ಪಶುವೈದ್ಯ ವೃತ್ತಿಯಿಂದ ಸಂಶೋಧನೆ, ಅಧ್ಯಾಪನದಿಂದ ತಮ್ಮ ಬದುಕನ್ನು ಡಾ.ಎನ್.ಬಿ. ಶ್ರೀಧರ ವಿಸ್ತಾರ ಮಾಡಿಕೊಂಡಿದ್ದಾರೆ. ಅದರ ಅನುಭವ ಕಥನವನ್ನು ವಿನೋದ ಶೈಲಿಯಲ್ಲಿ ಬಿಡಿ ಬಿಡಿಯಾಗಿ ರಚಿಸಿದ ಪ್ರಬಂಧಗಳನ್ನು ‘ಪಶುವೈದ್ಯನ ಪಯಣ’ ಕೃತಿಯಲ್ಲಿ ಸಂಕಲಿಸಿದ್ದಾರೆ. ವೈದ್ಯರನ್ನು ಹಳ್ಳಿಯಲ್ಲಿ ಅಪಾರ ಗೌರವಿಸಿದರೂ ಕೆಲಸದ ಒತ್ತಡ ಮತ್ತು ಸೌಲಭ್ಯಗಳ ಕೊರತೆಯಿಂದ ಪಶುಪಾಲಕರ ನಿರೀಕ್ಷೆಯನ್ನು ಮುಟ್ಟಲು ಆಗದೆ, ಅವರು ಎದುರಿಸಿದ ತೊಳಲಾಟವೂ ಇಲ್ಲಿ ನವಿರಾಗಿ ಅರಳುತ್ತದೆ.

ಲೇಖಕರು ಪಶುವೈದ್ಯಕೀಯ ಪದವಿ ಅಧ್ಯಯನಕ್ಕೆ ಸೇರುವುದೇ ಒಂದು ಪವಾಡ. ಪಿಯುಸಿ ನಂತರ ಏನು ಓದಬೇಕು ಎನ್ನುವ ನಿಶ್ಚಿತ ಯೋಜನೆ ಇರದ ಕಾರಣ ಬಿ.ಎಸ್ಸಿ (ಭೌತಶಾಸ್ತ್ರ) ಸೇರುತ್ತಾರೆ. ಅಲ್ಲಿಂದ ಕೃಷಿ ವಿಜ್ಞಾನ, ಅದನ್ನೂ ಬಿಟ್ಟು ಎಂಜಿನಿಯರಿಂಗ್ ಸೇರುತ್ತಾರೆ. ಪ್ರಗತಿಪರ ರೈತ ವೆಂಕಟರಮಣ ಮುದ್ದೆಪಾಲ್ ಅವರ ಸೂಚನೆಯಂತೆ ಪಶುವೈದ್ಯಕೀಯ ಪದವಿಗೆ ಸೇರುತ್ತಾರೆ. ಈ ವಿವರವನ್ನು ‘ನಾನು ಹೇಗೆ ಪಶುವೈದ್ಯನಾದೆ?’ ಎಂಬ ಪ್ರಬಂಧದಲ್ಲಿ ವಿವರಿಸುತ್ತಾರೆ. ನಂತರ ಅವರು ಡಾಕ್ಟರೇಟ್ (ಪಿ.ಎಚ್ಡಿ) ಪದವಿಯನ್ನು ಪಡೆಯುತ್ತಾರೆ.

‘ದನ ಕಾಯುವ ಕೆಲಸ’ ಶ್ರೀಧರ ಅವರ ಅನುಭವ ಕಥನದ ಮೊದಲ ಬರಹ. ಇದರಲ್ಲಿ ಶಾಲಾ ದಿನಗಳ ಸ್ಥಿತಿಗತಿಯನ್ನು ಪರಿಚಯಿಸುವ ಜೊತೆಗೆ ತಮ್ಮ ಮನೆತನದ ಕೃಷಿ ಕಸುಬಿಗೆ ನೆರವಾಗುತ್ತಿದ್ದ ಬಗೆಯನ್ನು ಹೇಳಿದ್ದಾರೆ. ಪಶುವೈದ್ಯರಾದ ಮೇಲೆ ಜಾನುವಾರುಗಳ ನಿಗೂಢ ಕಾಯಿಲೆಗಳನ್ನು ಗುರುತಿಸಿ ಉಪಚರಿಸುತ್ತಾರೆ. ಈ ವಿವರವನ್ನು ತಿಳಿದ ಕಲಾವಿದ ಬಸವರಾಜ ಬೆಣ್ಣಿ ‘ಡಾಕ್ಟರ್ ಶ್ರೀಧರ್ ಅವರು 8ನೇ ತರಗತಿ ಓದುವಾಗಲೂ ದನ ಕಾಯುತ್ತಿದ್ದರು. ಈಗಲೂ ಸಹ ದನ ಕಾಯುತ್ತಿದ್ದಾರೆ’ ಎಂದು ಪ್ರಶಂಸಿಸಿದ ಹಾಸ್ಯ ಪ್ರಸಂಗವನ್ನು ಇಲ್ಲಿ ಸ್ಮರಿಸುತ್ತಾರೆ.

‘ಆಪರೇಷನ್ ಸಕ್ಸಸ್ ಪೇಷಂಟ್...’, ‘ರೈತರಾ ಇವರು?’ ‘ಒಂದು ಬಾವಿಯ ಕಥೆ’, ‘ಜನಿವಾರದಿಂದ ಜಾನುವಾರು ರಕ್ಷಣೆ!’, ‘ನಾಡಿಗೆ ಬಂದ ಕಾಡುಕೋಣ’, ‘ದನಕ್ಕೆ ಇಂಜೆಕ್ಷನ್ ಚುಚ್ಚುವವರೆಲ್ಲ ಡಾಕ್ಟರುಗಳಲ್ಲ’ ಎಂಬ ಪ್ರಬಂಧಗಳೂ ಸೇರಿದಂತೆ 44 ಬರಹಗಳನ್ನು ಈ ಸಂಕಲನ ಒಳಗೊಂಡಿದೆ. ವಿಸ್ತಾರವಾದ ಅನುಭವ ಜನ್ಯ ಸೃಜನಶೀಲತೆ ಇಲ್ಲಿ ಸ್ಫುರಿಸಿದೆ. ಇಲ್ಲಿನ ರಚನೆಗಳು ಪಶುಪಾಲಕರು ಮತ್ತು ಪಶುವೈದ್ಯರಿಗೆ ಮಾರ್ಗದರ್ಶನ ನೀಡುವಂತೆ ಇವೆ.

ಪಶುವೈದ್ಯನ ಪಯಣ

ಲೇ: ಡಾ. ಎನ್.ಬಿ. ಶ್ರೀಧರ

ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್

ಫೋ: 080–22161900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.