಘಟನೆಗಳನ್ನು ಓದುಗರೂ ಅನುಭವಿಸುವಂತೆ ಬರವಣಿಗೆಯಿದೆ. ಪಶುವೈದ್ಯ ‘ಕರೆಂಟ್ ಡಾಕ್ಟ್ರು’ ಆಗಿದ್ದು ಹೇಗೆ?, ಹೀಟ್‌ಗೆ ಬಂದ ‘ನಾಚಿಕೆ ಎಮ್ಮೆ’ಯ ಪುರಾಣ... ಹೀಗೆ 17 ಅಧ್ಯಾಯಗಳಲ್ಲಿ ಕಥೆಯ ರೀತಿ ಅನುಭವಗಳಿವೆ. ಚಾಮರಾಜನಗರ ಜಿಲ್ಲೆಯ ಹಳ್ಳಿ ಮೂಲೆಗಳ ಜನರೂ ಜಾನುವಾರುಗಳೂ ಆನೆಗಳೂಜಾನುವಾರು ಜಾತ್ರೆಗಳೂ ಅಲ್ಲಿ ಸುಳಿಯುವ ರಾಜಕೀಯವೂ (ಈಗಲೂ ಅಲ್ಲಲ್ಲಿ ಕಾಣುವುದು) ಇಲ್ಲಿ ಚಿತ್ರಿತವಾಗಿವೆ. ಪಶುವೈದ್ಯನೊಬ್ಬನಿಗೆ ಜನಜೀವನವನ್ನು ಹತ್ತಿರದಲ್ಲೇ ನೋಡುವ, ಅಂತಃಕರಣದ ಕಣ್ಣನ್ನು ತೆರೆದು ನೋಡುವ ಅಗಾಧ ಅವಕಾಶ ಇಲ್ಲಿದೆ ಎಂಬುದನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ.